ಮುಂಡಗೋಡ: ಪಟ್ಟಣದ ಗ್ರಾಮದೇವತೆ ಶ್ರೀಮಾರಿಕಾಂಬಾ ಜಾತ್ರಾ ಮಹೋತ್ಸವ ಜ.31ರಿಂದ ಫೆ.8ರವರೆಗೆ ನಡೆಯಲಿದೆ ಎಂದು ಪ್ರಚಾರ ಸಮಿತಿ ಅಧ್ಯಕ್ಷ ಡಾ.ಪದ್ಮರಾಜ ಪಿ.ಛಬ್ಬಿ ಹೇಳಿದರು.
ಪತ್ರಿಕಾಗೋಷ್ಟಿಯಲ್ಲಿ ಹೊರಬೀಡುಗಳ ಮಾಹಿತಿ ನೀಡಿದ ಅವರು, 1ನೇ ಹೊರಬೀಡು ಜ.10, 2ನೇ ಹೊರಬೀಡು 13, 3ನೇ ಹೊರಬೀಡು 17, 4ನೇ ಹೊರಬೀಡು 20, 5ನೇ ಹೊರಬೀಡು 24 (ಅಂಕೆ ಹಾಕುವುದು)ರಂದು ನಡೆಯಲಿದೆ. ಆ.31 ರಂದು ತಾಳಿಕಟ್ಟುವ ಶಾಸ್ತ್ರದ ಪೂಜಾ ವಿಧಿವಿಧಾನಗಳು, ಫೆ.1ರ ಮುಂಜಾನೆ 8 ಗಂಟೆಯಿಂದ ಅಮ್ಮನವರ ರಥೋತ್ಸವ ಪ್ರಾರಂಭಿಸಿ ಮಧ್ಯಾಹ್ನ 1.30ಕ್ಕೆ ಚೌತಮನೆಯಲ್ಲಿ ಪ್ರತಿಷ್ಠಾನ, ನಂತರ ಭಕ್ತಾಧಿಗಳಿಗೆ ಅನ್ನಸಂತರ್ಪಣೆ ಇರುತ್ತದೆ. ಅಂದು ಯಾವುದೇ ಉಡಿ, ಇತರೆ ಸೇವೆಗಳು ಇರುವುದಿಲ್ಲ. ಫೆ.12ರ ಬೆಳಿಗ್ಗೆ 6 ಗಂಟೆಯಿಂದ ಫೆ.08ರ ಮಧ್ಯಾಹ್ನ 2 ಗಂಟೆಯವರೆಗೆ ಸಾರ್ವಜನಿಕ ಉಡಿ ತುಂಬುವ ಇತರೆ ಸೇವೆಗಳು ಜರುಗುವುದು. ಫೆ.8ರ ಸಂಜೆ 4 ಗಂಟೆಯಿಂದ ವಿಸರ್ಜನಾ ಕಾರ್ಯಕ್ರಮ, ಮಾ.22ರ ಯುಗಾದಿಯಂದು ಅಮ್ಮನವರ ಮರುಪ್ರತಿಷ್ಠಾಪನೆ ನಡೆಯಲಿದೆ. ಜ.10ರಿಂದ ಮಾ.21ರವರೆಗೆ ಪಟ್ಟಣ, ನ್ಯಾಸರ್ಗಿ ಹಾಗೂ ಕಾಳಗನಕೊಪ್ಪದಲ್ಲಿ ಯಾವುದೇ ಶುಭಕಾರ್ಯಗಳು ಇರುವುದಿಲ್ಲ ಎಂದು ತಿಳಿಸಿದ್ದಾರೆ.
ಮಾರಿಕಾಂಬ ಟ್ರಸ್ಟ್ ಅಧ್ಯಕ್ಷ ರಮೇಶ ಕಾಮತ, ಉಪಾಧ್ಯಕ್ಷ ಎಸ್.ಎಸ್.ಪಾಟೀಲ, ಮಾರಿಕಾಂಬ ಟ್ರಸ್ಟ್ ಸದಸ್ಯರಾದ ರಾಮಣ್ಣ ಕುನ್ನೂರ, ವಸಂತ ಕೋಣಸಾಲಿ, ಎಸ್.ಕೆ.ಬೋರಕರ, ಅಶೋಕ ಕಲಾಲ, ನಾರಾಯಣ ಬೆಂಡಲಗಟ್ಟಿ, ಬಾಬಣ್ಣ ಸಾಲಗಾಂವಿ, ರಾಜೂ ಯಡ್ಡೋಳ್ಳಿ, ಚಂದ್ರು ಕರಿಗಾರ, ಯಲ್ಲಪ್ಪ ರಾಣಗೇರ, ಪರಶುರಾಮ ಪಾಟೀಲ ಇದ್ದರು.