• first
  second
  third
  Slide
  previous arrow
  next arrow
 • ಭುವನಗಿರಿಯಲ್ಲಿ ಸಭಾಧ್ಯಕ್ಷ ಕಾಗೇರಿ ದಂಪತಿಗಳಿಗೆ ಸನ್ಮಾನ

  300x250 AD

  ಶಿರಸಿ: ಸುಷಿರ ಸಂಗೀತ‌ ಪರಿವಾರ ಭುವನಗಿರಿ, ಭುವನೇಶ್ವರಿ ದೇವಸ್ಥಾನ ಭುವನಗಿರಿ ಇವರ ಸಂಯುಕ್ತಾಶ್ರಯದಲ್ಲಿ ನಡೆಯುತ್ತಿರುವ ಸಂಗೀತ ಮಹೋತ್ಸವವು ಅ.30 20ರಂದು ಉದ್ಘಾಟನೆಗೊಂಡು ಸಂಗೀತಾಸಕ್ತರ ಮನರಂಜಿಸುತ್ತಿದೆ.
  ವಯೋಲಿನ್ ವಾದಕ ಶಂಕರ್ ಕಬಾಡಿ ಧಾರವಾಡ, ಬಾನ್ಸುರಿ ವಾದಕ‌ ಪ್ರಕಾಶ್ ಹೆಗಡೆ ಕಲ್ಲಾರೆಮನೆ ಇವರ ವಯೋಲಿನ್- ಬಾನ್ಸುರಿ ಜುಗಲ್ಬಂದಿ ಕಾರ್ಯಕ್ರಮವು ಪ್ರೇಕ್ಷಕರನ್ನು ಮಂತ್ರಮುಗ್ಧಗೊಳಿಸಿತು.

  ಈ‌ ಸಂದರ್ಭದಲ್ಲಿ ಕರ್ನಾಟಕ ವಿಧಾನಸಭಾಧ್ಯಕ್ಷ‌ ವಿಶ್ವೇಶ್ವರ ಹೆಗಡೆ ಕಾಗೇರಿ ದಂಪತಿಗಳನ್ನು‌ ಸಂಪ್ರದಾಯ ಬದ್ದವಾಗಿ ಆರತಿ ಬೆಳಗಿ ಸಮ್ಮಾನಿಸಿದರು. ಸೆಲ್ಕೋ ಇಂಡಿಯಾದ ಸಿಇಓ‌ ಮೋಹನ ಭಾಸ್ಕರ ಹೆಗಡೆ, ಕಲ್ಲಾರೆಮನೆ ಪ್ರಕಾಶ ಹೆಗಡೆ, ನಾರಾಯಣ ಹೆಗಡೆ, ಶ್ರೀಕಾಂತ‌ ಹೆಗಡೆ ಇತರರು ಸಾಕ್ಷಿಯಾದರು. ವಸುಧಾ ಶರ್ಮಾ ಅವರ ಹಾಡು ಇನ್ನಷ್ಟು ಆಪ್ತತೆ ಹೆಚ್ಚಿಸಿತು.
  ನಂತರದಲ್ಲಿ ನಡೆದ ವಿ.ವಸುಧಾ ಶರ್ಮಾ ಸಾಗರ ಇವರ ಹಿಂದುಸ್ತಾನಿ ಶಾಸ್ತ್ರೀಯ ಗಾಯನ ಕಾರ್ಯಕ್ರಮಕ್ಕೆ ಹಾರ್ಮೋನಿಯಂನಲ್ಲಿ ವಿ.ಪ್ರಕಾಶ್ ಹೆಗಡೆ ಯಡಳ್ಳಿ ಹಾಗೂ ತಬಲಾದಲ್ಲಿ ಪಂ. ಶಾಂತಲಿಂಗ ದೇಸಾಯಿ ಧಾರವಾಡ ಇವರು ಸಾಥ್ ನೀಡಿದರು.

  300x250 AD
  Share This
  300x250 AD
  300x250 AD
  300x250 AD
  Back to top