ದಾಂಡೇಲಿ: ಹಾಲಮಡ್ಡಿ ಗ್ರಾಮದ ಚರ್ಚ್ ಹಿಂಬದಿಯ ಅರಣ್ಯ ಪ್ರದೇಶದಲ್ಲಿ ಅಕ್ರಮ ಲಾಭಕ್ಕಾಗಿ ಅಂದರ್- ಬಾಹರ್ ಜೂಜಾಟವಾಡುತ್ತಿದ್ದ ತಂಡದ ಮೇಲೆ ದಾಳಿ ನಡೆಸಿ ನಾಲ್ವರ ಮೇಲೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ಇಸ್ಪೀಟ್ ಎಲೆಯಾಟದಲ್ಲಿ ತೊಡಗಿಕೊಂಡಿದ್ದ ಖಚಿತ ಮಾಹಿತಿಯಡಿ ಗ್ರಾಮೀಣ ಪೊಲೀಸ್ ಠಾಣೆಯ ತನಿಖಾ ವಿಭಾಗದ ಪಿಎಸೈ ಶಿವಾನಂದ ನಾವದಗಿ ಅವರ ನೇತೃತ್ವದಲ್ಲಿ ಪೊಲೀಸರು ದಾಳಿ ನಡೆಸಿದ್ದಾರೆ. ಈ ಸಮಯದಲ್ಲಿ ಎಲೆಯಾಟದಲ್ಲಿ ನಿರತರಾಗಿದ್ದ ಸ್ಥಳೀಯ ನಿವಾಸಿಗಳಾದ ಶಾನೂರ ಕೊಪ್ಪದ, ಅಶೋಕ ಚಿಕ್ಕಪ್ಪದವರ, ಡೇವಿಡ್ ಸಾಲೋಮನ್ ಮತ್ತು ಸಾವು ಸಿಂಗಾಡೆಯನ್ನು ವಶಕ್ಕೆ ಪಡೆದು, 2010 ರೂ. ನಗದನ್ನು ಜಪ್ತಿಪಡಿಸಿಕೊಳ್ಳಲಾಗಿದೆ.
ಜೂಜಾಟ; ನಾಲ್ವರ ವಿರುದ್ಧ ಪ್ರಕರಣ ದಾಖಲು
