• Slide
    Slide
    Slide
    previous arrow
    next arrow
  • ಯುವಜನರಿಗೆ ಉದ್ಯೋಗ ಸಿಗಲು ಕೈಗಾರಿಕೆಗಳು ಬರಬೇಕಿದೆ: ಬಾಡಕರ್

    300x250 AD

    ಕಾರವಾರ: ನಗರದಲ್ಲಿ ಇಂಡಸ್ಟ್ರಿಗಳು ಬರಬೇಕು. ಇಲ್ಲಿನ ಯುವಕರಿಗೆ ಉದ್ಯೋಗ ಸಿಗುವಂತಾಗಬೇಕು. ಕಾರವಾರದಲ್ಲಿ ಕೇವಲ ಯುನಿಫಾರ್ಮ್ ಜನರು ಕಾಣುತ್ತಿದ್ದು, ನಮ್ಮವರೆಲ್ಲ ವಲಸೆ ಹೋಗುತ್ತಿದ್ದಾರೆ ಎಂದು ಕೋಸ್ಟ್ ಗಾರ್ಡ್ ಪಶ್ಚಿಮ ವಲಯ ಕಮಾಂಡರ್ ಮನೋಜ್ ಬಾಡಕರ್ ಹೇಳಿದರು.

    ಕೋಸ್ಟ್ ಗಾರ್ಡ್ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕೋಸ್ಟ್ ಗಾರ್ಡ್ ಹೊರತುಪಡಿಸಿ ಕಾರವಾರಿಗನಾಗಿ ಹೇಳುವುದಾದರೆ ಇಲ್ಲಿ ಕೈಗಾರಿಕೆಗಳು ಬಂದರೆ ಅಭಿವೃದ್ಧಿ ಆಗಲಿದೆ. ನಾನು ಕಾರವಾರಕ್ಕೆ ಬಹಳಷ್ಟು ಸಾರಿ ಬಂದು ಹೋಗುತ್ತಿರುತ್ತೇನೆ. ನಮ್ಮ ಮನೆಗೆ ಸಾಕಷ್ಟು ಜನ ಬಂದು ನಮ್ಮ ಮಗನಿಗೆ ಉದ್ಯೋಗ ಕೊಡಿಸಿ, ಕಡಿಮೆ ಸಂಬಳವಾದರೂ ಪರವಾಗಿಲ್ಲ ಕಾರವಾರದಲ್ಲಿ ಕೊಡಿಸಿ ಎನ್ನುತ್ತಾರೆ. ಕಾರವಾರದ ಜನತೆಗೆ ದುರಾಸೆ, ಹೆಚ್ಚಿನ ಮಹಾತ್ವಾಕಾಂಕ್ಷೆ ಇಲ್ಲ. ನಾವೇನು ಪಡೆದುಕೊಂಡಿದ್ದೇವೋ ಅದರಿಂದಲೇ ಸಂತಸದಿಂದಿದ್ದೇವೆ. ಆದರೆ ಬೇರೆಯವರಿಗೆ ಆಗಿದ್ದು ನನಗಾಗಿಲ್ಲವಲ್ಲ ಎಂದುಕೊಂಡು ನಮ್ಮದನ್ನು ಮಾತ್ರ ಭದ್ರಪಡಿಸಿಕೊಳ್ಳುವುದು ನಮ್ಮ ಬಹುದೊಡ್ಡ ರೋಗ ಎಂದರು.

    300x250 AD

    ನಮ್ಮ ಜನ ಕಾರವಾರದಿಂದ ಹೊರ ಹೋಗಲು ಬಯಸುವುದಿಲ್ಲ. ಪರಿಸರದ ಮೇಲೆ ಪರಿಣಾಮ ಬೀರದಂಥ ಕೈಗಾರಿಕೆಗಳು ಇಲ್ಲಿಗೆ ಬರಲೇಬೇಕು. ಇಲ್ಲದಿದ್ದರೆ ನಮ್ಮ ಮಕ್ಕಳು ಎಲ್ಲಿಗೆ ಹೋಗಬೇಕು? ಕಾರವಾರದಿಂದ ಎಲ್ಲರೂ ವಲಸೆ ಹೋಗುತ್ತಿರುವುದು ಬೇಸರದ ಸಂಗತಿ. ಕೈಗಾರಿಕೆ ಬಂದರೆ ಎಲ್ಲವೂ ಅಭಿವೃದ್ಧಿ ಆಗುತ್ತದೆ ಎಂದರು.

    Share This
    300x250 AD
    300x250 AD
    300x250 AD
    Leaderboard Ad
    Back to top