ಶಿರಸಿ: ರಾಷ್ಟ್ರೀಯ ಆರೋಗ್ಯ ಅಭಿಯಾನದಡಿಯಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹೆಗಡೆಕಟ್ಟಾದ ಶ್ರೀ ಗಜಾನನ ಪ್ರೌಢಶಾಲೆಯ ವಿದ್ಯಾರ್ಥಿಗಳಿಗೆ ಭಾಷಣ ಸ್ಪರ್ಧೆ ಏರ್ಪಡಿಸಿತ್ತು. “ಆಯೋಡಿನ್ ಕೊರತೆಯಿಂದ ಉಂಟಾಗುವ ನ್ಯೂನತೆಗಳು ಮತ್ತು ಪರಿಹಾರೋಪಾಯಗಳು” ವಿಷಯ ಕುರಿತಂತೆ ಭಾಷಣ ಸ್ಪರ್ಧೆ ನಡೆಯಿತು. ಶ್ರೀಗಜಾನನ ಸೆಕೆಂಡರಿ ಸ್ಕೂಲ್ ಅಲ್ಲಿ 27 ವಿಧ್ಯಾರ್ಥಿಗಳು ವಿಷಯದ ಕುರಿತು ಭಾಷಣ ಮಂಡನೆ ಮಾಡಿದರು. ಪ್ರಥಮ ಬಹುಮಾನ ಧ್ರುವಕುಮಾರ ಬಿ.ಕೆ, ದ್ವಿತೀಯ ಬಹುಮಾನ ಧಾತ್ರಿ ಪ್ರಶಾಂತ ಹೆಗಡೆ, ತೃತೀಯ ಬಹುಮಾನ ನಮನ ಲಕ್ಷ್ಮೀನಾರಾಯಣ ಹೆಗಡೆ ಪಡೆದುಕೊಂಡರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ಗಜಾನನ ಪ್ರೌಢಶಾಲೆಯ ಮುಖ್ಯಾಧ್ಯಾಪಕ ಶೈಲೇಂದ್ರ ಎಮ್ ಹೆಚ್ ವಹಿಸಿದ್ದರು. ಅತಿಥಿಗಳಾಗಿ ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಜಿಲ್ಲಾ ಕಾರ್ಯಕ್ರಮ ಯೋಜನಾಧಿಕಾರಿ ಬಸವರಾಜ ಆಗಮಿಸಿ ಕಾರ್ಯಕ್ರಮದ ಕುರಿತು ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು. ಆರೋಗ್ಯ ಶಿಕ್ಷಣಾಧಿಕಾರಿ ಮಹಾಲಕ್ಷ್ಮಿ ಹೆಗಡೆ ಕಾರ್ಯಕ್ರಮ ನಿರ್ವಹಿಸಿದರು.