ಅಂಕೋಲಾ: ಇತ್ತೀಚಿಗಷ್ಟೇ ಹುಬ್ಬಳ್ಳಿಯಲ್ಲಿ ನಡೆದ ಆಲ್ ಇಂಡಿಯಾ ಓಪನ್ ಕರಾಟೆ ಚಾಂಪಿಯನ್‌ಶಿಪ್‌ನಲ್ಲಿ ಪಟ್ಟಣದ ಕರಾಟೆ ಪಟುಗಳು ಭಾಗವಹಿಸಿ ಭರ್ಜರಿ ಸಾಧನೆ ಗೈದಿದ್ದಾರೆ.
ಅಜ್ಜಿಕಟ್ಟಾದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 6ನೇ ತರಗತಿ ಓದುತ್ತಿದ್ದ ವಿದ್ಯಾರ್ಥಿ ಭರತ ಎಸ್.ಹುಲಸ್ವಾರ ಕಟಾ ಭಾಗದಲ್ಲಿ ಪ್ರಥಮ, ಕುಮಟೆ (ಫೈಟಿಂಗ್)ಯಲ್ಲಿ ದ್ವಿತೀಯ ಬಹುಮಾನವನ್ನು ಪಡೆದಿದ್ದಾನೆ. ಅದೇ ರೀತಿ ಜೈಹಿಂದ್ ಇಂಗ್ಲೀಷ್ ಶಾಲೆಯಲ್ಲಿ 3ನೇ ತರಗತಿ ಓದುತ್ತಿರುವ ಸನತ್ ಎನ್.ಗಾಂವಕರ ಕಟಾದಲ್ಲಿ ಪ್ರಥಮ, ಕುಮಟೆಯಲ್ಲಿ ತೃತೀಯ, ಪಿ.ಎಂ.ಎಚ್.ಎಸ್ ಶಾಲೆಯಲ್ಲಿ 6ನೇ ತರಗತಿ ಓದುತ್ತಿರುವ ಚೈತ್ರಾ ಆರ್.ನಾಯ್ಕ ಕಟಾದಲ್ಲಿ ಪ್ರಥಮ ಸ್ಥಾನ ಪಡೆದಿದ್ದಾಳೆ.
ಅಂಬಾರಕೊಡ್ಲದ ನಂ.3 ಶಾಲೆಯಲ್ಲಿ 6ನೇ ತರಗತಿ ಓದುತ್ತಿದ್ದ ಚೇತನ ಪಿ.ಹುಲಸ್ವಾರ ಕಟಾದಲ್ಲಿ ದ್ವಿತೀಯ, ಜೈಹಿಂದ್ ಇಂಗ್ಲೀಷ್ ಶಾಲೆಯಲ್ಲಿ 6ನೇ ತರಗತಿಯಲ್ಲಿ ಓದುತ್ತಿದ್ದ ಮನಹಾನ್ ಎ.ಅಹಮದ್ ಕಟಾದಲ್ಲಿ ತೃತೀಯ, ಕುಮಟೆಯಲ್ಲಿ ದ್ವಿತೀಯ, ಹಿಮಾಲಯ ಶಾಲೆಯಲ್ಲಿ 6ನೇ ತರಗತಿ ಓದುತ್ತಿರುವ ಆರ್ಯನ್ ಎಸ್.ನಾಯ್ಕ ಕಟಾದಲ್ಲಿ ತೃತೀಯ, ಸ.ಹಿ.ಪ್ರಾ ಶಾಲೆ ನಂ.1ರ 5ನೇ ತರಗತಿಯ ವಿದ್ಯಾರ್ಥಿ ಸುಚೇಂದ್ರ ಎಸ್.ನಾಯ್ಕ ಕಟಾ ಮತ್ತು ಕುಮಟೆಯಲ್ಲಿ ತೃತೀಯ, ಜೈಹಿಂದ್ ಇಂಗ್ಲೀಷ್ ಶಾಲೆಯಲ್ಲಿ 3ನೇ ತರಗತಿಯ ಪ್ರಥಮ ಜಿ.ನಾಯ್ಕ ಕಟಾದಲ್ಲಿ ತೃತೀಯ ಸ್ಥಾನ ಪಡೆದುಕೊಂಡಿದ್ದಾನೆ.
ಕರಾಟೆಯಲ್ಲಿ ಸಾಧನೆಗೈದ ಎಲ್ಲ ಮಕ್ಕಳಿಗೆ ಶಾಂತಾರಾಮ ಎ.ಹುಲಸ್ವಾರ ಅಂತಾರಾಷ್ಟ್ರೀಯ ಕರಾಟೆ ಪಟು 3ರ್ಡ್ ಡಾನ್ ಬ್ಲಾಕ್ ಬೆಲ್ಟ್ ಸೂಕ್ತವಾದ ತರಬೇತಿಯನ್ನು ನೀಡಿ ಎಲ್ಲ ಮಕ್ಕಳ ಸಾಧನೆಗೆ ಕಾರಣವಾಗಿದ್ದಾರೆ.