Slide
Slide
Slide
previous arrow
next arrow

ರಾಷ್ಟ್ರ ಮಟ್ಟದ ಕುಸ್ತಿ ಸ್ಪರ್ಧೆಗೆ ಹಳಿಯಾಳದ ಕುಸ್ತಿಪಟುಗಳು

300x250 AD


ಹಳಿಯಾಳ: ಅ.29ರಿಂದ 31ರವರೆಗೆ ಉತ್ತರ ಪ್ರದೇಶದ ಗೊಂಡಾದಲ್ಲಿ ನಡೆಯುವ ಪ್ರಥಮ ಗ್ರಾಂಡ್ ಪಿಕ್ಸ್ ರಾಷ್ಟ್ರ ಮಟ್ಟದ ಕುಸ್ತಿ ಸ್ಪರ್ಧೆಯಲ್ಲಿ ಇಲ್ಲಿನ ಕ್ರೀಡಾ ವಸತಿ ನಿಲಯದ ವಿದ್ಯಾರ್ಥಿಗಳು ಭಾಗವಹಿಸಲಿದ್ದಾರೆ.
ನಿಂಗಪ್ಪಾ ಗಾಡೇಕರ 38 ಕೆ.ಜಿ ವಿಭಾಗದಲ್ಲಿ, ಸೋನಲ್ ಲಾಂಬೊರ 39 ಕೆ.ಜಿ, ಗಾಯತ್ರಿ ಸುತಾರ 55 ಕೆ.ಜಿ, ಲಕ್ಷ್ಮಿ ಪಾಟೀಲ 53 ಕೆ.ಜಿ, ಮನಿಷಾ ಸಿದ್ದಿ 62 ಕೆ.ಜಿ, ಪ್ರತಿಕ್ಷಾ ಭೋವಿ 58 ಕೆ.ಜಿ, ರಕ್ಷಿತಾ ಸೂರ್ಯವಂಶಿ 59 ಕೆ.ಜಿ ವಿಭಾಗದ ಸ್ಪರ್ಧೆಯಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಪ್ರವೀಣಕುಮಾರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಅಲ್ಲದೇ ಕುಸ್ತಿಪಟುಗಳಿಗೆ ಶುಭ ಕೋರಿದ್ದಾರೆ.

300x250 AD
Share This
300x250 AD
300x250 AD
300x250 AD
Back to top