ಹೊನ್ನಾವರ; ಬ್ಲೂಫ್ಯಾಗ್ ಮಾನ್ಯತೆ ಪಡೆದ ಇಕೋಬೀಚ್ ಆವರದಲ್ಲಿ ಶುಕ್ರವಾರದಿಂದ ವಿದ್ಯುಕ್ತವಾಗಿ ಆರಂಭಗೊಂಡ ಬೀಚ್ ವಾಲಿಬಾಲ್ ಪಂದ್ಯಾವಳಿ ಸ್ಥಳಿಯರ ಅಸಮಧಾನಕ್ಕೆ ಕಾರಣವಾಯಿತು.
ಮೂರು ದಿನಗಳ ಕಾಲ ಇಕೋ ಬೀಚನಲ್ಲಿ ಆರಂಭಗೊಂಡ ರಾಷ್ಟ್ರಮಟ್ಟದ ವಾಲಿಬಾಲ್ ಪಂದ್ಯಾವಳಿಯನ್ನು ವಿಧಾನಸಭಾ ಸಭಾಪತಿಗಳು, ಜಿಲ್ಲಾ ಉಸ್ತುವರಿ ಸಚಿವರ ಸಮ್ಮುಖದಲ್ಲಿ ಚಾಲನೆ ನೀಡಲಿದೆ ಎಂದು ಆಮಂತ್ರಣ ಪತ್ರಿಕೆಯಲ್ಲಿ ನಮೂದಾಗಿತ್ತು. ಆದರೆ ಕಾರ್ಯಕ್ರಮ ಉದ್ಘಾಟನೆಗೆ ಜಿಲ್ಲಾಮಟ್ಟದ ಅಧಿಕಾರಿಗಳು ಸ್ಥಳಿಯ ಶಾಸಕರ ಹೊರತಾಗಿ ಸಭಾಪತಿಗಳು, ಸಚಿವರಾಗಲಿ, ಜಿಲ್ಲೆಯ ಇತರೆ ಶಾಸಕರು ಹಾಗೂ ವಿಧಾನಪರಿಷತ್ ಸದಸ್ಯರ ಅನುಪಸ್ಥಿತಿ ಎದ್ದು ಕಾಣುತ್ತಿತ್ತು. ರಾಷ್ಟ್ರಮಟ್ಟದ ಪಂದ್ಯಾವಳಿಯಾದರೂ ಕಾರ್ಯಕ್ರಮ ವೇದಿಕೆ ಹಾಗೂ ಪಕ್ಕದಲ್ಲಿ ಚಿಕ್ಕದಾದ ಪೆಂಡಾಲ್ ಹೊರತಾಗಿ ಅಂತಹ ಆಕರ್ಷಣೀಯವಾಗಿ ಏನು ಕಂಡುಬಂದಿಲ್ಲ . ಸಾವಿರಾರು ಸಂಖ್ಯೆಯ ಪ್ರವಾಸಿಗರು, ಸ್ಥಳಿಯರ ಆಗಮನದ ನಿರೀಕ್ಷೆ ಹುಸಿಯಾಗಿದ್ದು, ವೇದಿಕೆಯ ಎದುರುಗಡೆ ನೂರಾರು ಆಸನಗಳು ಬಿಟ್ಟರೆ ಸಾವಿರಾರು ಸಂಖ್ಯೆಯಲ್ಲಿ ಕ್ರೀಡಾಸಕ್ತರು ಆಗಮಿಸಿದ್ದರೆ ಅವರಿಗೆ ಸೂಕ್ತ ಆಸನ ವ್ಯವಸ್ಥೆಯೂ ಇರಲಿಲ್ಲ. ಕ್ರೀಡಾಂಗಣ ಪ್ರವೇಶಿಸುವ ಮೆಟ್ಟಿಲುಗಳು ಕುಸಿದು ಬಿದ್ದು, ಪ್ರವಾಸಿಗರು ಹರಸಾಹಸ ಮೂಲಕ ಸಾಗಿದರು.
ಕಾರ್ಯಕ್ರಮ ಉದ್ಘಾಟನೆಯ ಸಮಾರಂಭದಲ್ಲಿ ಭಟ್ಕಳ ಶಾಸಕ ಸುನೀಲ ನಾಯ್ಕ, ಗ್ರಾ.ಪಂ.ಅಧ್ಯಕ್ಷ ಮಂಜು ಗೌಡ, ಪ.ಪಂ.ಸದಸ್ಯ ಶಿವರಾಜ ಮೇಸ್ತ, ಬಸವರಾಜ್ ಓಸಿಮಠ, ಜಿ.ಪಂ. ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಪ್ರಿಯಾಂಗಾ ಎಂ. ಯುವಸಬಲೀಕರಣ ಸಹಾಯಕ ನಿರ್ದೇಶಕ ಪ್ರವೀಣ ಕುಮಾರ ಮತ್ತಿತರರು ಉಪಸ್ಥಿತರಿದ್ದರು.
