ಸಿದ್ದಾಪುರ: ಗುರುವೃತ್ತಿ ಅತ್ಯಂತ ಪವಿತ್ರವೃತ್ತಿ ಎಂದು ಶಿರಸಿ ಶೈಕ್ಷಣಿಕ ಜಿಲ್ಲಾ ಪ್ರಧಾನಮಂತ್ರಿ ಪೋಷಣಾಭಿವೃದ್ಧಿ ಯೋಜನಾಧಿಕಾರಿಗಳಾಗಿ ಪದೋನ್ನತಿ ಹೊಂದಿದ ಜಿ.ಐ.ನಾಯ್ಕ ಗೋಳಗೋಡ ಹೇಳಿದರು.
ಅವರು ಪಟ್ಟಣದ ಹಾಳದಕಟ್ಟಾ ಸರಕಾರಿ ಪ್ರೌಢಶಾಲೆಯಲ್ಲಿ ಎಸ್‌ಡಿಎಮ್‌ಸಿ, ಶಿಕ್ಷಕರು, ವಿದ್ಯಾರ್ಥಿಗಳು ಹಾಗೂ ತಾಲೂಕಾ ಪ್ರೌಢಶಾಲಾ ಸಹಶಿಕ್ಷಕರ ಸಂಘದ ಪರವಾಗಿ ಏರ್ಪಡಿಸಿದ್ದ ಗೌರವ ಸ್ವೀಕರಿಸಿ ಮಾತನಾಡಿದರು.
ಪ.ಪಂ. ಉಪಾಧ್ಯಕ್ಷ ರವಿಕುಮಾರ ವಿ.ನಾಯ್ಕ ಮಾತನಾಡಿ, ಜಿ.ಐ.ನಾಯ್ಕರವರ ಸರಳತೆ, ಸೌಜನ್ಯತೆ, ದಕ್ಷತೆ ಎಲ್ಲಾ ಶಿಕ್ಷಕರಿಗೂ ಮಾದರಿ ಎಂದರು. ಪ್ರೌಢಶಾಲಾ ಸಹಶಿಕ್ಷಕರ ಸಂಘದ ಅಧ್ಯಕ್ಷ ಆರ್.ಆರ್.ನಾಯ್ಕ, ಕಸಾಪ ತಾಲೂಕು ಅಧ್ಯಕ್ಷ ಗೋಪಾಲ ನಾಯ್ಕ, ಶಿಕ್ಷಕರಾದ ಚಂದ್ರಶೇಖರ ನಾಯ್ಕ, ಸುಷ್ಮಾ ಹೆಗಡೆ, ಜಯಲಕ್ಷ್ಮಿ ಹೆಗಡೆ, ನಿತ್ಯಾನಂದ ಹೆಗಡೆ, ಪ್ರದೀಪ್ ಪಡ್ತಿ, ಸಂಘದ ಪದಾಧಿಕಾರಿಗಳಾದ ಟಿ.ಕೆ.ನಾಯ್ಕ, ಚಂದ್ರಶೇಖರ ನಾಯ್ಕ ಜಿಡ್ಡಿ ಮಾತನಾಡಿದರು.
ಎಸ್‌ಡಿಎಮ್‌ಸಿ ಅಧ್ಯಕ್ಷ ರಘುವೀರ ನಾಯ್ಕ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಪ.ಪಂ ಸದಸ್ಯರಾದ ರಾಧಿಕಾ ಕಾನಗೋಡ, ಎಸ್.ಕೆ.ನಾಯ್ಕ ಕಡಕೇರಿ, ನಿವೃತ್ತ ಶಿಕ್ಷಕ ಎನ್.ಬಿ.ನಾಯ್ಕ, ಲೋಕೇಶ ನಾಯ್ಕ, ಎಸ್‌ಡಿಎಮ್‌ಸಿ ಪದಾಧಿಕಾರಿಗಳು, ಶಿಕ್ಷಕರು, ಪಾಲಕರು ಇದ್ದರು. ಆರಂಭದಲ್ಲಿ ಶಮಾ ಸಂಗಡಿಗರು ಪ್ರಾರ್ಥಿಸಿದರು. ಪ್ರಭಾರಿ ಮುಖ್ಯ ಶಿಕ್ಷಕ ಚಂದ್ರಶೇಖರ ನಾಯ್ಕ ಸ್ವಾಗತಿಸಿದರು. ಶಿಕ್ಷಕಿ ಲಲಿತಾ ನಾಯ್ಕ ವಂದನಾರ್ಪಣೆ ಮಾಡಿದರು. ಕನ್ನಡ ಶಿಕ್ಷಕಿ ಗೀತಾ ಬಿ.ಸಿ. ಕಾರ್ಯಕ್ರಮ ನಿರೂಪಿಸಿದರು.