Slide
Slide
Slide
previous arrow
next arrow

ಸರದಾರ್ ವಲ್ಲಬ್‌ಬಾಯಿ ಪಟೇಲ್ ಇಂದಿನ ಯುವ ಪೀಳಿಗೆೆಗೆ ಆದರ್ಶ

300x250 AD

ಹೊನ್ನಾವರ : ದೇಶದ ಆಡಳಿತ ನಡೆಸುವ ಕರ್ತವ್ಯದಲ್ಲಿ ನಾನು ಸತ್ತರೇ, ಅದೆ ನನಗೆ ಹೆಮ್ಮೆಯಾಗಿದ್ದು, ನನ್ನ ದೇಹದ ಪ್ರತಿ ರಕ್ತದ ಹನಿಯೂ ಕೂಡ ದೇಶದ ಬೆಳವಣಿಗೆ ಮತ್ತು ಅಖಂಡ ಭಾರತದ ಐಕ್ಯತೆಗೆ ಮೂಡಿಪಾಗಿರಲಿ ಎಂದು ಮಾಜಿ ಪ್ರಧಾನಿ ದಿ.ಇಂದಿರಾ ಗಾಂಧಿಯವರು ತಮ್ಮ ಕೊನೆಯ ಸಾರ್ವಜನಿಕ ಸಭೆಯಲ್ಲಿ ದೇಶವನ್ನು ಉದ್ದೇಶಿಸಿ ನುಡಿದಿದ್ದರು ಎಂದು ಹೊನ್ನಾವರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಗದೀಪ್ ಎನ್. ತೆಂಗೇರಿ ಹೇಳಿದರು. ಅವರು ಇಂದು ಹೊನ್ನಾವರ ಬ್ಲಾಕ್ ಕಾಂಗ್ರೆಸ್ ಸಮಿತಿ ನಗರದ ಬ್ಲಾಕ್ ಕಾಂಗ್ರೆಸ್ ಕಾರ್ಯಾಲಯದಲ್ಲಿ ಏರ್ಪಡಿಸಿದ ಮಾಜಿ ಪ್ರಧಾನಿ ಇಂಧಿರಾ ಗಾಂಧಿಯವರ 38ನೇ ಪುಣ್ಯತಿಥಿ ಮತ್ತು ಭಾರತದ ಪ್ರಥಮ ಗೃಹ ಮಂತ್ರಿ ಸರದಾರ್ ವಲ್ಲಭ್ ಭಾಯಿ ಪಟೇಲ್ ಅವರ 147ನೇ ಜನ್ಮ ದಿನಾಚರಣೆಯ ಕಾರ್ಯಕ್ರಮದಲ್ಲಿ ದೀಪ ಬೆಳಗಿಸಿ, ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡುತಿದ್ದರು. 80ರ ದಶಕದಲ್ಲಿ ಸಮಗ್ರ ಭಾರತದ ಐಕ್ಯತೆಗೆ ಸವಾಲಾಗಿ ಪರಿಣಮಿಸಿದ್ದ, ಪ್ರತ್ಯೇಕ ಖಲಿಸ್ತಾನ ದೇಶದ ಕನಸು ಕಂಡಿದ್ದ ಉಗ್ರಗಾಮಿಗಳ ಹುಟ್ಟಡಗಿಸಲು, ಆಪರೇಶನ್ ಬ್ಲೂ ಸ್ಟಾರ್ ಮೂಲಕ ಸೈನಿಕರನ್ನು ಸುವರ್ಣ ಮಂದಿರದಲ್ಲಿ ಬಿಟ್ಟು ಖಲಿಸ್ತಾನ ಉಗ್ರಗಾಮಿಗಳನ್ನು ಮಟ್ಟ ಹಾಕಿದ ದಿಟ್ಟ ಮಹಿಳೆ ಇಂದಿರಾ ಗಾಂಧಿ ಎಂದು ಹೆಮ್ಮೆ ವ್ಯಕ್ತ ಪಡಿಸಿದರು. ಆದರೆ ಅದೇ ವಿಷಯ ಇಂದಿರಾ ಗಾಂಧಿಯವರ ಪ್ರಾಣಕ್ಕೆ ಮುಳುವಾಗಿದ್ದು ಮಾತ್ರ ದೇಶದ ಬಹುದೊಡ್ಡ ದುರಂತ ಎಂದು ನೊಂದು ನುಡಿದರು.
ಹಾಗೆಯೇ ದೇಶ ಕಂಡ ಇನ್ನೊಬ್ಬ ಮಹಾನ್ ನಾಯಕ, ಸರದಾರ್ ವಲ್ಲಬ್‌ಬಾಯಿ ಪಟೇಲ್ ಇಂದಿನ ಯುವ ಪೀಳಿಗೆೆಗೆ ಆದರ್ಶರಾಗಿದ್ದೂ, 1947 ರಲ್ಲಿ ಭಾರತದ ಪ್ರಥಮ ಗೃಹ ಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ನಂತರ ಸರದಾರ ವಲ್ಲಭಬಾಯಿ ಪಟೇಲ್ ಅನೇಕ ದಿಟ್ಟ ನಿರ್ಣಯ ಕೈಗೊಂಡಿದ್ದರು. ಸ್ವತಂತ್ರ ಭಾರತದ ಶಿಲ್ಪಿ ಎಂದೇ ಹೆಸರಾಗಿದ್ದ ಅವರು, ರಾಜರ ಆಳ್ವಿಕೆಯಲ್ಲಿದ್ದ 550 ಪ್ರಾಂತ್ಯಗಳನ್ನು ಒಗ್ಗೂಡಿಸಿ, ಅಖಂಡ ಭಾರತದ ಭದ್ರ ಬುನಾದಿಗೆ ಕಾರಣರಾಗಿದ್ದರು ಎಂದು ಪಟೇಲ್‌ರ ಆಡಳಿತವನ್ನು ಶ್ಲಾಘಿಸಿದರು.
