ಯಲ್ಲಾಪುರ:ಪಟ್ಟಣದ ಪ್ರತಿಷ್ಠಿತ ವಿದ್ಯಾಸಂಸ್ಥೆ ಖ್ಯಾತಿ ಪಡೆದ ವೈಟಿಎಸ್ಎಸ್ ಶಿಕ್ಷಣ ಸಂಸ್ಥೆ ಎನ್.ಎಸ್.ಎಸ್ ಘಟಕದ ವತಿಯಿಂದ ಸ್ವಚ್ಚತಾ ಕಾರ್ಯ ಹಮ್ಮಿಕೊಳ್ಳಲಾಗಿತ್ತು.
ರಾಷ್ಟ್ರೀಯ ಸ್ವಯಂ ಸೇವಾ ಸಮಿತಿ ವತಿಯಿಂದ ಏಳುದಿನಗಳ ಶಿಬಿರ ಆಯೋಜಿಸಿದ್ದು ಇದರ ಪ್ರಯುಕ್ತ ಯಲ್ಲಾಪುರ ಪಟ್ಟಣ ಜೋಡುಕೆರೆಯ ಸಮೀಪದ ಮಾರುತಿ ಮಂದಿರದ ಸುತ್ತಮುತ್ತ ಬೆಳೆದ ಗಿಡಗಂಟಿಗಳನ್ನು ಸ್ವಚ್ಛಗೊಳಿಸಿ ವಿದ್ಯಾರ್ಥಿ ದಿಸೆಯಲ್ಲಿ ಪರಿಸರ ಸ್ವಚ್ಚತೆಯ ಪ್ರಾಮುಖ್ಯತೆ ಅರಿತುಕೊಳ್ಳಲಾಯಿತು.
ಎನ್. ಎಸ್. ಎಸ್ ಅಧಿಕಾರಿ ರೇಷ್ಮಾ ಶೇಖ್ ನೇತೃತ್ವದಲ್ಲಿ ನಡೆಯುತ್ತಿರುವ ಶಿಬಿರದ ಸ್ವಚ್ಛತಾ ಕಾರ್ಯದಲ್ಲಿ ವೈಟಿಎಸ್ಎಸ್ ಸಂಸ್ಥೆ ಅಧ್ಯಕ್ಷ ರವಿ ಶಾನಭಾಗ್ ಪಾಲ್ಗೊಂಡು ವಿದ್ಯಾರ್ಥಿಗಳ ಸ್ವಚ್ಛತಾ ಕಾರ್ಯಕ್ಕೆ ಕೈಜೋಡಿಸಿದರು. ಜೋಡುಕೆರೆ ವಾತಾವರಣ ಪ್ರವಾಸಿಗರಿಗೆ ಕೆಲಕಾಲ ವಿಶ್ರಮಿಸುವ ನೆಚ್ಚಿನ ತಾಣವಾಗಿದ್ದು, ಪರ ಊರುಗಳಿಂದ ಬರುವ ಜನರಿಗೆ ಸ್ವಚ್ಛ ವಾತಾವರಣ ನೀಡಬೇಕಿದೆ. ಇದಕ್ಕಾಗಿ ಕೇವಲ ವಿದ್ಯಾರ್ಥಿಗಳು ಮಾತ್ರವಲ್ಲದೇ ಸಂಘ ಸಂಸ್ಥೆಗಳು ಊರ ನಾಗರಿಕರು ಸಹಕರಿಸಿ ಇನ್ನಷ್ಟು ಉತ್ತಮ ವಾತಾವರಣ ನಿರ್ಮಾಣಮಾಡಬೇಕಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ವೈಟಿಎಸ್ಎಸ್ ಶಿಕ್ಷಣ ಸಂಸ್ಥೆಯ ಎನ್.ಎಸ್. ಎಸ್ ಘಟಕದ 50ಕ್ಕೂ ಹೆಚ್ಚು ವಿದ್ಯಾರ್ಥಿಗಳು, ಶಿಕ್ಷಕರು, ಶಿಕ್ಷಕೇತರ ಸಿಬ್ಬಂದಿಗಳು, ಸಾರ್ವಜನಿಕರು ಪಾಲ್ಗೊಂಡಿದ್ದರು.