ಶಿರಸಿ: ಹಾಲಿನ ದರವನ್ನ ಏರಿಸಬೇಕು, ಹಾಗೂ ಹಾಲಿನ ಡೈರಿಯ ಅಧ್ಯಕ್ಷರನ್ನ ಬದಲಿಸಬೇಕೆಂದು ಆಗ್ರಹಿಸಿ ತಾಲೂಕಿನ ಬದನಗೋಡ ಪಂಚಾಯತಿ ವ್ಯಾಪ್ತಿಯ ಡೈರಿಗೆ ಹಾಲುವ ಕೊಡುವ ರೈತರು ಡೈರಿಯ ಮುಂದೆ ಶನಿವಾರ ಪ್ರತಿಭಟಿಸಿದರು.
ದಾಸನಕೊಪ್ಪ ಹಾಲಿನ ಡೈರಿ ವ್ಯಾಪ್ತಿಗೆ ವದ್ದಲ, ದನಗನಳ್ಳಿ, ಬದನಗೋಡ, ರಂಗಾಪುರ, ಕುಪಗಡ್ಡೆ, ಹೊಸಕೊಪ್ಪ, ಸಂತೊಳ್ಳಿ, ಕಾಳಂಗಿ ಸೇರಿದಂತೆ 13 ಹಳ್ಳಿಗಳಿಂದ 200ಕ್ಕೂ ಹೆಚ್ಚಿನ ರೈತರು ಹಾಲನ್ನ ಕೊಡುತ್ತಿದ್ದಾರೆ. ಇದರಿಂದಾಗಿ ಡೈರಿಗೆ 500 ಕ್ಕೂ ಹೆಚ್ಚಿನ ಲೀಟರ್ ಹಾಲು ದಾಸನಕೊಪ್ಪದ ಹಾಲಿನ ಡೈರಿಯಲ್ಲಿ ಸಂಗ್ರಹವಾಗುತ್ತಿದೆ. ಆದರೆ ಹಾಲಿನ ಡೈರಿನ ಆಡಳಿತ ಮಂಡಳಿಯವರು ರೈತರಿಗೆ ನೀಡಬೇಕಾದ ಸೌಲಭ್ಯವನ್ನು ಕಲ್ಪಿಸುತ್ತಿಲ್ಲವೆಂದು ರೈತರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ರೈತರು ಕಳೆದ ಸೆ.24ರಂದು ಅಧ್ಯಕ್ಷರೊಂದಿಗೆ ಸಭೆ ನಡೆಸಿ ಹಿಂಡಿ ದರ ಗಗನಕ್ಕೇರಿದೆ. ಆದರೆ ಹಾಲಿನ ದರ ಇಳಿಕೆ ಕಂಡಿದ್ದು, ಇದರಿಂದ ರೈತರಿಗೆ ಹಾನಿಯಾಗುತ್ತಿದ್ದು ಹಿಂಡಿ ದರವನ್ನ ಇಳಿಸಿ ಹಾಲಿನ ದರ ಏರಿಕೆ ಮಾಡಬೇಕೆಂದು ಮನವಿಮಾಡಿದಾಗ ಅಧ್ಯಕ್ಷರು ಸಮ್ಮತಿ ಸೂಚಿಸಿದ್ದರು. ಎರಡು ವಾರದ ಬಳಿಕ ಹಿಂಡಿದರ 50 ಕೆ.ಜಿ ಚೀಲಕ್ಕೆ 1260 ರೂ ಬದಲಾಗಿ 1560ರೂ ಏರಿಕೆಯಾಗಿತ್ತು. ಇದರಿಂದ ಅಸಮ
