ಅಂಕೋಲಾ : ಉ.ಕ ಜಿಲ್ಲೆಯ ನೂತನ ಜಿಲ್ಲಾಧಿಕಾರಿಯಾಗಿ ಅಧಿಕಾರ ಸ್ವೀಕರಿಸಿ ಪ್ರಥಮ ಬಾರಿಗೆ ತಾಲೂಕಿಗೆ ಆಗಮಿಸಿದ ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟೆರವರನ್ನು ತಾಲೂಕಾ ಕಾರ್ಯನಿರತ ಪತ್ರಕರ್ತರ ಸಂಘದವರು ಸ್ವಾಗತಿಸಿದರು.
ಪ್ರತಿಯೊಂದು ವಿಚಾರವನ್ನು ಚರ್ಚಿಸೋಣ. ಅಭಿವೃದ್ಧಿಯ ವಿಚಾರದಲ್ಲಿ ಎಲ್ಲರೂ ಸ್ಪಂದಿಸೋಣ. ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು. ಈ ಸಂದರ್ಭದಲ್ಲಿ ತಾಲೂಕಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಅರುಣ ಶೆಟ್ಟಿ, ಕಾರ್ಯದರ್ಶಿ ವಿದ್ಯಾದಾರ ಮೊರಬಾ, ಪತ್ರಕರ್ತರಾದ ಕೆ ರಮೇಶ್, ನಾಗರಾಜ ಮಂಜಗುಣಿ, ರಾಘು ಕಾಕರಮಠ, ಸುಭಾಷ್ ಕಾರೇಬೈಲ್, ನಾಗರಾಜ ಶೆಟ್ಟಿ, ನಾಗರಾಜ ಜಾಂಬಳೇಕರ, ವಿಲಾಸ್ ನಾಯಕ, ಅಕ್ಷಯ ನಾಯ್ಕ, ಉಪಸ್ಥಿತರಿದ್ದರು.
ನೂತನ ಜಿಲ್ಲಾಧಿಕಾರಿಗಳಿಗೆ ಸ್ವಾಗತ ಕೋರಿದ ಅಂಕೋಲಾ ಪತ್ರಕರ್ತರು
