ಸಿದ್ದಾಪುರ: ದೇಶದ ಅತ್ಯುತ್ತಮ ಚೀಫ್ ಇನೋವೇಷನ್ ಆಫೀಸರ್ ಗೌರವಕ್ಕೆ ಪಾತ್ರರಾದ ,ಭಾರತ ಮೂಲದ ಬಹುರಾಷ್ಟ್ರೀಯ ಸ್ಮಾರ್ಟ ಅಫ್ ಕಂಪನಿ ಬ್ಲೂಮ್ ವ್ಯಾಲೂ ಕಂಪನಿಯ ಕೋ ಫೌಂಡರ್ ಹಾಗೂ ಸಿಇಒ ಆದ ತಾಲೂಕಿನ ಕಲಗಾರು ಮೂಲದ ಸಂಪೂರ್ಣ ಹೆಗಡೆಯವರಿಗೆ ರಾಷ್ಟ್ರೀಯ ಸೇವಾ ಯೋಜನೆ ಮೈಸೂರು ವಿಶ್ವವಿದ್ಯಾನಿಲಯ, ಕರ್ನಾಟಕ ಯುವಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಭಾರತೀಯ ಗ್ರಾಮೀಣ ಶೈಕ್ಷಣಿಕ ಅಭಿವೃದ್ಧಿ ಹಾಗೂ ಆವಿಷ್ಕಾರಿ ತಂತ್ರಜ್ಞಾನ ಕೇಂದ್ರದ ಸಹಭಾಗಿತ್ವದಲ್ಲಿ ಕರ್ನಾಟಕ ಕಣ್ಮಣಿ ರಾಜ್ಯ ಪ್ರಶಸ್ತಿ ದೊರೆತಿದೆ.
ಪ್ರಶಸ್ತಿ ಪುರಸ್ಕಾರ ಸಮಾರಂಭ ಮೈಸೂರಿನ ಮಾನಸ ಗಂಗ್ರೋತಿಯ ಲಲಿತಾ ಕಲಾಮಂದಿರದಲ್ಲಿ ನಡೆಯಲಿದೆ. ಎನ್.ಎಸ್.ಎಸ್ ವಿಭಾಗೀಯ ನಿರ್ದೇಶನಾಲಯದ ಕೆ.ವಿ.ಖಾಧ್ರಿ ನರಸಿಂಹಯ್ಯ ಕಾರ್ಯಕ್ರಮ ಉದ್ಘಾಟಿಸುವರು. ಕ್ರೆಡಿಟ್ ಐ ಸಂಸ್ಥೆಯ ಅಧ್ಯಕ್ಷೆ ಕೆ.ಜಿ. ಶೈಲಜ ಸಮಾರಂಭದ ಅಧ್ಯಕ್ಷತೆ ವಹಿಸಲಿದ್ದು, ಭಾರತ ಸರಕಾರದ ಯುವ ವ್ಯವಹಾರ ಹಾಗೂ ಕ್ರೀಡಾ ಸಚಿವಾಲಯದ ಯೂತ್ ಆಫೀಸರ್ ವೈ.ಎಂ.ಉಪ್ಪಿನ್ ಉಪಸ್ಥಿತರಿರುತ್ತಾರೆ. ಮೈಸೂರು ವಿಶ್ವವಿದ್ಯಾಲಯದ ಕುಲಸಚಿವರಾದ ಡಾ.ಆರ್.ಶಿವಪ್ಪ ಪ್ರಶಸ್ತಿ ವಿತರಿಸುತ್ತಾರೆ ಎಂದು ಅಯೋಜಕರು ತಿಳಿಸಿರುತ್ತಾರೆ.