• Slide
    Slide
    Slide
    previous arrow
    next arrow
  • ಮೀನುಗಾರರು ಭದ್ರತಾ ವ್ಯವಸ್ಥೆಗೆ ಕಣ್ಣು, ಕಿವಿ ಇದ್ದಂತೆ: ಮನೋಜ್ ಬಾಡಕರ್

    300x250 AD

    ಸಮುದ್ರದಲ್ಲಿ ಮೀನುಗಾರರಿಗಿಂತ ಎಕ್ಸ್ಪರ್ಟ್ ಯಾರಿಲ್ಲ. ಮೀನುಗಾರರು ನಮ್ಮ ದೇಶದ ಭದ್ರತಾ ವ್ಯವಸ್ಥೆಗೆ ಕಣ್ಣು ಮತ್ತು ಕಿವಿ ಇದ್ದಂತೆ ಎಂದು ಮನೋಜ್ ಬಾಡಕರ್ ಹೇಳಿದರು.

    ಕೋಸ್ಟ್ ಗಾರ್ಡ್ ಪಶ್ಚಿಮ ವಲಯ ಕಮಾಂಡರ್ ಆಗಿ ಅಧಿಕಾರ ವಹಿಸಿಕೊಂಡ ಬಳಿಕ ವ್ಯಾಪ್ತಿಯ ವಿವಿಧೆಡೆ ಭೇಟಿ ನೀಡಿದ್ದೇನೆ. ಜಿಲ್ಲಾಡಳಿತದ ಅಧಿಕಾರಿಗಳನ್ನೂ ಭೇಟಿಯಾಗಿ ಅವರಿಗೆ ನಮ್ಮ ಕಡೆಯಿಂದ ಆಗಬೇಕಾದದ್ದು ಹಾಗೂ ನಮಗೆ ಅವರ ಕಡೆಯಿಂದ ಆಗಬೇಕಾದ ಕಾರ್ಯಚಟುವಟಿಕೆಗಳ ಬಗ್ಗೆ ಮಾತುಕತೆ ನಡೆಸಿದ್ದೇನೆ. ಮೀನುಗಾರರ ವಿವಿಧ ಸಂಘಟನೆಗಳ ಪದಾಧಿಕಾರಿಗಳನ್ನ ಭೇಟಿಯಾಗಿ ಮಾತುಕತೆ ನಡೆಸಿದ್ದು, ಎಲ್ಲರ ಸಹಯೋಗದೊಂದಿಗೆ ಕರಾವಳಿಯನ್ನ ಭದ್ರಪಡಿಸಬೇಕಿದೆ ಎಂದರು.

    300x250 AD

    ಉಗ್ರ ಕಸಬ್ ಮುಂಬೈ ದಾಳಿ ನಡೆಸಲು ಸಮುದ್ರ ಮಾರ್ಗದಲ್ಲಿ ಬೋಟ್‌ನಲ್ಲಿ ಬಂದಿದ್ದರು. ಹೀಗಾಗಿ ಇಂಥ ಘಟನೆಗಳು ಮತ್ತೆ ಮರುಕಳಿಸಬಾರದು. ಇದಕ್ಕಾಗಿ ಮೀನುಗಾರರ ಸಹಕಾರ ಹೆಚ್ಚಿದೆ. ಅವರಿಗೆ ಈಗಾಗಲೇ ತಿಳಿಸಿದ್ದೇನೆ, ಯಾವುದೇ ಅನುಮಾನಾಸ್ಪದ ಚಟುವಟಿಕೆ, ಬೋಟ್‌ಗಳು ಕಂಡುಬಂದಲ್ಲಿ ಕೋಸ್ಟ್ ಗಾರ್ಡ್ಗೆ ಮಾಹಿತಿ ನೀಡಲು ಸೂಚಿಸಿದ್ದೇನೆ ಎಂದರು.

    Share This
    300x250 AD
    300x250 AD
    300x250 AD
    Leaderboard Ad
    Back to top