Slide
Slide
Slide
previous arrow
next arrow

ಕಲಾತಂಡಗಳ ಪುನರಾಯ್ಕೆಗೆ ಒತ್ತಾಯ

300x250 AD

ಕಾರವಾರ: ಇಲಾಖೆಗಳ ಜನಪರ ಯೋಜನೆಗಳ ಪ್ರಚಾರಕ್ಕೆ ಕಲಾತಂಡಗಳ ಆಯ್ಕೆಯನ್ನು ಪುನರ್ ಪರಿಶೀಲನೆ ನಡೆಸಿ ಆಯ್ಕೆ ಪ್ರಕ್ರಿಯೆ ನಡೆಸುವಂತೆ ಜಿಲ್ಲಾ ಜಾನಪದ ಕಲಾವಿದರು ಹೆಸರಿನಲ್ಲಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿದೆ.

     ಹಲವಾರು ವರ್ಷಗಳಿಂದ ಜನರಿಗೆ ಇಲಾಖೆಯ ಕಾರ್ಯಕ್ರಮಗಳನ್ನು ಜನಸಾಮಾನ್ಯರ ತನಕ ಕೊಂಡೊಯ್ಯಲು ಜನರಿಗೆ ಅರ್ಥವಾಗುವ ರೀತಿಯಲ್ಲಿ ಬೀದಿ ನಾಟಕ ಕಲಾವಿದರು ಇಂತಹ ಕಾರ್ಯಕ್ರಮಗಳನ್ನು ನಂಬಿ ಜೀವನ ನಡೆಸುತ್ತಿದ್ದಾರೆ. ಆದರೆ ವಾರ್ತಾ ಮತ್ತು ಪ್ರಸಾರ ಇಲಾಖೆಯ ಸಂಗೀತ ವಿಭಾಗ ಮತ್ತು ನಾಟಕ ವಿಭಾಗಗಳಲ್ಲಿ ಬೀದಿ ನಾಟಕ ತಂಡಗಳನ್ನು ಆಯ್ಕೆ ಮಾಡಲು ಕಲಾತಂಡಗಳನ್ನು ಅ.18ರಂದು ಆಹ್ವಾನಿಸಿತ್ತು. ಅಂತೆಯೇ ಕಲಾತಂಡಗಳು ತಮ್ಮ ಪ್ರದರ್ಶನವನ್ನು ನೀಡಿದವು. ಆದರೆ ಇಲಾಖೆ ತನ್ನ ನಿಯಮಗಳನ್ನು ಗಾಳಿಗೆ ತೂರಿ ಕಲಾತಂಡಗಳನ್ನು ಆಯ್ಕೆ ಮಾಡಿದೆ ಎಂದು ದೂರಿದ್ದಾರೆ.

     ಜಿಲ್ಲೆಯ ಕಲಾವಿದರಿಗೆ ಮಾತ್ರ ಕೊಡುತ್ತೇವೆ ಎಂದು ಹೇಳಿ ಹೊರ ಜಿಲ್ಲೆಯ ಕಲಾವಿದರು ಇರುವ ತಂಡಗಳನ್ನು ಆಯ್ಕೆ ಮಾಡಿಕೊಂಡಿದೆ. ಇನ್ನು ಕಲಾವಿದರನ್ನು ಆಯ್ಕೆ ಮಾಡಲು ನಿರ್ಣಾಯಕರು, ಅಧಿಕಾರಿಗಳು ಇದ್ದರು. ನಿರ್ಣಾಯಕರನ್ನಾಗಿ ಆಯ್ಕೆ ಮಾಡಲು ಹಿರಿಯ ಸಾಹಿತಿಗಳನ್ನು ಅಥವಾ ಜಿಲ್ಲೆಯ ಪ್ರತಿಷ್ಠಿತ ಕಲಾವಿದರನ್ನು ಮಾಡಬೇಕು. ಇದು ಹೆಚ್ಚಿನ ಕಲಾತಂಡಗಳಿಗೆ ತಮ್ಮ ತಂಡ ಉತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸಿದರೂ ಬೇಸರಗೊಂಡಿದ್ದಾರೆ. ಕಲಾತಂಡಗಳನ್ನು ಆಯ್ಕೆ ಮಾಡಲು ನಿರ್ಣಾಯಕರನ್ನು ಹೊರಗಿನವರನ್ನು ನಿಯೋಜಿಸಬೇಕಿತ್ತು. ಇನ್ನು ಹಲವಾರು ವರ್ಷಗಳಿಂದ ತಂಡಗಳಿಗೆ ಪ್ರಾಮುಖ್ಯತೆ ಕೊಡುತ್ತಿರುವುದರಿಂದ ಉಳಿದ ಕಲಾವಿದರಿಗೆ ಅನ್ಯಾಯವಾದಂತಾಗಿದೆ. ಕಲಾತಂಡಗಳನ್ನು ಪುನಃ ಆಯ್ಕೆ ಮಾಡಬೇಕು. ಇಲ್ಲವೇ ಎಲ್ಲಾ ಕಲಾತಂಡಗಳಿಗೂ ಕಾರ್ಯಕ್ರಮಗಳನ್ನು ನೀಡಬೇಕು. ಆ ಮೂಲಕ ಕಲಾವಿದರನ್ನು ಪೋಷಿಸಬೇಕು ಎಂದು ಮನವಿ ಮಾಡಿಕೊಂಡಿದ್ದಾರೆ.

300x250 AD

ಸಪ್ತಸರ ಸೇವಾ ಸಂಸ್ಥೆಯ ಚಂದ್ರಶೇಖರ ಅಂಬಿಗ, ಈಶ್ವರಿ ಕಲಾ ಸಂಘದ ವಾಸುದೇವ ಮಡಿವಾಳ, ಗಂಗಾಧರ ಮಡಿವಾಳ, ಅಂಕೋಲಾ ಸಣ್ಣಮ್ಮ ದೇವಿ ಕಲಾಸಂಘದ ವಿನೋದ್ ಗಾಂವಕರ್, ಭರತ್, ಸುಮಂಗಲ ದೇಸಾಯಿ, ಸುಕನ್ಯಾ ದೇಸಾಯಿ ಮುಂತಾದವರಿದ್ದರು.

Share This
300x250 AD
300x250 AD
300x250 AD
Back to top