ದಾಂಡೇಲಿ: ಹಿಂದು ಧರ್ಮಿಯರ ಮಹತ್ವಪೂರ್ಣ ಹಬ್ಬವಾದ ದೀಪಗಳ ಹಬ್ಬ ದೀಪಾವಳಿಯ ನಿಮಿತ್ತ ಬಾಳೆ ಗಿಡ, ಕಬ್ಬು ಹಾಗೂ ಹೂವುಗಳಿಗೆ ಅತ್ಯಧಿಕ ಪ್ರಮಾಣದಲ್ಲಿ ಬೇಡಿಕೆಯಿದ್ದು, ನಗರದಲ್ಲಿ ಇಂದು ಸೋಮವಾರ ಬೆಳಿಗ್ಗಿನಿಂದಲೆ ಕಬ್ಬು, ಬಾಳೆ ಗಿಡ ಹಾಗೂ ಹೂವುಗಳನ್ನು ಖರೀದಿಸಲು ಜನ ಮುಗಿಬಿದ್ದಿದ್ದಾರೆ.
ದೀಪಾವಳಿಯ ಈ ಶುಭ ಸಂದರ್ಭದಲ್ಲಿ ಬಹುತೇಕ ಹಿಂದು ಮನೆಗಳಲ್ಲಿ ಹಾಗೂ ವಿವಿಧ ಅಂಗಡಿ ಮುಗ್ಗಟ್ಟುಗಳಲ್ಲಿ ಇಂದು ಲಕ್ಷ್ಮೀ ಪೂಜೆಯನ್ನು ಆಯೋಜಿಸುತ್ತಿರುವ ಹಿನ್ನಲೆಯಲ್ಲಿ ಕಬ್ಬು, ಬಾಳೆ ಗಿಡಗಳನ್ನು ಹಾಗೂ ಹೂವುಗಳನ್ನು ಖರೀದಿಸಲು ಹೆಚ್ಚಿನ ಸಂಖ್ಯೆಯಲ್ಲಿ ಜನ ನಗರದ ಮಾರುಕಟ್ಟೆಗೆ ಆಗಮಿಸಿದ್ದರು. ನಗರದ ಸೋಮಾನಿ ವೃತ್ತ, ಲಿಂಕ್ ರಸ್ತೆ, ಬರ್ಚಿ ರಸ್ತೆ, ಸಂಡೆ ಮಾರ್ಕೆಟ್ ಮೊದಲಾದ ಕಡೆಗಳಲ್ಲಿ ಸ್ಥಳೀಯ ಹಳ್ಳಿಯ ರೈತರು ತಾವು ಬೆಳೆದ ಕಬ್ಬು, ಬಾಳೆ ಗಿಡಗಳನ್ನು ತಂದು ಮಾರಾಟ ಪ್ರಕ್ರಿಯೆಯಲ್ಲಿ ತೊಡಗಿಕೊಂಡಿದ್ದಾರೆ. ಇನ್ನೂ ಸಂಡೆ ಮಾರ್ಕೆಟ್ ಹಾಗೂ ಲಿಂಕ್ ರಸ್ತೆಯಲ್ಲಿರುವ ಹೂವಿನ ಅಂಗಡಿಗಳಲ್ಲಿ ಹೂವಿನ ವ್ಯಾಪಾರವು ಭರ್ಜರಿಯಾಗಿ ನಡೆಯುತ್ತಿದೆ. ಬೆಳಕಿನ ಹಬ್ಬ ದೀಪಾವಳಿಯೂ ಈ ವ್ಯಾಪಾರ‍್ಥರಿಗೆ ಹೆಚ್ಚಿನ ವ್ಯಾಪಾರವಾಗಿಸುವುದರ ಮೂಲಕ ನಿಜವಾದ ಬೆಳಕನ್ನು ನೀಡಿದಂತಾಗಿದೆ.
ಬಾಳೆ ಗಿಡ, ಕಬ್ಬು ಹಾಗೂ ಹೂವಿಗೆ ಬಲು ಬೇಡಿಕೆ; ಮುಗಿಬಿದ್ದ ಗ್ರಾಹಕರು
