Slide
Slide
Slide
previous arrow
next arrow

ರಾಷ್ಟ್ರೀಯ ಸೇವಾ ಯೋಜನೆಯ ವಿಶೇಷ ಶಿಬಿರ

300x250 AD

ಜೊಯಿಡಾ:ಬಿಜಿವಿಎಸ್ ಪದವಿ ಪೂರ್ವ ಕಾಲೇಜು ಜೊಯಿಡಾದ ರಾಷ್ಟ್ರೀಯ ಸೇವಾ ಯೋಜನೆಯ ವಿಶೇಷ ಶಿಬಿರದಲ್ಲಿ “ಮಾನವೀಯ ಮೌಲ್ಯಗಳು ಹಾಗೂ ಶಿಸ್ತುಬದ್ಧ ಜೀವನ”ದ ಕುರಿತು ಉಪನ್ಯಾಸ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.
ಕಾಳಿ ಬ್ರಿಗೇಡ್ ಸಂಸ್ಥೆಯ ಅಧ್ಯಕ್ಷ ರವಿ ರೇಡ್ಕರ್ ಉಪನ್ಯಾಸಕರಾಗಿ ಮಾತನಾಡುತ್ತಾ ಇಂದಿನ ಯುವಕರಲ್ಲಿ ಮಾನವೀಯ ಮೌಲ್ಯಗಳ ಅರಿವು ಅವಶ್ಯಕವಾದ ವಿಷಯವಾಗಿದ್ದು ಪ್ರತಿಯೊಬ್ಬರೂ ತನ್ನ ಜೀವನ, ತನ್ನ ಸಮಾಜ, ತನ್ನ ದೇಶದ ಉನ್ನತಿಗೆ ಮಾನವೀಯ ಮೌಲ್ಯಗಳನ್ನು ಬೆಳೆಸಿಕೊಂಡು ತಮ್ಮ ಜೀವನವನ್ನು ಶಿಸ್ತುಬದ್ಧವನ್ನಾಗಿಸಿಕೊಳ್ಳಲು ಸಾಧ್ಯ ಎಂದು ಹೇಳುತ್ತಾ ವಿದ್ಯಾರ್ಥಿಗಳಿಗೆ ಅನೇಕ ಉದಾಹರಣೆಗಳ ಮೂಲಕ ವಿಷಯವನ್ನು ಮನದಟ್ಟು ಮಾಡಿಕೊಟ್ಟರು.
ಮಾನವೀಯ ಮೌಲ್ಯಗಳನ್ನು ಪ್ರತಿಯೊಬ್ಬರು ಅಳವಡಿಸಿಕೊಳ್ಳುವುದರ ಮೂಲಕ ದೇಶ ಕಟ್ಟುವ ಕಾರ್ಯದಲ್ಲಿ ಸನ್ನದ್ದರಾಗಬೇಕೆಂದು ಕರೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ BGVS ಸ್ಥಳೀಯ ಸಮಿತಿಯ ಸದಸ್ಯರಾದ ತುಕಾರಾಮ ಮಾಂಜ್ರೆಕರ ಮಾತನಾಡುತ್ತಾ, ಈ ಶಿಬಿರ ಶಿಬಿರಾರ್ಥಿಗಳಾದ ನಿಮ್ಮ ಬದುಕಿನಲ್ಲಿ ಒಳ್ಳೆಯ ಪಾಠವನ್ನು ಕಲಿಸುತ್ತದೆ. ಇಲ್ಲಿನ ಶಿಸ್ತು, ಸಂಯಮವನ್ನು ಮೈಗೂಡಿಸಿಕೊಂಡು ಸಮಾಜದ ಉತ್ತಮ ವ್ಯಕ್ತಿಯಾಗಿ ಬಾಳಿ ಎಂದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಉಪನ್ಯಾಸಕ ಪ್ರಕಾಶ ತಗಡಿನಮನೆ, ಸಮಯಕ್ಕೆ ಮಹತ್ವ ಕೋಟ್ಟು ತಮ್ಮ ಕರ್ತವ್ಯವನ್ನು ಶೃದ್ಧೆಯಿಂದ ಮಾಡಿ, ಶಿಬಿರದಲ್ಲಿ ಕಲಿತ ಪಾಠವನ್ನು ಬದುಕಿನಲ್ಲಿ ಅಳವಡಿಸಿಕೊಂಡು ಸಮಾಜದಲ್ಲಿ ಗೌರವದಿಂದ ಬಾಳಿ ಎಂದರು.
ಈ ಸಂದರ್ಭದಲ್ಲಿ ವೇದಿಕೆಯಲ್ಲಿ ಕಾಲೇಜಿನ ಸಿಬ್ಬಂದಿ ದತ್ತಾರಾಮ ದೇಸಾಯಿ, ಉಪನ್ಯಾಸಕರಾದ ಪಾಂಡುರಂಗ ಪಟಗಾರ, ಪ್ರಶಾಂತ ಜಕ್ಕಣ್ಣನವರ, ಶಿವಾಜಿ ಜೋಮಣ್ಣನವರ ಮುಂತಾದವರು ಉಪಸ್ಥಿತರಿದ್ದರು.

300x250 AD
Share This
300x250 AD
300x250 AD
300x250 AD
Back to top