Slide
Slide
Slide
previous arrow
next arrow

ರಾಷ್ಟ್ರಮಟ್ಟದ ಕೇರಂ ಪಂದ್ಯಾವಳಿಯಲ್ಲಿ ಶಿರಸಿಗರು

300x250 AD

ಶಿರಸಿ: ಸ್ಥಳೀಯ ದೇವಿಕೆರೆ ಬಳಿಯ ಸ್ಫೂರ್ತಿ ಕೇರಂ ಬಳಗದ ಆಟಗಾರರಾದ ನಿಸ್ಸಾರ ಚೌಟಿ, ಶ್ರೀಮತಿ ಶಾಲಿನಿ ವೆಂಕಟ್ರಮಣ ಹೆಗಡೆ ಮತ್ತು ಕುಮಾರಿ ಪ್ರಿಯಾ ಪರಮೇಶ್ವರ ಭಟ್ ಇವರು ನವೆಂಬರ 7 ರಿಂದ 11 ರ ವರೆಗೆ ದೆಹಲಿಯಲ್ಲಿ ನಡೆಯಲಿರುವ ರಾಷ್ಟ್ರಮಟ್ಟದ ಕೇರಂ ಪಂದ್ಯಾವಳಿಗೆ ಆಯ್ಕೆಯಾಗಿ ಕರ್ನಾಟಕವನ್ನು ಪ್ರತಿನಿಧಿಸಲಿದ್ದಾರೆ. ಅಲ್ಲದೇ ಶಿಕ್ಷಕಿಯರಾದ ಶ್ರೀಮತಿ ಚೇತನಾ ಶಿರಸಿಕರ್ ಮತ್ತು ಶ್ರೀಮತಿ ಶಾಲಿನಿ ಹೆಗಡೆ ಇವರು ನವೆಂಬರ 16 ರಿಂದ 20ರ ವರೆಗೆ ತ್ರಿಪುರಾದ ಆಗರ್ತಲಾದಲ್ಲಿ ನಡೆಯಲಿರುವ ಅಖಿಲ ಭಾರತ ನಾಗರಕ ಸೇವಾ ಕೇರಂ ರಾಷ್ಟ್ರೀಯ ಪಂದ್ಯಾವಳಿಯಲ್ಲಿ ಭಾಗವಹಿಸಲು ಆಯ್ಕೆಯಾಗಿದ್ದಾರೆ.
ಕರ್ನಾಟಕದ ಪ್ರತಿನಿಧಿಗಳಾದ ಶಿರಸಿಯ ಈ ಆಟಗಾರರನ್ನು ಹುರಿದುಂಬಿಸಲು ಅ.27 ರಂದು ಸಂಸ್ಥೆಯಲ್ಲಿ ಹಮ್ಮಿಕೊಳ್ಳಲಾದ ಸನ್ಮಾನ ಸಮಾರಂಭದಲ್ಲಿ ಔಪಚಾರಿಕ ಅಧ್ಯಕ್ಷತೆ ವಹಿಸಿದ್ದ ಹಿರಿಯ ಲಯನ್ ತ್ರಿವಿಕ್ರಮ ಪಟವರ್ಧನ್ ಮಾತನಾಡಿ, ಆಟಗಾರರು ರಾಷ್ಟ್ರ ಮಟ್ಟದಲ್ಲಿ ಶಿರಸಿಯ ಕೀರ್ತಿ ಪತಾಕೆ ಹಾರಿಸಲು ಹಾರೈಸಿದರು. ಅತಿಥಿಗಳಾಗಿ ಆಗಮಿಸಿದ್ದ ಲಯನ್ ರಮಾ ಪಟವರ್ಧನ್, ಮಹಿಳೆಯರು ಎಲ್ಲಾ ರಂಗಗಳಲ್ಲಿ ಮುಂದುವರೆಯುತ್ತಿರುವುದನ್ನು ಶ್ಲಾಘಿಸಿದರು. ಉತ್ತರ ಕನ್ನಡ ಜಿಲ್ಲಾ ಥಂಬ್ ಕೇರಂ ಬಳಗದ ಅಧ್ಯಕ್ಷರಾದ ರೋಟೇರಿಯನ್ ರವಿ ಹೆಗಡೆ, ಗಡಿಹಳ್ಳಿಯವರು ಕೇರಂ ಆಟದಲ್ಲಿ ಮಾರ್ಪಡಿಸಲಾದ ನಿಯಮಾವಳಿಯ ಅಗತ್ಯತೆಯನ್ನು ವಿವರಿಸಿದರು. ಸ್ಫೂರ್ತಿ ಬಳಗದ ಗೌರವ ಕಾರ್ಯದರ್ಶಿ ಮಹೇಶ ಗುಡಿಗಾರ ಉಪಸ್ಥಿತರಿದ್ದರು.
ಸ್ಫೂರ್ತಿ ಕೇರಂ ಬಳಗದ ಸಂಸ್ಥಾಪಕರೂ, ಮಾಲೀಕರೂ ರಾಷ್ಟ್ರೀಯ ಕೇರಂ ಅಂಪೈರ ಕೂಡ ಆಗಿರುವ ಚಂದ್ರಶೇಖರ ಭಟ್ ಸಂಸ್ಥೆಯ ಧ್ಯೇಯೋದ್ಧೇಶಗಳನ್ನು ತಮ್ಮ ಪ್ರಾಸ್ತಾವಿಕ ನುಡಿಗಳಲ್ಲಿ ತೆರೆದಿಟ್ಟರು. ಸನ್ಮಾನಿತರ ಪರವಾಗಿ ಮಾತನಾಡಿದ ಶ್ರೀಮತಿ ಚೇತನಾ ಶಿರಸಿಕರ್ ರವರು ಮಹಿಳೆಯರ ಅಂತ:ಸತ್ವ ಹೊಸ ಬೆಳಕು ಕಾಣುವಲ್ಲಿ ಪುರುಷರ ಸಹಕಾರದ ಅಗತ್ಯವನ್ನು ತಿಳಿಸಿದರು.
ಬಳಗದ ಹಿರಿಯ ಹವ್ಯಾಸಿ ಆಟಗಾರ ಪ್ರೊ .ಎಚ್. ಆರ್. ಅಮರನಾಥ ಕಾರ್ಯಕ್ರಮವನ್ನು ನಿರೂಪಿಸಿ, ವಂದನಾರ್ಪಣೆ ಸಲ್ಲಿಸಿದರು.

300x250 AD
Share This
300x250 AD
300x250 AD
300x250 AD
Back to top