ಮಾಧ್ಯಮದವರೊಂದಿಗೆ ಜಿಲ್ಲಾಧಿಕಾರಿಗಳು ಮಾತನಾಡಿ ರಾಷ್ಟ್ರಮಟ್ಟದ ವಾಲಿಬಾಲ್ ಪಂದ್ಯಾವಳಿಯಲ್ಲಿ ಕೆಲವು ಲೋಪದೋಷಗಳಾಗಿವೆ. ಮುಂದಿನ ವರ್ಷ ಎಲ್ಲವನ್ನು ಸರಿಪಡಿಸಿ ಕಾರ್ಯಕ್ರಮ ಆಯೋಜಿಸುತ್ತೇವೆ. ಕ್ರೀಡೆಗೆ ಉತ್ತೇಜನ ನೀಡುವ ಜೊತೆ ಇಕೋ ಟೂರಿಸಂ ಬಗ್ಗೆ ಪ್ರಾಮುಖ್ಯತೆಯನ್ನು ಸಾರುವುದಾಗಿದೆ. ಇಕೋ ಬೀಚ್ ಸನಿಹ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಮರ್ಪಕ ವಿದ್ಯುತ್ ವ್ಯವಸ್ಥೆ ಇಲ್ಲ. ೧೫ ದಿನದೊಳಗೆ ಸರಿಪಡಿಸದೇ ಹೊದಲ್ಲಿ ವೇದಿಕೆಯಲ್ಲಿ ಗ್ರಾ.ಪಂ.ಅಧ್ಯಕ್ಷರ ಎಚ್ಚರಿಕೆಯ ಬಗ್ಗೆ ಪ್ರಶ್ನಿಸಿದಾಗ ಈ ಬಗ್ಗೆ ಸಭೆ ನಡೆಸಿ ತೀರ್ಮಾನಿಸುತ್ತೇವೆ. ಇಲ್ಲಿ ಇಂದಿನ ನ್ಯೂನತೆಯನ್ನು ಖಂಡಿತವಾಗಿ ಇಂದೇ ಸರಿಪಡಿಸಿಕೊಡಿಸಲು ಸೂಚಿಸುತ್ತೇನೆ.ಇನ್ನು ಎರಡು ದಿವಸದಲ್ಲಿ ನಡೆಯುವ ಕ್ರೀಡಾಕೂಟ ಒಳ್ಳೆ ರೀತಿಯಲ್ಲಿ ಮಾಡಲು ಪ್ರಯತ್ನಿಸುತ್ತೇನೆ ಎಂದರು.
.
ಸರ್ಕಾರ ಕ್ರೀಡೆಗೆ ಪೊತ್ಸಾಹ ನೀಡುದಾದರೆ ಹಲವು ದೇಶಿಯ ಕ್ರೀಡೆಗೆ ಪೊತ್ಸಾಹ ನೀಡಬಹುದಿತ್ತು. ಕೊರೋನಾ ಸಂಕಷ್ಟ ಬೆಲೆ ಏರಿಕೆಯಿಂದ ಕಂಗೆಟ್ಟಿರುವಾಗ ಲಕ್ಷಗಟ್ಟಲೇ ವೆಚ್ಚ ಮಾಡಿ ಇಂತಹ ಕ್ರೀಡಾಕೂಟದ ಆಯೋಜನೆಯ ಬಗ್ಗೆ ಸರ್ಕಾರ ಅಧಿಕಾರಿಗಳು ಸ್ಥಳಿಯ ಜನಪ್ರತಿನಿಧಿಗಳು ಬೇಜವಾಬ್ದಾರಿ ತೋರುತ್ತಿದೆ. ಮುಂದೆಯಾದರೂ ಇಂತಹ ಕಾರ್ಯಕ್ರಮಗಳಿಗೆ ಸರ್ಕಾರದ ಹಣ ವ್ಯಯಿಸುವ ಬದಲು ಜನಪರ ಕಾಳಜಿಗೆ ಅನೂಕೂಲವಾಗಲಿ.– ಸಚೀನ ನಾಯ್ಕ ಪ್ರವಾಸಿಗ
ಬೀಚ್ ವಾಲಿಬಾಲ್ ಪಂದ್ಯಾವಳಿ: ಲೋಪದೋಷಕ್ಕೆ ಸಾರ್ವಜನಿಕರ ಅಸಮಾಧಾನ
