• Slide
    Slide
    Slide
    previous arrow
    next arrow
  • ಅಂಗಡಿ ಕಳ್ಳತನಕ್ಕೆ ಯತ್ನ

    300x250 AD

    ದಾಂಡೇಲಿ: ಪಾನ್ ಅಂಗಡಿಯೊಂದರ ಹೆಂಚು ಒಡೆದು ಕಳ್ಳತನಕ್ಕೆ ಯತ್ನಿಸಿದ ಘಟನೆ ಬುಧವಾರ ತಡರಾತ್ರಿ ನಗರದ ಹಳೆದಾಂಡೇಲಿಯಲ್ಲಿ ನಡೆದಿದೆ.
    ಹಳೆದಾಂಡೇಲಿಯ ಹಳೆ ಕೋರ್ಟ್ ಹತ್ತಿರ ಮುಖ್ಯ ರಸ್ತೆಯಲ್ಲಿ ಬರುವ ಓಮನ್ ಕುಟ್ಟಿ ಎಂಬವರಿಗೆ ಸೇರಿದ್ದ ಪಾನ್ ಅಂಗಡಿಯ ಹಂಚನ್ನು ಒಡೆದು ಅಂಗಡಿಯೊಳಗೆ ನುಗ್ಗಿದ ಕಳ್ಳನು ಕಳ್ಳತನಕ್ಕೆ ಯತ್ನಿಸಿದ್ದನು. ಅಲ್ಲಿದ್ದ ವಿವಿಧ ಕಂಪೆನಿಯ ಬೀಡಿ ಚೀಲಗಳನ್ನು ಕದ್ದೊಯ್ಯಲು ವಿಫಲ ಪ್ರಯತ್ನ ನಡೆಸಿದ್ದಾನೆ. ಕಳ್ಳತನಕ್ಕೆ ಬಳಸಿದ್ದ ಕಟ್ಟಿಂಗ್ ಪ್ಲೇಯರ್ ಇನ್ನಿತರ ಸಲಕರಣೆಗಳನ್ನು ಬಿಟ್ಟು ಹೋಗಿದ್ದಾನೆ.
    ಕಳ್ಳನು ಅಂಗಡಿಯೊಳಗಡೆ ನುಗ್ಗಿ ಕಳ್ಳತನಕ್ಕೆ ಪ್ರಯತ್ನಿಸುತ್ತಿರುವುದು ಸಿಸಿ ಕ್ಯಾಮೇರಾದಲ್ಲಿ ಸೆರೆಯಾಗಿದ್ದು, ಕಳ್ಳ ಸ್ಥಳೀಯ ವ್ಯಕ್ತಿಯಾಗಿರಬಹುದೆಂದು ಅಂದಾಜಿಲಾಗಿದೆ. ಈ ಬಗ್ಗೆ ಅಂಗಡಿಯ ಮಾಲಕರಾದ ಓಮನ್ ಕುಟ್ಟಿಯವರು ನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.

    300x250 AD
    Share This
    300x250 AD
    300x250 AD
    300x250 AD
    Leaderboard Ad
    Back to top