• Slide
    Slide
    Slide
    previous arrow
    next arrow
  • ವಸಂತ ನಾಯ್ಕರ ಬಗ್ಗೆ ಮಾತನಾಡಲು ವೀರಭದ್ರ ನಾಯ್ಕಗೆ ನೈತಿಕತೆ ಇಲ್ಲ: ಬಾಲಕೃಷ್ಣ ನಾಯ್ಕ

    300x250 AD

    ಸಿದ್ದಾಪುರ: ವೀರಭದ್ರ ನಾಯ್ಕರವರೇ, ಎಲ್ಲೋ ಕುತ್ಕೊಂಡು ಶೋ ಕೊಡಬೇಡಿ. ವಸಂತ ನಾಯ್ಕರವರ ಬಗ್ಗೆ ಮಾತನಾಡಲು ನಿಮಗೆ ಯಾವುದೇ ನೈತಿಕತೆ ಇಲ್ಲ ಎಂದು ಬ್ಲಾಕ್ ಕಾಂಗ್ರೆಸ್ ಸಮಿತಿ ಉಪಾಧ್ಯಕ್ಷ ಬಾಲಕೃಷ್ಣ ನಾಯ್ಕ ಕೋಲಶಿರ್ಸಿ ಹೇಳಿದ್ದಾರೆ.

    ತಾಲೂಕಿನಲ್ಲಿ ಯಾವುದೇ ಅತಿಕ್ರಮಣದಾರರಿಗೆ ಮತ್ತು ರೈತರಿಗೆ ತೊಂದರೆ ಆದಾಗ ಪಕ್ಷಾತೀತವಾಗಿ ಬೆಂಬಲಕ್ಕೆ ನಿಲ್ಲುವ ಏಕೈಕ ವ್ಯಕ್ತಿ ವಸಂತ ನಾಯ್ಕ. ತಾಲೂಕಿನಲ್ಲಿ ಎಲ್ಲೇ ಅರಣ್ಯ ಅಧಿಕಾರಿಗಳು ರೈತರ ಜಮೀನಿನಲ್ಲಿದ್ದ ಗಿಡವನ್ನು ಕೀಳುವುದು, ಅವರ ಮನೆಯನ್ನ ಕೀಳುವುದು ಈ ರೀತಿ ಮಾಡಲು ಮುಂದಾದಾಗ ವಸಂತ ನಾಯ್ಕರವರು ನೇರವಾಗಿ ಅಧಿಕಾರಿಗಳೊಂದಿಗೆ ಜಗಳಕ್ಕಿಳಿದು ರೈತರಿಗೆ ಹೆಗಲಾಗಿ ನಿಂತಿದ್ದಾರೆ. ಇದರ ಬಗ್ಗೆ ಮಾಹಿತಿ ಬೇಕಂದ್ರೆ ತಾಲೂಕಿನ ಯಾವುದೇ ರೈತರನ್ನ ಕೇಳಿ ಎಂದಿದ್ದಾರೆ.

    ಈ ಆಮ್ ಆದ್ಮಿ ಪಕ್ಷದ ವೀರಭದ್ರ ನಾಯ್ಕರವರು ಈ ಹಿಂದೆ ರೈತ ಸಂಘದ ಅಧ್ಯಕ್ಷರಾಗಿದ್ರು. ಆದರೆ ಇವರಿಂದ ರೈತರಿಗೆ ಯಾವುದೇ ಅನುಕೂಲ ಆಗಿಲ್ಲ. ಇದು ಇಡೀ ತಾಲೂಕಿಗೆ ಗೊತ್ತಿರೋ ವಿಚಾರ. ಇವರು ನಾಲ್ಕೈದು ಜನರನ್ನ ಕರೆದುಕೊಂಡು ಹೋಗಿ ಮನವಿ ಸಲ್ಲಿಸಿದ್ದಷ್ಟೇ ಬಿಟ್ರೆ ರೈತರನ್ನ ಒಬ್ರನ್ನು ಕರೆದುಕೊಂಡು ಹೋಗಿಲ್ಲ. ರೈತರನ್ನ ಕರೆದುಕೊಂಡು ಯಾವುದೇ ರೀತಿ ಹೋರಾಟ ಮಾಡಿಲ್ಲ. ಬರೀ ಮಾತಲ್ಲಿ ಶೋ ಕೊಡೋದಷ್ಟು ಬಿಟ್ರೆ ಇವರಿಂದ ಬೇರೇನೂ ನಿರೀಕ್ಷಿಸಲು ಆಗಲ್ಲ ಎಂದಿದ್ದಾರೆ.

    300x250 AD

    ರೈತರಿಗೆ ಬೆಳೆ ವಿಮೆ ಕೊಡ್ಸೋ ವಿಚಾರದ ಬಗ್ಗೆ ಇವರು ಮಾತಾಡಲ್ಲ. ರೈತರನ್ನ ಒಕ್ಕಲೆಬ್ಬಿಸೋಕೆ ಬಂದಾಗ ಇವರು ಕಾಣಿಸ್ಕೊಳ್ಳೋದೆ ಇಲ್ಲ. ಗಂಟೆಗೆ ಒಂದೊಂದು ಪಕ್ಷ ಚೇಂಜ್ ಮಾಡ್ತಾರೆ. ತಿಳಿಯದೇ ಏನೇನೋ ಮಾತಾಡ್ತಾರೆ. ಈಗಾಗಲೇ ಇವರು ರೈತ ಸಂಘದಿಂದ ಅನೇಕ ಲಾಭಗಳನ್ನು ಪಡೆದುಕೊಂಡು ರೈತರಿಗೆ ಗುಡ್ ಬೈ ಹೇಳಿ ರೈತರಿಗೆ ಅನ್ಯಾಯ ಮಾಡಿದ್ದಾರೆ. ದೆಹಲಿಯಲ್ಲಿ ಬೃಹತ್ ಮಟ್ಟದ ರೈತರ ಹೋರಾಟ ರೈತರೇ ಸರ್ಕಾರದ ವಿರುದ್ಧವಾಗಿ ನಡೆಸಿದಾಗ ಇವರು ರೈತ ಸಂಘದ ಅಧ್ಯಕ್ಷರಾಗಿ ತಾಲೂಕಿನ ಎಲ್ಲಿಯೂ ಆ ಹೋರಾಟಕ್ಕೆ ಬೆಂಬಲ ಸೂಚಿಸಿಲ್ಲ. ಇಲ್ಲೇ ಗೊತ್ತಾಗುತ್ತೆ ಈ ವೀರಭದ್ರ ನಾಯ್ಕರವರ ರೈತ ಪ್ರೇಮ ಎಂದು ಪ್ರಕಟಣೆಯಲ್ಲಿ ಟಿಕೀಸಿದ್ದಾರೆ.

    Share This
    300x250 AD
    300x250 AD
    300x250 AD
    Leaderboard Ad
    Back to top