Slide
Slide
Slide
previous arrow
next arrow

ಬೈಕ್ ಡಿಕ್ಕಿ; ಪಾದಾಚಾರಿ ಮಹಿಳೆ ಸಾವು

300x250 AD



ಕುಮಟಾ: ಹೆದ್ದಾರಿ ದಾಟುತ್ತಿದ್ದ ಪಾದಾಚಾರಿ ಮಹಿಳೆಗೆ ಬೈಕ್ ಡಿಕ್ಕಿ ಹೊಡೆದ ಪರಿಣಾಮ ಮಹಿಳೆ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ತಾಲೂಕಿನ ಅಳ್ವೆಕೋಡಿ ಬಳಿ ನಡೆದಿದೆ.
ಅಳ್ವೆಕೋಡಿಯ ದೇವಮ್ಮ ನಾಯ್ಕ ಮೃತಪಟ್ಟ ಮಹಿಳೆ. ಈಕೆ ಹೆದ್ದಾರಿ ದಾಟುತ್ತಿದ್ದ ವೇಳೆ ಹೊನ್ನಾವರ ಕಡೆಯಿಂದ ಕುಮಟಾ ಕಡೆ ತೆರಳುತ್ತಿದ್ದ ಬೈಕ್ ಡಿಕ್ಕಿಯಾಗಿದೆ. ಡಿಕ್ಕಿಯ ರಭಸಕ್ಕೆ ದೇವಮ್ಮ ಅವರ ತಲೆ ಭಾಗಕ್ಕೆ ತೀವ್ರ ಗಾಯಗಳಾಗಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಬೈಕ್ ಸವಾರ ಚಿಕ್ಕಮಗಳೂರು ನಿವಾಸಿ ಲಹಿಖ್ ಜಾಕೀರ್ ವಿರುದ್ಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

300x250 AD
Share This
300x250 AD
300x250 AD
300x250 AD
Back to top