ರೈತರು ಕಳೆದ ಸೆ.24ರಂದು ಅಧ್ಯಕ್ಷರೊಂದಿಗೆ ಸಭೆ ನಡೆಸಿ ಹಿಂಡಿ ದರ ಗಗನಕ್ಕೇರಿದೆ. ಆದರೆ ಹಾಲಿನ ದರ ಇಳಿಕೆ ಕಂಡಿದ್ದು, ಇದರಿಂದ ರೈತರಿಗೆ ಹಾನಿಯಾಗುತ್ತಿದ್ದು ಹಿಂಡಿ ದರವನ್ನ ಇಳಿಸಿ ಹಾಲಿನ ದರ ಏರಿಕೆ ಮಾಡಬೇಕೆಂದು ಮನವಿಮಾಡಿದಾಗ ಅಧ್ಯಕ್ಷರು ಸಮ್ಮತಿ ಸೂಚಿಸಿದ್ದರು. ಎರಡು ವಾರದ ಬಳಿಕ ಹಿಂಡಿದರ 50 ಕೆ.ಜಿ ಚೀಲಕ್ಕೆ 1260 ರೂ ಬದಲಾಗಿ 1560ರೂ ಏರಿಕೆಯಾಗಿತ್ತು. ಇದರಿಂದ ಅಸಮಾಧಾನಗೊಂಡ ರೈತರು ದೀಪಾವಳಿ ಮುಗಿದ ಬಳಿಕ ಅಧ್ಯಕ್ಷರೊಂದಿಗೆ ಮತ್ತೆ ಸಭೆ ನಡೆಸಲು ರೈತರ ಅನುಕೂಲಕ್ಕೆ ತಕ್ಕಂತೆ ಸಮಯ ನಿಗದಿಮಾಡಿದ್ದರು. ಆದರೆ ಅಧ್ಯಕ್ಷರು ರೈತರಿಗೆ ಹೇಳಿದ ಸಮಯಕ್ಕೆ ಬರದೇ ತಮ್ಮ ಸಮಯಕ್ಕೆ ಬಂದು ಸಭೆ ನಡೆಸಿ ಹೋಗಿದ್ದರು. ಇದರಿಂದ ರೊಚ್ಚಿಗೆದ್ದ ರೈತರು ಇಂದು ಹಾಕಿನ ಡೈರಿಯ ಮುಂದೆ ಪ್ರತಿಭಟನೆ ನಡೆಸಿರುವುದಾಗಿ ರೈತರು ಹೇಳಿದರು.
ಪ್ರತಿಭಟನೆಯಲ್ಲಿ ಶಂಭು ಮೇದಾರ,ಗಣಪತಿ, ಮಂಜಣ್ಣ ಆರ್ಯರ್, ಕೃಷ್ಣಾ ಶೇಟ್ ಬದನಗೋಡ, ಶೇಖರ ಬದನಗೋಡ ಇತರರು ಪಾಲ್ಗೊಂಡಿದ್ದರು.
ಹಾಲಿನ ಡೈರಿಯಲ್ಲಿ ಅವ್ಯವಹಾರ ನಡೆಯುತ್ತಿರುವ ಬಗ್ಗೆ ಅನುಮಾನವಿದೆ. ಡೈರಿಯವರು ಲೀಟರ್ ಗೆ ಸರಕಾರದ ಐದು ರೂಪಾಯಿ ಪ್ರೋತ್ಸಾಹ ಧನ ಸೇರಿ 31ರೂ ಗೆ ನಮ್ಮಿಂದ ಹಾಲು ಪಡೆದು 35ರೂ ಗೆ ಮಾರುತ್ತಿದ್ದಾರೆ. ವ್ಯತ್ಯಾಸದ ಹಣ ಎಲ್ಲಿ ಹೋಯಿತೆಂದು ಕೇಳಿದರೆ ನಾವು ಸರಕಾರಕ್ಕೆ ಟ್ಯಾಕ್ಸ್ ತುಂಬುತ್ತಿದ್ದೇವೆಂದು ಹೇಳುತ್ತಿದ್ದಾರೆ. ಆದರೆ ಅವರು ಮಾರುವಾಗ ಜಿ ಎಸ್ ಟಿ ಹಾಕುತ್ತಿಲ್ಲ. ನಮ್ಮಿಂದ ಪಡೆಯುವಾಗ ಮಾತ್ರ ಜಿಎಸ್‌ಟಿ ಹಾಕುತ್ತಾರೆ. ಈ ಬಗ್ಗೆ ಲೆಕ್ಕ ಕೇಳಿದರೆ ಕೊಡುವುದಿಲ್ಲವೆಂದು ಹೇಳುತ್ತಾರೆ. ಈ ಬಗ್ಗೆ ತನಿಖೆಯಾಗಬೇಕು.
· ಶಂಭು ಮೇದಾರ, ಹೈನುಗಾರ