• Slide
  Slide
  Slide
  previous arrow
  next arrow
 • ಭಾರತ-ಚೀನಾ ಗಡಿಯಲ್ಲಿನ ಯೋಧರಿಗೆ ನಿರಾಯುಧ ಕದನ ತರಬೇತಿ

  300x250 AD

  ನವದೆಹಲಿ: ಭಾರತ-ಚೀನಾ ಗಡಿಯಲ್ಲಿ ಕಾವಲು ಕಾಯುತ್ತಿರುವ ಭಾರತೀಯ ಸೈನಿಕರು ಈಗ ಶಸ್ತ್ರಾಸ್ತ್ರಗಳಿಲ್ಲದೆ, ಅಂದರೆ ನಿರಾಯುಧ ಕದನ ಅಥವಾ ಕೈಯಿಂದಲೇ ಶತ್ರುಗಳ ವಿರುದ್ಧ ಕಾದಾಡಲು ಹೆಚ್ಚು ಸಮರ್ಥರಾಗಿರುತ್ತಾರೆ.

  ಗಾಲ್ವಾನ್ ಘಟನೆಯ ನಂತರ, ಇಂಡೋ-ಟಿಬೆಟಿಯನ್ ಬಾರ್ಡರ್ ಪೋಲೀಸ್ (ITBP) ಹೊಸ ಮಾಡ್ಯೂಲ್‌ನಲ್ಲಿ ಸೈನಿಕರ ತರಬೇತಿಯನ್ನು ಪ್ರಾರಂಭಿಸಿದೆ.

  ಹೊಸ ಮಾಡ್ಯೂಲ್‌ನ ಈ ತರಬೇತಿಯನ್ನು ಐಟಿಬಿಪಿಯ ಯುದ್ಧ ಮತ್ತು ಯುದ್ಧೇತರ ಸಿಬ್ಬಂದಿಗೆ ನೀಡಲಾಗುತ್ತಿದೆ. ಇದಕ್ಕೆ 20 ಹೊಸ ತಂತ್ರಗಳನ್ನು ಸೇರಿಸಲಾಗಿದೆ. ಜೂಡೋ-ಕರಾಟೆ ಜೊತೆಗೆ, ಸೈನಿಕರಿಗೆ ಇಸ್ರೇಲಿ ಸಮರ ಕಲೆಗಳಾದ ಕ್ರಾವ್ ಮಗಾ, ಜಪಾನೀಸ್ ಐಕಿಡೊ, ಬಾಕ್ಸಿಂಗ್ ಮತ್ತು ಕುಸ್ತಿ ಕೌಶಲ್ಯಗಳನ್ನು ಕಲಿಸಲಾಗಿದೆ.

  ಐಟಿಬಿಪಿಯು ತನ್ನ ಸುಮಾರು 15 ರಿಂದ 20 ಸಾವಿರ ಸೈನಿಕರನ್ನು ಪಂಚಕುಲ ಬಳಿಯ ಹೊಸ ಮಾಡ್ಯೂಲ್‌ನಲ್ಲಿ ನಿರಾಯುದ್ಧವಾಗಿ ಹೋರಾಡಲು ಸಿದ್ಧಪಡಿಸಿದೆ. ಯುದ್ಧ ಯೋಧರಿಗೆ 44 ವಾರಗಳು ಮತ್ತು ಯೋಧರಲ್ಲದವರಿಗೆ 24 ವಾರಗಳ ತರಬೇತಿ ಕಾರ್ಯಕ್ರಮ ಆಯೋಜಿಸಲಾಗಿದೆ.

  300x250 AD

  ಸೈನಿಕರು ಬಂದೂಕುಗಳೊಂದಿಗೆ LAC ಸಮೀಪ ಗಸ್ತು ತಿರುಗುವಂತಿಲ್ಲ. ಉಭಯ ದೇಶಗಳ ನಡುವೆ ಪರಸ್ಪರ ಗುಂಡು ಹಾರಿಸದಂತೆ ಒಪ್ಪಂದವಾಗಿದೆ. ಗಲ್ವಾನ್‌ನಲ್ಲಿ 20 ಭಾರತೀಯ ಯೋಧರು ಹುತಾತ್ಮರಾದ ಬಳಿಕ ಭಾರತೀಯ ಯೋಧರನ್ನು ನಿರಾಯುಧ ಯುದ್ಧಕ್ಕೆ ಹೆಚ್ಚು ಸಜ್ಜುಗೊಳಿಸಲಾಗುತ್ತಿದೆ.

  ಕೃಪೆ :http://news13.in

  Share This
  300x250 AD
  300x250 AD
  300x250 AD
  Leaderboard Ad
  Back to top