Slide
Slide
Slide
previous arrow
next arrow

ಎನ್‌ಎಸ್‌ಯುಐ ಪದಾಧಿಕಾರಿಗಳ ಆಯ್ಕೆ

300x250 AD

ಕಾರವಾರ: ಎನ್‌ಎಸ್‌ಯುಐನ ಕಾರವಾರ- ಅಂಕೋಲಾ ವಿಧಾನಸಭಾ ಕ್ಷೇತ್ರದ ಪದಾಧಿಕಾರಿಗಳನ್ನ ಆಯ್ಕೆ ಮಾಡಲಾಗಿದ್ದು, ಕ್ಷೇತ್ರದಲ್ಲಿ ಇನ್ಮುಂದೆ ಇನ್ನಷ್ಟು ಸಕ್ರಿಯವಾಗಿ ಕಾರ್ಯಕ್ರಮಗಳನ್ನ ಸಂಘಟಿಸಲಾಗುತ್ತದೆ ಎಂದು ಎನ್‌ಎಸ್‌ಯುಐನ ಜಿಲ್ಲಾಧ್ಯಕ್ಷ ವಿಶ್ವ ಗೌಡ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾರವಾರ- ಅಂಕೋಲಾ ವಿಧಾನಸಭಾ ಕ್ಷೇತ್ರದ ಅಧ್ಯಕ್ಷರನ್ನಾಗಿ ಸಾಗರ್ ಬಿಲಿಯೆ ಹಾಗೂ ಕಾರವಾರ ತಾಲೂಕು ಅಧ್ಯಕ್ಷರನ್ನಾಗಿ ಚಿರಾಗ್ ಮಾಸೂರಕರ್ ಅವರನ್ನು ಆಯ್ಕೆ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಇವರ ನೇತೃತ್ವದಲ್ಲಿ ಕಾರವಾರ- ಅಂಕೋಲಾ ವಿಧಾನಸಭಾ ಕ್ಷೇತ್ರದಲ್ಲಿ ಎನ್‌ಸ್‌ಯುಐ ಸಂಘಟನೆ ಬಲಪಡಿಸುವ ಕಾರ್ಯ ನಡೆಸಲಾಗುತ್ತದೆ ಎಂದರು.
ಇನ್ನು ಭಾರತ್ ಜೋಡೋ ಯಾತ್ರೆಯ ಅಂಗವಾಗಿ ಎಲ್ಲಾ ವಿಧಾನಸಭಾ ಕ್ಷೇತ್ರದಲ್ಲೂ ಭಾಷಣ ಹಾಗೂ ಚಿತ್ರಕಲೆ ಸ್ಪರ್ಧೆ ಆಯೋಜಿಸಲಾಗುತ್ತಿದೆ. ಆಯ್ದ ಶಾಲಾ- ಕಾಲೇಜುಗಳಲ್ಲಿ ನ.9ರಿಂದ ಈ ಸ್ಪರ್ಧೆ ನಡೆಯಲಿದ್ದು, ನ.14ಕ್ಕೆ ಬಹುಮಾನ ವಿತರಣಾ ಕಾರ್ಯಕ್ರಮ ನಡೆಯಲಿದೆ. ಈಗಾಗಲೇ ಈ ಬಗ್ಗೆ ಎಲ್ಲಾ ಶಾಲಾ- ಕಾಲೇಜುಗಳಿಗೆ ತೆರಳಿ ಪ್ರಚಾರ ಮಾಡಲಾಗಿದೆ ಎಂದರು.
ಕಾರವಾರದಲ್ಲಿ ಎನ್‌ಎಸ್‌ಯುಐ ಬಲಪಡಿಸಲು ಜಿಲ್ಲಾ ಪಂಚಾಯತಿ ಮಾಜಿ ಸದಸ್ಯೆ ಚೈತ್ರಾ ಕೊಠಾಕರ್ ಅವರು ಬಹಳ ಸಹಕಾರ ನೀಡಿದ್ದು, ಅವರಿಗೆ ಧನ್ಯವಾದ ಹೇಳುತ್ತೇವೆ ಎಂದರು. ಅಶ್ರಫ್, ಸೂರಜ್ ಮುಂತಾದವರು ಕೂಡ ಸಹಕರಿಸಿದ್ದು, ಅವರೆಲ್ಲರಿಗೂ ಧನ್ಯವಾದ ಹೇಳುತ್ತೇನೆ. ಇನ್ನಷ್ಟು ಸಂಘಟನೆ ಬಲಪಡಿಸಿಕೊಳ್ಳಲು ಎನ್‌ಎಸ್‌ಐಯು ಸದಸ್ಯತ್ವ ನೋಂದಣಿ ಕಾರ್ಯವನ್ನೂ ಮಾಡುತ್ತಿದ್ದೇವೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಕಾರವಾರ- ಅಂಕೋಲಾ ವಿಧಾನಸಭಾ ಕ್ಷೇತ್ರದ ಅಧ್ಯಕ್ಷ ಸಾಗರ್ ಬಿಲಿಯೆ, ಕಾರವಾರ ತಾಲೂಕು ಅಧ್ಯಕ್ಷ ಚಿರಾಗ್ ಮಾಸೂರಕರ್, ಈರಪ್ಪ, ಸೈಯದ್ ಅಶ್ರಫ್, ಪ್ರತೀಕ್ ತೆಂಡೂಲ್ಕರ್, ರೂಪೇಶ್ ನಾಗೇಕರ್ ಮುಂತಾದವರು ಇದ್ದರು.

300x250 AD
Share This
300x250 AD
300x250 AD
300x250 AD
Back to top