Slide
Slide
Slide
previous arrow
next arrow

ಮಹಿಳಾ ವಕೀಲರ ವಿರುದ್ಧದ ಜಾತಿ ನಿಂದನೆ ಪ್ರಕರಣಕ್ಕೆ ಹೈಕೋರ್ಟ್ ತಡೆ

300x250 AD

ದಾಂಡೇಲಿ: ಜಾತಿ ನಿಂದನೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಬಂಧನದ ಭೀತಿ ಎದುರಿಸುತ್ತಿದ್ದ ನಗರದ ಮಹಿಳಾ ವಕೀಲರಾದ ಕವಿತಾ ಗಡೆಪ್ಪನವರರವರಿಗೆ ಧಾರವಾಡದ ಹೈಕೋರ್ಟ್ ಬಿಗ್ ರಿಲೀಫ್ ನೀಡಿದ್ದು, ಪ್ರಕರಣಕ್ಕೆ ತಡೆಯಾಜ್ಞೆ ನೀಡಿದೆ.

ಧಾರವಾಡದ ಹಿರಿಯ ವಕೀಲ ಎ.ಸಿ ಚಕಲಬ್ಬಿಯವರು ತಮ್ಮ ಕಕ್ಷಿದಾರರ ಪರವಾಗಿ ಸಮರ್ಥವಾಗಿ ವಾದ ಮಂಡಿಸಿ ಪ್ರಕರಣಕ್ಕೆ ತಡೆಯಾಜ್ಞೆ ಕೊಡಿಸುವಲ್ಲಿ ಯಶಸ್ವಿಯಾಗಿದ್ದಾರೆ. ವಾದವನ್ನು ಆಲಿಸಿದ ನ್ಯಾಯಾಧೀಶರು ನ್ಯಾಯಾಲಯದ ಸಭಾಂಗಣದಲ್ಲಿ ರಾಜಿ ಸಂಧಾನ ನಡೆಸುತ್ತಿರುವ ಸಂದರ್ಭದಲ್ಲಿ ಗುಪ್ತವಾಗಿ ವಿಡಿಯೋ ದೃಷ್ಕೃತ್ಯಗಳನ್ನು ಚಿತ್ರೀಕರಿಸಿಸುವುದು ತಪ್ಪು ಕ್ರಮ, ಇಂತಹ ತಪ್ಪು ಕ್ರಮದಿಂದ ವಕೀಲರು ರಾಜಿ ಸಂಧಾನ ನಡೆಸುವುದು ಕಷ್ಟಕರವೆಂದು ಮನಗಂಡು ಪ್ರಕರಣಕ್ಕೆ ತಡೆಯಾಜ್ಞೆ ನೀಡಿದ್ದಾರೆ. ಜಾತಿ ನಿಂದನೆ ಪ್ರಕರಣಕ್ಕೆ ಹೈಕೋರ್ಟ ನೀಡಿರುವ ತಡೆಯಾಜ್ಞೆ ದಾಖಲೆಯ ಪ್ರತಿಯನ್ನು ಕವಿತಾ ರಾಘವೇಂದ್ರ ಗಡೆಪ್ಪನವರ ಮಾಧ್ಯಮಗಳಿಗೆ ನೀಡಿದ್ದಾರೆ.

300x250 AD

ಕಳೆದ ವಾರ ನ್ಯಾಯಾಲಯದ ಸಭಾಂಗಣದಲ್ಲಿ ರಾಜಿ ಸಂಧಾನದ ಸಂದರ್ಭದಲ್ಲಿ ಅವಾಚ್ಯ ಶಬ್ದಗಳನ್ನು ಬಳಸಿ ಜಾತಿ ನಿಂದನೆ ಮಾಡಿದ್ದಾರೆ ಎಂದು ಸತೀಶ ಶಿವಮೂರ್ತಿ ಚವ್ಹಾಣ ಮತ್ತು ಸರಸ್ವತಿ ಚಹ್ವಾಣ ದಂಪತಿಗಳು ಮಹಾನಾಯಕ ಡಾ,ಬಿ.ಆರ್.ಅಂಬೇಡ್ಕರ್ ಸೇನೆಯ ರಾಜ್ಯ ಉಪಾಧ್ಯಕ್ಷರಾದ ಚಂದ್ರಕಾಂತ ನಡಿಗೇರ ನೇತ್ರತ್ವದಲ್ಲಿ ವಕೀಲರಾದ ಕವಿತಾ ಗಡೆಪ್ಪನವರ ವಿರುದ್ಧ ಎಸ್ಸಿ ಎಸ್ಟಿ ಕಾಯಿದೆ ಅಡಿ ನಗರ ಪೊಲೀಸ್ ಠಾಣೆಯಲ್ಲಿ ಜಾತಿ ನಿಂದನೆ ಪ್ರಕರಣ ದಾಖಲಿಸಿದ್ದರು.

Share This
300x250 AD
300x250 AD
300x250 AD
Back to top