ಹೊನ್ನಾವರ ಬ್ಲಾಕ್ ಕಾಂಗ್ರೆಸ್ ಹಿಂದುಳಿದ ವರ್ಗ ವಿಭಾಗದ ಅಧ್ಯಕ್ಷ ಕೆ.ಎಚ್. ಗೌಡ ಮಾತನಾಡಿ ಶ್ರೀಮತಿ ಇಂದಿರಾಗಾಂಧಿಯವರು ಉಳುವವನೇ ಒಡೆಯ ಎಂಬ ಕಾಯಿದೆಯನ್ನು ಜಾರಿಗೆ ತರುವ ಮೂಲಕ ಕೊಟ್ಯಾಂತರ ಬಡವರಿಗೆ ಸೂರು ನೀಡಿದ ಶ್ರೇಷ್ಠ ನಾಯಕಿ ಎಂದರು. ತಮ್ಮ ಜೀವನದುದ್ದಕ್ಕೂ ದೇಶದ ಐಕ್ಯತೆ, ಸಮಗ್ರತೆಗೆ ಹೋರಾಡಿ, ಕೊನೆಗೂ ಹಂತಕರ ಗುಂಡಿಗೆ ಬಲಿಯಾದ ನಾಯಕಿ ಶ್ರೀಮತಿ ಇಂದಿರಾಗಾಂಧಿ ಎಂದು ಸ್ಮರಿಸಿದರು. ಸುಮಾರು 17 ವರ್ಷಗಳಿಗೂ ಹೆಚ್ಚಿನ ಅವಧಿ ಭಾರತ ದೇಶವನ್ನು ಪ್ರಧಾನ ಮಂತ್ರಿಯಾಗಿ ಮುನ್ನಡೆಸಿ ‘ಗರಿಬಿ ಹಟಾವ್’, ‘ಹಸಿರು ಕಾಂತ್ರಿ’, ಬ್ಯಾಂಕ್ ರಾಷ್ಟ್ರೀಕರಣ ಮೂಲಕ ಬಡವರ ಕಣ್ಮಣಿಯಾಗಿ ಜನಪ್ರಿಯರಾಗಿದ್ದರು ಎಂದರು.
ಪಕ್ಷದ ಕಾರ್ಯಕರ್ತರು, ಮುಖಂಡರು ಮಾಜಿ ಪ್ರಧಾನಿ ಇಂದಿರಾಗಾಂಧಿ ಮತ್ತು ದೇಶದ ಪ್ರಥಮ ಗೃಹ ಮಂತ್ರಿ ಸರದಾರ ವಲ್ಲಬ್ ಬಾಯಿ ಪಟೇಲ್‌ರವರ ಭಾವಚಿತ್ರಕ್ಕೆ ಪುಷ್ಪ ನಮನ ಮಾಡಿ, ಒಂದು ನಿಮಿಷದ ಮೌನ ಆಚರಿಸಿ ಗೌರವ ಸಲ್ಲಿಸಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಕಾಂಗ್ರೆಸ್ ಸದಸ್ಯೆ ಶ್ರೀಮತಿ ಆಶಾ ಮಡಿವಾಳ, ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ದಾಮೋದರ ನಾಯ್ಕ, ಹೊನ್ನಾವರ ನಗರ ಘಟಕದ ಅಧ್ಯಕ್ಷ ಚಂದ್ರಶೇಖರ ಚಾರೋಡಿ,ಬ್ಲಾಕ್ ಕಾಂಗ್ರೆಸ್ ಪರಿಶಿಷ್ಟ ಜಾತಿ ವಿಭಾಗದ ಅಧ್ಯಕ್ಷ ಕೃಷ್ಣ ಹರಿಜನ,ಬ್ಲಾಕ್ ಕಾಂಗ್ರೆಸ್ ಸೇವಾದಳದ ಅಧ್ಯಕ್ಷ ಮೋಹನ ಆಚಾರಿ, ಇಂಟೆಕ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕೇಶವ ಮೇಸ್ತ, ಇಂಟೆಕ್ ಅಧ್ಯಕ್ಷ ಆಗ್ನೇಲ್ ಡಾಯಸ್, ಬ್ಲಾಕ್ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಉಪಾಧ್ಯಕ್ಷ ಹನೀಪ್ ಶೇಖ್, ಪಟ್ಟಣ ಪಂಚಾಯತ ಮಾಜಿ ಸ್ಥಾಯಿ ಸಮಿತಿ ಅಧ್ಯಕ್ಷ ಉದಯ ಮೇಸ್ತ, ಜಿಲ್ಲಾ ಕಾಂಗ್ರಸ್ ಸೇವಾದಳದ ಪ್ರಧಾನ ಕಾರ್ಯದರ್ಶಿ ಕೃಷ್ಣ ಮಾರಿಮನೆ, ಮುಖಂಡರಾದ ಶ್ರೀಕಾಂತ್ ಮೇಸ್ತ, ಪಾತ್ರೋನ್ ಫರ್ನಾಂಡೀಸ್, ಮನ್ಸೂರ್ ಶೇಖ, ಮೋಹನ ಮೇಸ್ತ, ಕರ್ಕಿ ಮಾದೇವ ನಾಯ್ಕ, ಮಾರ್ಷಲ್ ಡಿಸೋಜಾ, ದಿನೇಶ ನಾಯ್ಕ ಇನ್ನೂ ಹಲವಾರು ಮುಖಂಡರು ಪಾಲ್ಗೊಂಡಿದ್ದರು.

300x250 AD
Share This
300x250 AD
300x250 AD
300x250 AD
Back to top