Slide
Slide
Slide
previous arrow
next arrow

ಜನಗಣತಿ ಕಾರ್ಯದಂತೆ ಕೃಷಿಗಣತಿಗೂ ಪ್ರಾಮುಖ್ಯತೆ ನೀಡಲು ಡಿಸಿ ಸೂಚನೆ

300x250 AD

ಕಾರವಾರ: ದೇಶದಲ್ಲಿ ಪ್ರತಿ 10 ವರ್ಷಗಳಿಗೊಮ್ಮೆ ನಡೆಯುವ ಜನಗಣತಿ ಕಾರ್ಯವು ಎಷ್ಟು ಮುಖ್ಯವೋ ಅಷ್ಟೇ ಪ್ರಾಮುಖ್ಯತೆಯನ್ನು ಪ್ರತಿ 5 ವರ್ಷಗಳಿಗೊಮ್ಮೆ ನಡೆಯುವ ಕೃಷಿಗಣತಿಗೂ ನೀಡಬೇಕು ಎಂದು ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ ಹೇಳಿದರು.

ಇಲ್ಲಿನ ತಾಲೂಕ ಪಂಚಾಯತ ಸಭಾಭವನದಲ್ಲಿ ನಡೆದ 11ನೇ ಕೃಷಿಗಣತಿ ತರಬೇತಿಯನ್ನು ದೀಪ ಬೆಳಗಿಸುವುದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಕೃಷಿ ಅಂಕಿ- ಅಂಶಗಳನ್ನು ಸಂಗ್ರಹಿಸುವ ಬೃಹತ್ ಕಾರ್ಯಚರಣೆಯ ಭಾಗವಾಗಿದೆ. ದೇಶದಲ್ಲಿನ ಡಿಜಿಟಲ್ ಕ್ರಾಂತಿಯನ್ನು ಉಲ್ಲೇಖಿಸಿದ ಅವರು ಕಳೆದ 10 ಕೃಷಿಗಣತಿಯ ನಮೂನೆಗಳನ್ನು ಕೈಬರಹದ ಮೂಲಕ ಭರ್ತಿ ಮಾಡಲಾಗುತ್ತಿತ್ತು. ಆದರೆ ಈಗ 11ನೇ ಕೃಷಿಗಣತಿಯಲ್ಲಿ ಪ್ರಪ್ರಥಮ ಬಾರಿಗೆ ಮೊಬೈಲ್ ಆ್ಯಪ್ ಮೂಲಕ ಅಂಕಿ ಅಂಶಗಳನ್ನು ಸಂಗ್ರಹಿಸಲಾಗುತ್ತಿದೆ ಎಂದರು. ಕೃಷಿಗಣತಿಯು ನಿಗದಿಪಡಿಸಿದ ಅವಧಿಯೊಳಗಾಗಿ ಗಣತಿ ಕಾರ್ಯ ಪೂರ್ಣಗೊಳಿಸುವಂತೆ ಸೂಚಿಸಿದರು.

ಜಿಲ್ಲಾ ಪಂಚಾಯತ ಯೋಜನಾಧಿಕಾರಿ ವಿನೋದ ವಿ.ಅಣ್ವೇಕರ್ ಮಾತನಾಡಿ, ಕೃಷಿಗಣತಿಯು ಸಾಗುವಳಿ ಹಿಡುವಳಿಗಳ ರಚನೆ ಹಾಗೂ ಅದರ ಲಕ್ಷಣಗಳ ಮಾಹಿತಿಯನ್ನು ಸಂಗ್ರಹಿಸುವ ಕೇಂದ್ರ ವಲಯದ ಒಂದು ಪ್ರಮುಖ ಯೋಜನೆಯಾಗಿದೆ. ಈ ಕೃಷಿಗಣತಿಯು ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲಿಯೂ ನಡೆಯಲಿದ್ದು ಕಂದಾಯ ಇಲಾಖೆಯ ಗ್ರಾಮ ಲೆಕ್ಕಿಗರು ಗಣತಿದಾರರಾಗಿದ್ದು ನಿಖರವಾದ ಮಾಹಿತಿ ಕಲೆ ಹಾಕಿ ಅಭಿವೃದ್ಧಿ ಯೋಜನೆಗಳಿಗೆ ಸಹಕಾರಿಯಾಗಲಿದೆ ಎಂದರು.

300x250 AD

ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿ ಸೋಮಶೇಖರ ಮೇಸ್ತ ಮಾತನಾಡಿ, 11ನೇ ಕೃಷಿಗಣತಿಯಲ್ಲಿ ಜಿಲ್ಲೆಯ ಎಲ್ಲಾ ಹಿಡುವಳಿದಾರರ ಮಾಹಿತಿಯನ್ನು ಪರಿಶಿಷ್ಠ ಜಾತಿ, ಪರಿಶಿಷ್ಟ ವರ್ಗ ಹಾಗೂ ಇತರೆ ಸಾಮಾಜಿಕ ಗುಂಪುವಾರು, ವೈಯಕ್ತಿಕ, ಜಂಟಿ ಮತ್ತು ಸಂಘ ಸಂಸ್ಥೆಗಳೂ ಸೇರಿದಂತೆ ವಿವಿಧ ವರ್ಗಾಂತಗಳಿಗೂ ಮಾಹಿತಿಯನ್ನು ಕಲೆ ಹಾಕಲಾಗುವುದು ಎಂದರು.

ಸಮಾರಂಭದಲ್ಲಿ ತಹಶೀಲ್ದಾರ ಎನ್.ಎಫ್.ನರೋನಾ, ತಾಲೂಕ ಪಂಚಾಯತಿ ಕಾರ್ಯನಿರ್ವಹಣಾಧಿಕಾರಿ ಆನಂದಕುಮಾರ, ಎನ್‌ಐಸಿಯ ಶ್ರೀಕಾಂತ ಜೋಶಿ ಹಾಗೂ ಸಿಬ್ಬಂದಿ ಇದ್ದರು.

Share This
300x250 AD
300x250 AD
300x250 AD
Back to top