ಜೊಯಿಡಾ: ಪ್ರಾಣಿಗಳ ಕಾಟ ತಪ್ಪಿಸಲು ಇಟ್ಟಿದ್ದ ವಿಷ ಬೆರೆಸಿದ ಅಕ್ಕಿ ತಿಂದು ಜಾನುವಾರು ಸಾವನ್ನಪ್ಪಿರುವ ಘಟನೆ ತಾಲೂಕಿನ ನಾಗೋಡಾದಲ್ಲಿ ನಡೆದಿದೆ.
ವಿಷಪ್ರಾಷನದಿಂದ ಒಟ್ಟು ನಾಲ್ಕು ಎತ್ತು ಮತ್ತು ಒಂದು ಆಕಳು ಸಾವನ್ನಪ್ಪಿದ್ದು, ಇನ್ನೂ ಏಳು ಜಾನುವಾರು ಸ್ಥಿತಿ ಚಿಂತಾಜನಕವಾಗಿದೆ. ಅನಂತ ಭಾಗ್ವತ್ ಎಂಬುವವರ ತೋಟದಲ್ಲಿ ಈ ಘಟನೆ ನಡೆದಿದ್ದು, ಸ್ಥಳಕ್ಕೆ ಆಗಮಿಸಿದ ಪೊಲೀಸರು ಪರಿಶೀಲನೆ ನಡೆಸಿದಾಗ ಕಾಡುಪ್ರಾಣಿಗಳ ಕಾಟ ತಡೆಯಲು ಅನ್ನದ ಜೊತೆ ವಿಷ ಬೆರೆಸಿರುವುದು ಬೆಳಕಿಗೆ ಬಂದಿದೆ.
ಗೋವಿನ ಮಾಲಕಿ ಮಮತಾ ಗಾಳಕರ ಎಂಬುವವರು ಠಾಣೆಯಲ್ಲಿ ದೂರು ನೀಡಿದ್ದು, ಸ್ಥಳಕ್ಕೆ ಪಶು ವೈದ್ಯಾಧಿಕಾರಿಗಳು ಭೇಟಿ ನೀಡಿ ಮರಣೋತ್ತರ ಪರೀಕ್ಷೆ ನಡೆಸಿದ್ದಾರೆ.
ವಿಷವುಂಡು ಐದು ಗೋವುಗಳ ಸಾವು, ಏಳು ಅಸ್ವಸ್ಥ
