Slide
Slide
Slide
previous arrow
next arrow

ಅದ್ಧೂರಿಯಾಗಿ ನಡೆಯಲಿದೆ ಕುಮಟಾ ವೈಭವ ಸಾಂಸ್ಕೃತಿಕ ಕಾರ್ಯಕ್ರಮ

300x250 AD

ಕುಮಟಾ: ಪಟ್ಟಣದ ಮಣಕಿ ಮೈದಾನದಲ್ಲಿ ನ.11ರಿಂದ 16ರ ವರೆಗೆ ಕುಮಟಾ ವೈಭವ ಸಾಂಸ್ಕೃತಿಕ ಕಾರ್ಯಕ್ರಮ ಅದ್ಧೂರಿಯಾಗಿ ನಡೆಯಲಿದೆ ಎಂದು ತಾಂಡವ ಕಲಾನಿಕೇತನದ ಅಧ್ಯಕ್ಷ ಮಂಜುನಾಥ ನಾಯ್ಕ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನನ್ನ ತಂದೆಯವರಾದ ಲಿಂಗಪ್ಪ ಮಾಸ್ತರರವರ ನೆನಪಿಗಾಗಿ ನಡೆಯುವ ಕುಮಟಾ ವೈಭವ ಕಾರ್ಯಕ್ರಮ ಈ ಬಾರಿಯು ಹಲವು ವೈಶಿಷ್ಟ್ಯಗಳನ್ನು ಹೊಂದಿದ್ದು, ಸಾಂಸ್ಕೃತಿಕ ಕಾರ್ಯಕ್ರಮದ ಜೊತೆಗೆ ಸ್ಥಳೀಯ ಸಂಸ್ಕೃತಿಯ ಪ್ರತೀಕವಾದ ಹಾಲಕ್ಕಿ ಜನಾಂಗದವರಿಗಾಗಿ ಹಾಲಕ್ಕಿ ಚುಂಚಾದ್ರಿ ಕಫ್ ಎಂಬ ಜಿಲ್ಲಾ ಮಟ್ಟದ ವಾಲಿಬಾಲ್ ಪಂದ್ಯಾವಳಿಯನ್ನು ಆಯೋಜಿಸಲಾಗಿದೆ ಎಂದರು.
ನ.11ರ ಬೆಳಗ್ಗೆ 10.30 ಗಂಟೆಗೆ ಪಂದ್ಯಾವಳಿಗೆ ಚಾಲನೆ ನೀಡಲಾಗುವುದು. ಜಿಲ್ಲೆಯ ಪ್ರತಿ ಸೀಮೆಯಿಂದ ಒಂದೊಂದು ತಂಡದಂತೆ ಸುಮಾರು 80 ತಂಡಗಳು ಈ ಪಂದ್ಯಾವಳಿಯಲ್ಲಿ ಭಾಗವಹಿಸಲಿದೆ. ಪಂದ್ಯಾವಳಿಯು ಡೇ ಆ್ಯಂಡ್ ನೈಟ್ ನಡೆಯಲಿದೆ. ನ.12ರಿಂದ ಐದು ದಿನಗಳ ಕಾಲ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ. ಜೊತೆಗೆ ಎಲೆಮರೆಕಾಯಂತಿರುವ ಐವರು ಕಲಾವಿದರಿಗೆ ಅಥವಾ ಸಾಧಕರಿಗೆ ಮಾಶಾಸನ ನೀಡಲಾಗುವುದು. ಅದಕ್ಕೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಇನ್ನು ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಕನ್ನಡ ಮತ್ತು ಹಿಂದಿ ಚಿತ್ರರಂಗದ ಖ್ಯಾತ ನಟರು ಹಾಗೂ ಕನ್ನಡ ಕಿರುತೆರೆ ಕಲಾವಿದರು ಪ್ರದರ್ಶನ ನೀಡಲಿದ್ದಾರೆ. ಇದು ನನ್ನ ತಂದೆಯವರ ಸ್ಮರಣೆಯಲ್ಲಿ ನಡೆಯುವ ಕಾರ್ಯಕ್ರಮವಾದರೂ ನಿಮ್ಮೆಲ್ಲರ ಸಹಕಾರದಿಂದ ಊರ ಹಬ್ಬವಾಗಿ ಆಚರಿಸುವ ಆಶಯವನ್ನು ಹೊಂದಿದ್ದು, ಎಲ್ಲರೂ ಕಾರ್ಯಕ್ರಮಕ್ಕೆ ಸಹಕಾರ ನೀಡುವಂತೆ ಮನವಿ ಮಾಡಿದರು.
ಸುದ್ದಿಗೋಷ್ಠಿಯಲ್ಲಿ ಉದ್ಯಮಿಯಾದ ನಾಗೇಶ್ ನಾಯ್ಕ ಕಲಬಾಗ, ನೀರಂಜನ ನಾಯ್ಕ, ರವಿ ಗಾವಡಿ, ಗಣೇಶ ನಾಯ್ಕ, ರವಿ ಶೇಟ್, ಮಂಜುನಾಥ ನಾಯ್ಕ ಕೋನಳ್ಳಿ, ಸಚಿನ ಹರಿಕಂತ್ರ ಇತರರು ಉಪಸ್ಥಿತರಿದ್ದರು.

300x250 AD
Share This
300x250 AD
300x250 AD
300x250 AD
Back to top