Slide
Slide
Slide
previous arrow
next arrow

ಸತೀಶ ಕೆ.ಸೈಲ್ ಅವರಿಂದ ಶಾಲಾ ಮಕ್ಕಳಿಗೆ ನೋಟ್ಬುಕ್‌ ವಿತರಣೆ

300x250 AD

ಕಾರವಾರ: ಮಾಜಿ ಶಾಸಕ ಸತೀಶ ಕೆ.ಸೈಲ್ ಅವರಿಂದ ಸದಾಶಿವಗಡದ ಸರಕಾರಿ ಹಿರಿಯ ಮಾದರಿ ಪ್ರಾಥಮಿಕ ಕನ್ನಡ ಶಾಲೆಯಲ್ಲಿ ಶಾಲಾ ಮಕ್ಕಳಿಗೆ ನೋಟ್ಬುಕ್‌ಗಳನ್ನು ವಿತರಿಸಿದರು.

ಮಕ್ಕಳನ್ನುದ್ದೇಶಿಸಿ ಮಾತನಾಡಿದ ಅವರು, ನೀವು ಈ ದೇಶದ ಭವಿಷ್ಯ ಆಗಿದ್ದೀರಿ. ಚೆನ್ನಾಗಿ ಓದಿಕೊಂಡು ಮುಂದೆ ಒಂದು ಒಳ್ಳೆಯ ಭವಿಷ್ಯ ರೂಪಿಸಬೇಕೆಂದು ಮಕ್ಕಳಿಗೆ ಕಿವಿಮಾತು ಹೇಳಿದರು.

ದೀಪಾವಳಿ ಹಬ್ಬವು ಸಮೀಪವಿರುವುದರಿಂದ ಮಕ್ಕಳಿಗೆ ಈ ಸಂದರ್ಭದಲ್ಲಿ ಸಿಹಿ ಹಂಚಲಾಯಿತು. ಶಾಲಾ ಪ್ರಾಧ್ಯಾಪಕರಿಂದ ಮಾಜಿ ಶಾಸಕ ಸತೀಶ್ ಕೆ.ಸೈಲ್ ಅವರನ್ನು ಶಾಲುಹೊದಿಸಿ, ಹೂಗುಚ್ಛ ನೀಡಿ ಸನ್ಮಾನಿಸಲಾಯಿತು.

300x250 AD

ಕಾರ್ಯಕ್ರಮದಲ್ಲಿ ಪ್ರಮುಖರಾದ ಕೆ.ಶಂಭು ಶೆಟ್ಟಿ, ಜಿ.ಪಿ.ನಾಯಕ್, ವಿಶ್ವನಾಥ್ ಕಲ್ಗುಟಕರ, ರೋಹಿದಾಸ್ ವೈಂಗಣಕರ್, ವಿಠ್ಠಲ ನಾಯಕ್, ಸ್ನೇಹ ಹಳಡನಕರ, ಯುವ ಮುಖಂಡರಾದ ಅಭಿ ರಾಣೆ, ದರ್ಶನ್ ನಾಯಕ್, ಪರಶುರಾಮ್ ಚೌಹಾಣ್, ಅಜಯ್ ಶಿಗಲಿ, ಸಂದೀಪ್ ಎಸ್.ಕೆ. ಸೇರಿ ಶಾಲಾ ಪ್ರಾಧ್ಯಾಪಕರು, ಸಿಬ್ಬಂದಿ ಇತರರು ಇದ್ದರು.

Share This
300x250 AD
300x250 AD
300x250 AD
Back to top