ಜೊಯಿಡಾ: ನಶಿಸುತ್ತಿರುವ ಸಂಗೀತ ಕಲೆ ಮತ್ತು ಯಕ್ಷಗಾನ ಕಲೆ ಗಳನ್ನ ಉಳಿಸಿ ಬೆಳೆಸುವ ಕೆಲಸ ಸುಲಭದ ಮಾತಲ್ಲ ಆದರೆ ಸಪ್ತಸ್ವರ ಸೇವಾ ಸಂಸ್ಥೆ ಈ ಕೆಲಸವನ್ನು ಮಾಡುತ್ತಿದೆ ಎಂದು ತಾಲೂಕಾ ರೈತ ಸಂಘದ ಕಾರ್ಯದರ್ಶಿ ಸದಾಶಿವ ದೇಸಾಯಿ ಹೇಳಿದರು. ಅವರು ರವಿವಾರ ಸಂಜೆ ಯರಮುಖದ ಬಯಲು ರಂಗ ಮಂದಿರದಲ್ಲಿ ನಡೆಯುತ್ತಿರುವ ಯಕ್ಷಗಾನ ಸಪ್ತಾಹ ಉದ್ಘಾಟನೆ ಮಾಡಿ ಮಾತನಾಡಿ , ಈ ಸಂಸ್ಥೆ ಹಲವಾರು ವೈವಿಧ್ಯಮಯ ಸೇವೆಯನ್ನು ನೀಡುತ್ತಿದ್ದು ಯಕ್ಷಗಾನ ಕಲೆ ಒಂದು ಭಾಗವಾಗಿದೆ . ಊರಿನ ಮತ್ತು ಹೊರ ಊರಿನ ಕಲಾವಿದರಿಗೆ ಅವಕಾಶ ನೀಡುವ ಮೂಲಕ ಹೊಸ ಕಲಾವಿದರ ಪರಿಚಯ ಮಾಡಿಸುತ್ತಿದೇ ಎಂದರು.
ಸಂಸ್ಥೆಯ ಕಾರ್ಯವನ್ನು ಮೆಚ್ಚಿ ವಿಭಾಕರ ದೇಸಾಯಿ ಶಿವರಾಂ ಹೆಗಡೆ ಗೀತಾ ಭಾಗ್ವತ ಮಾತನಾಡಿದರು ಇದೇ ಸಂದರ್ಭ ಬೆಂಗಳೂರಿನ ಯಕ್ಷಗಾನ ಕಲಾವಿದೆ ಮಯೂರಿ ಉಪಾಧ್ಯ ಮತ್ತು ಶಿವರಾಂ ಶ್ರೀಧರ ಹೆಗಡೆ ಇವರನ್ನು ಸನ್ಮಾನಿಸಲಾಯಿತು ವೇದಿಕೆಯಲ್ಲಿ ಶಿಕ್ಷಕಿ ಪ್ರಭಾವತಿ ಆಳ್ಕೆ ,ನಾಗರತ್ನ ಭಟ್ಟ, ಶಾಂತಾ ಭಟ್ಟ ಇತರರು ಇದ್ದರು. ಶ್ರೀಧರ ಭಾಗ್ವತ ಮತ್ತು ಗಣರಾಜ ದೇಸಾಯಿ ನಿರ್ವಹಿಸಿದರು ನಂತರ ಮಯೂರಿ ಉಪಾಧ್ಯ ಸಂಗಡಿಗರಿಂದ ರತ್ನಾವತಿ ಕಲ್ಯಾಣ ಎಂಬ ಯಕ್ಷಗಾನ ಜನರನ್ನ ರಂಜಿಸಿತು