ಜೊಯಿಡಾ: ಕರ್ನಾಟಕ ರಾಜ್ಯೋತ್ಸವ ಪೂರ್ವಭಾವಿ ಸಭೆ ತಹಶೀಲ್ದಾರ ಶೈಲೇಶ ಪರಮಾನಂದರವರ ಅಧ್ಯಕ್ಷತೆಯಲ್ಲಿ ತಹಶೀಲ್ದಾರ ಕಚೇರಿಯ ಸಭಾಭವನದಲ್ಲಿ ನಡೆಯಿತು.
ಪ್ರತಿ ವರ್ಷಗಿಂತಲೂ ಈ ವರ್ಷ ಅರ್ಥಪೂರ್ಣವಾಗಿ ಕನ್ನಡ ರಾಜ್ಯೋತ್ಸವ ಆಚರಿಸಬೇಕಾಗಿದೆ. ಇದಕ್ಕಾಗಿ ಎಲ್ಲಾ ಸರಕಾರಿ ಕಚೇರಿಗಳು ದೀಪಾಲಂಕಾರ ಮಾಡಬೇಕೆಂದು ಮತ್ತು ಮೆರವಣಿಗೆಯಲ್ಲಿ ವಿಶಿಷ್ಟ ರೀತಿಯಲ್ಲಿ ಸ್ಥಬ್ದ ಚಿತ್ರಗಳು ಪ್ರದರ್ಶನ ಮಾಡಬೇಕಾಗಿದ್ದು, ಎಲ್ಲಾ ಇಲಾಖೆಗಳು, ಸಾರ್ವಜನಿಕರು ಕೈಜೋಡಿಸಬೇಕೆಂದು ತಹಶೀಲ್ದಾರ ಶೈಲೇಶ ಪರಮಾನಂದ ಹೇಳಿದರು.
ಕಸಾಪ ಅಧ್ಯಕ್ಷ ಪಾಂಡುರಂಗ ಪಟಗಾರ ಸಭೆಗೆ ಸಲಹೆ ನೀಡುತ್ತಾ, ಕನ್ನಡ ಸಾಹಿತ್ಯ ಪರಿಷತ್ ಸರಕಾರದ ಸಂಸ್ಥೆಯಾಗಿದೆ. ಎಲ್ಲಾ ಸರಕಾರಿ ಕಚೇರಿಗಳಲ್ಲಿ ಕನ್ನಡ ಧ್ವಜ ಹಾರಿಸುವುದು ಮತ್ತು ಕೇಂದ್ರ ವೃತ್ತದ ಸಾರ್ವಜನಿಕ ರಾಜ್ಯೋತ್ಸವ ಆಚರಿಸಲು ಎಲ್ಲಾ ಇಲಾಖೆಯ ಅಧಿಕಾರಿಗಳು ಸೇರಿದಂತೆ ಎಲ್ಲರೂ ಪಾಲ್ಗೊಳ್ಳುವ ಬಗ್ಗೆ ತೀರ್ಮಾನಿಸಲಾಯಿತು. ಉಳಿದಂತೆ ಸ್ಥಬ್ದ ಚಿತ್ರಗಳ ಮೆರವಣಿಗೆ ಪ್ರತಿ ವರ್ಷದಂತೆ ಮಾಡಲು ತಿರ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಕಾರ್ಯನಿರ್ವಹಣಾಧಿಕಾರಿ ಆನಂದ ಬಡಕುಂದ್ರಿ, ಕ್ಷೇತ್ರ ಶಿಕ್ಷಣಾಧಿಕಾರಿ ಬಶೀರ್ ಶೇಖ್, ಕುಣಬಿ ಜಿಲ್ಲಾಧ್ಯಕ್ಷ ಸುಭಾಷ ಗಾವಡಾ, ಲೋಕೋಪಯೋಗಿ ಇಲಾಖೆಯ ಅರುಣಕುಮಾರ್, ಸಿಡಿಪಿಓ ಶಾರದಾ ಮರಾಠೆ, ಪದವಿಪೂರ್ವ ಬಿಜಿವಿಎಸ್ ಸಂಸ್ಥೆಯ ಕಾರ್ಯದರ್ಶಿ ದತ್ತಾರಾಮ ದೇಸಾಯಿ, ಶಿಕ್ಷಕ ಸಂಘದ ಅಧ್ಯಕ್ಷ ಯಶವಂತ ನಾಯ್ಕ, ಕಸಾಪ ಖಜಾಂಚಿ ಮಹಾದೇವ ಹಳದನಕರ, ತೋಟಗಾರಿಕೆ ಇಲಾಖೆಯ ಸಂತೋಷ ಎಕ್ಕಳಿಕರ್ ಮುಂತಾದವರು ಇದ್ದರು.