ಜೊಯಿಡಾ: ಗೋವಾದಿಂದ ಅಕ್ರಮವಾಗಿ ಸಾಗಿಸುತ್ತಿದ್ದ ಮದ್ಯವನ್ನು ಸಾಗಾಟಕ್ಕೆ ಬಳಸಿದ್ದ ಕಾರಿನ ಸಮೇತ ತಾಲೂಕಿನ ಅನಮೋಡ ಅಬಕಾರಿ ಚೆಕ್‌ಪೋಸ್ಟ್ ಬಳಿ ಅಬಕಾರಿ ಸಿಬ್ಬಂದಿ ವಶಪಡಿಸಿಕೊಂಡಿದ್ದಾರೆ.
ಕಾರಿನಲ್ಲಿ 75.750 ಲೀ. ಗೋವಾ ಮದ್ಯವನ್ನು ಅಕ್ರಮವಾಗಿ ಸಾಗಿಸಲಾಗುತ್ತಿತ್ತು. ಕಾರು ಚಾಲಕ ಮಧ್ಯಪ್ರದೇಶ ಮೂಲದ ವೈಭವ ಇಂದೋರ್‌ನನ್ನು ವಶಕ್ಕೆ ಪಡೆಯಲಾಗಿದೆ. ವಾಹನದ ಮಾಲೀಕನ್ನು ಪತ್ತೆ ಹಚ್ಚಲಾಗುತ್ತಿದೆ. ವಾಹನ ಮತ್ತು ಅಕ್ರಮ ಮದ್ಯದ ಒಟ್ಟು ಮೊತ್ತ 13.35 ಲಕ್ಷ ಎಂದು ಅಂದಾಜಿಸಲಾಗಿದೆ.
ಮಂಗಳೂರು ಅಬಕಾರಿ ಜಂಟಿ ಆಯುಕ್ತರು ಹಾಗೂ ಅಬಕಾರಿ ಉಪ ಆಯುಕ್ತರಾದ ವನಜಾಕ್ಷಿ ಎಂ. ಅವರ ನಿರ್ದೇಶನದ ಮೇರೆಗೆ ಯಲ್ಲಾಪುರ ಅಬಕಾರಿ ಉಪ ಅಧೀಕ್ಷಕ ಶಂಕರಗೌಡ ಪಾಟೀಲ ಅವರ ಮಾರ್ಗದರ್ಶನದಲ್ಲಿ ಅನಮೋಡ ಅಬಕಾರಿ ಉಪನಿರೀಕ್ಷಕ ಟಿ.ಬಿ.ಮಲ್ಲಣ್ಣವರ ಸಿಬ್ಬಂದಿಗಳಾದ ರಾಜು ಭಟ್ಕಳ, ನಾಗೇಂದ್ರ ಬಿ., ದೀಪಕ ಬಾರಾಮತಿ ಇದ್ದರು.