• Slide
    Slide
    Slide
    previous arrow
    next arrow
  • ರಸ್ತೆ ಕಾಮಗಾರಿ ಗುದ್ದಲಿ ಪೂಜೆ ನೆರವೇರಿಸಿದ ಶಾಸಕ ದಿನಕರ ಶೆಟ್ಟಿ

    300x250 AD

    ಹೊನ್ನಾವರ ಪಟ್ಟಣದ ಪ್ರಭಾತನಗರದ ಮೂಡಗಣಪತಿ ದೇವಸ್ಥಾನಕ್ಕೆ ತೆರಳುವ ರಸ್ತೆಗೆ 10 ಲಕ್ಷ ಮಂಜೂರಾಗಿದ್ದು, ಶಾಸಕ ದಿನಕರ ಶೆಟ್ಟಿ ಸೋಮವಾರ ಗುದ್ದಲಿಪೂಜೆ ನಡೆಸಿದರು.
    ವಿಧಾನಪರಿಷತ್ ಸದಸ್ಯಗಣಪತಿ ಉಳ್ವೇಕರ್ ಪ್ರವೇಶಾಭಿವೃದ್ದಿನಿಧಿಯಿಂದ 10 ಲಕ್ಷ ಮಂಜೂರಾದ ಕಾಂಕ್ರೀಟ್ ರಸ್ತೆ ಕಾಮಗಾರಿ ಆರಂಭಿಸಲು ಶಾಸಕರು ಚಾಲನೆ ನೀಡಿದರು.
    ನಂತರ ಮಾತನಾಡಿ ವಿಧಾನಪರಿಷತ್ ಸದಸ್ಯರ ಪ್ರದೇಶಾಭಿವೃದ್ಧಿ ನಿಧಿಯಿಂದ ಕ್ಷೇತ್ರಕ್ಕೆ ಮಂಜೂರಾದ 25 ಲಕ್ಷದಲ್ಲಿ ಈ ಭಾಗದ ಬಹು ಬೇಡಿಕೆಯಾದ ಮೂಡಗಣಪತಿ ದೇವಸ್ಥಾನಕ್ಕೆ ತೆರಳುವ ರಸ್ತೆಯು ಒಂದಾಗಿದೆ. ಜಿ.ಪಂ. ಇಲಾಖೆಯ ಅಧಿಕಾರಿಗಳು ಪ.ಪಂ.ಸದಸ್ಯರು ಕಾಮಗಾರಿ ಗುಣಮಟ್ಟದ ಬಗ್ಗೆ ಪರಿಶೀಲಿಸಬೇಕು. ಅಲ್ಲದೇ ಮೂಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಕುಮಟಾ ಪುರಸಭೆಗೆ 10 ಕೋಟಿ, ಹೊನ್ನಾವರ ಪ.ಪಂ.5 ಕೋಟಿ ಮಂಜೂರಾಗಿದೆ. 1.89 ಲಕ್ಷ ವೆಚ್ಚದ ರಸ್ತೆ ಕಾಮಗಾರಿಯ ಟೆಂಡರ ಆಗಿದೆ. ಒಂದು ವಾರದೊಳಗೆ ಕೆಲಸ ಆರಂಭವಾಗಲಿದೆ. ಮುಂದಿನ ಕೆಲ ದಿನದಲ್ಲಿ ಪಟ್ಟಣ ವ್ಯಾಪ್ತಿಯ ಎಲ್ಲಾ ರಸ್ತೆಗಳ ಸಮಸ್ಯೆ ಬಗೆಹರಿಸುವ ಭರವಸೆ ನೀಡಿದರು.
    ಈ ಸಂದರ್ಭದಲ್ಲಿ ಬಿಜೆಪಿ ಮಂಡಲಧ್ಯಕ್ಷ ರಾಜೇಶ ಭಂಡಾರಿ, ಪ.ಪಂ. ಉಪಾಧ್ಯಕ್ಷೆ ನಿಶಾ ಶೇಟ್, ಸ್ಥಾಯಿಸಮಿತಿ ಅಧ್ಯಕ್ಷ ನಾಗರಾಜ ಭಟ್, ನಿಕಟಪೂರ್ವ ಅಧ್ಯಕ್ಷ ಶಿವರಾಜ ಮೇಸ್ತ,ಪ.ಪಂ.ಸದಸ್ಯರು,ಪ.ಪಂ .ಮುಖ್ಯಾಧಿಕಾರಿ ಪ್ರವೀಣಕುಮಾರ, ಸಿಪಿಐ ಶ್ರೀಧರ ಎಸ್.ಆರ್.ಪಿಎಸೈ ಮಹಾಂತೇಶ ನಾಯಕ, ಜಿ.ಪಂ.ಇಂಜನಿಯರ್ ಪ್ರದೀಪ ಆಚಾರ್ಯ, ಬಿಜೆಪಿ ಮುಖಂಡರಾದ ಎಂ.ಎಸ್.ಹೆಗಡೆ, ಉಲ್ಲಾಸ ನಾಯ್ಕ, ದತ್ತಾತ್ರೇಯ ಮೇಸ್ತ, ಮತ್ತಿತರರು ಉಪಸ್ಥಿತರಿದ್ದರು.

    300x250 AD
    Share This
    300x250 AD
    300x250 AD
    300x250 AD
    Leaderboard Ad
    Back to top