ಮುಂಡಗೋಡ: ಜಿಲ್ಲಾ ಕಾಂಗ್ರೆಸ್ ಮಹಿಳಾ ಉಪಾಧ್ಯಕ್ಷರಾಗಿ ಶಾರದಾ ಆರ್.ರಾಠೋಡ ಅವರನ್ನು ಆಯ್ಕೆ ಮಾಡಲಾಗಿದೆ.
ಶಾರದಾ ಅವರು ಕಾಂಗ್ರೆಸ್ ಪಕ್ಷದ ಕ್ರಿಯಾಶೀಲ ಕಾರ್ಯಕರ್ತರಾಗಿದ್ದು, ತಾ.ಪಂ ಮಾಜಿ ಸದಸ್ಯರಾಗಿದ್ದಾರೆ. ಇವರ ಕಾರ್ಯ ವೈಖರಿಗಳುನ್ನು ಅರಿತುಕೊಂಡು ಅವರನ್ನು ರಾಷ್ಟ್ರೀಯ ಅಧ್ಯಕ್ಷರಾದ ನಿಟ್ಟಾ ಡಿಸೋಜಾ ಹಾಗೂ ರಾಜ್ಯ ಅಧ್ಯಕ್ಷರಾದ ಪುಷ್ಪ ಅಮರನಾಥ ನಿರ್ದೇಶನದ ಮೇರೆಗೆ ಜಿಲ್ಲಾ ಮಹಿಳಾ ಉಪಾಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ ಎಂದು ಕಾಂಗ್ರೆಸ್ ಜಿಲ್ಲಾ ಅಧ್ಯಕ್ಷರಾದ ಸುಜಾತಾ ಟಿ.ಗಾಂವಕರ ತಮ್ಮ ಆದೇಶಪತ್ರದಲ್ಲಿ ತಿಳಿಸಿದ್ದಾರೆ.
ಜಿಲ್ಲಾ ಕಾಂಗ್ರೆಸ್ ಮಹಿಳಾ ಉಪಾಧ್ಯಕ್ಷರಾಗಿ ಶಾರದಾ ರಾಠೋಡ
![](https://euttarakannada.in/wp-content/uploads/2022/10/25kar2-715x438.jpg?v=1666854452)