ಅಂಕೋಲಾ: ತನ್ನ ಮೂವರು ಮಕ್ಕಳನ್ನು ಕರೆದುಕೊಂಡು ಮಹಿಳೆಯೋರ್ವಳು ಮನೆಯಿಂದ ಹೋದವಳು ಮನೆಗೆ ಮರಳಿ ಬಾರದೆ ನಾಪತ್ತೆಯಾಗಿರುವ ಕುರಿತು ದೂರು ದಾಖಲಾಗಿದೆ.
ತಾಲೂಕಿನ ರಾಮನಗುಳಿಯ ರುಕ್ಸಾನಾ ಬೇಗಂ (29) ಅ.28ರ ಮಧ್ಯರಾತ್ರಿ ಮನೆಯಿಂದ ತನ್ನ ಮೂವರು ಮಕ್ಕಳೊಂದಿಗೆ ಯಾರಿಗೂ ಹೇಳದೆ ಕೇಳದೆ ಎಲ್ಲಿಗೋ ಹೋದವಳು, ಇದುವರೆಗೂ ವಾಪಸ್ಸು ಮನೆಗೆ ಬಾರದೇ ನಾಪತ್ತೆಯಾಗಿದ್ದಾಳೆ. ಈ ಬಗ್ಗೆ ಕಾಣೆಯಾದವಳ ಪತಿ ಪೊಲೀಸ್ ದೂರು ನೀಡಿದ್ದು, ಈ ಮಹಿಳೆಯನ್ನು ಯಾರಾದರೂ ಕಂಡಲ್ಲಿ ಪೊಲೀಸ್ ಠಾಣೆಗೆ ಮಾಹಿತಿ ನೀಡಲು ಪೊಲೀಸ್ ಪ್ರಕಟಣೆ ತಿಳಿಸಿದ್ದಾರೆ.