Slide
Slide
Slide
previous arrow
next arrow

ಕನ್ನಡ ರಾಜ್ಯೋತ್ಸವ ಸಡಗರದ ಹಬ್ಬದಂತಿರಬೇಕು: ಉದಯ ಕುಂಬಾರ

300x250 AD

ಅಂಕೋಲಾ: ಕನ್ನಡ ರಾಜ್ಯೋತ್ಸವವನ್ನು ಅತ್ಯಂತ ಸಂಭ್ರಮ ಸಡಗರದಿಂದ ಪ್ರತಿಯೊಂದು ಇಲಾಖೆಯ ಅಧಿಕಾರಿಗಳು, ಸಂಘ-ಸ0ಸ್ಥೆಗಳು, ಸಾರ್ವಜನಿಕರು, ವಿದ್ಯಾರ್ಥಿಗಳು ಪಾಲ್ಗೊಳ್ಳುವುದರ ಮೂಲಕ ಅರ್ಥಪೂರ್ಣವಾಗಿ ಆಚರಿಸಲು ಪ್ರತಿಯೊಬ್ಬರ ಪಾಲ್ಗೊಳ್ಳುವಿಕೆ ಅಗತ್ಯ ಎಂದು ತಹಶೀಲ್ದಾರ ಉದಯ ಕುಂಬಾರ ಹೇಳಿದರು.

ತಹಶೀಲ್ದಾರ ಕಾರ್ಯಾಲಯದಲ್ಲಿ ಕನ್ನಡ ರಾಜ್ಯೋತ್ಸವದ ಪೂರ್ವಭಾವಿ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಆಯಾ ಇಲಾಖೆಗಳು ವಿಶೇಷವಾಗಿ ಜವಾಬ್ದಾರಿಯನ್ನು ಹಂಚಿಕೆ ಮಾಡಿಕೊಂಡು ಅರ್ಥರ್ಪೂರ್ಣ ಉತ್ಸವವನ್ನು ಆಚರಿಸಬೇಕು. ಪ್ರತಿಯೊಂದು ಇಲಾಖೆಗಳು, ಸಂಘ-ಸ0ಸ್ಥೆಗಳು, ಬ್ಯಾಂಕುಗಳ ಕಛೇರಿಗಳು ತಳಿರು ತೋರಣಗಳಿಂದ ಶೃಂಗಾರಗೊ0ಡು ವಿದ್ಯುದೀಪ ಅಲಂಕೃತವಾಗಿರಬೇಕು. ಮೆರವಣಿಗೆಯಲ್ಲಿ ವಿದ್ಯಾರ್ಥಿಗಳಿಗೆ ಯಾವುದೇ ಸಮಸ್ಯೆಯಾಗದಂತೆ ನೋಡಿಕೊಳ್ಳಬೇಕು. ವೇಷ-ಭೂಷಣ, ರೂಪಕಗಳಿಗೆ 80% ಅಂಕ, ಪಥ ಸಂಚಲನಕ್ಕೆ 20 ಅಂಕಗಳನ್ನು ನಿರ್ಣಾಯಕರು ನೀಡಬೇಕು. ಪ್ರೌಢ ಮತ್ತು ಪ್ರಾಥಮಿಕ ವಿಭಾಗಕ್ಕೆ ಪ್ರತ್ಯೇಕ ಬಹುಮಾನಗಳಿದ್ದು, ತಾಲೂಕಿನ ಹಲವಾರು ಪ್ರಮುಖರು ಈ ಬಹುಮಾನದ ಪ್ರಾಯೋಜಕತ್ವವನ್ನು ವಹಿಸಿಕೊಂಡಿದ್ದು, ಅವರಿಗೆ ಕೃತಜ್ಞತೆ ಅರ್ಪಿಸಲಾಯಿತು.

300x250 AD

ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಪಿ.ವೈ.ಸಾವಂತ, ಪುರಸಭೆ ಉಪಾಧ್ಯಕ್ಷೆ ರೇಖಾ ಗಾಂವಕರ, ಕ್ಷೇತ್ರ ಶಿಕ್ಷಣಾಧಿಕಾರಿ ಮಂಗಲಲಕ್ಷ್ಮೀ ಪಾಟೀಲ, ಕನ್ನಡ ಸಾಹಿತ್ಯ ಪರಿಷತ್‌ನ ಅಧ್ಯಕ್ಷ ಗೋಪಾಲಕೃಷ್ಣ ನಾಯಕ, ಪಿಎಸೈ ಪ್ರವೀಣಕುಮಾರ, ಹಿರಿಯರಾದ ಕಾಳಪ್ಪ ನಾಯಕ, ತಾ.ಪಂ. ಮಾಜಿ ಅಧ್ಯಕ್ಷೆ ಸುಜಾತಾ ಗಾಂವಕರ, ಅಂಕೋಲಾ ಅರ್ಬನ್ ಬ್ಯಾಂಕ್ ಅಧ್ಯಕ್ಷ ಭಾಸ್ಕರ ನಾರ್ವೇಕರ, ನಿವೃತ್ತ ಪ್ರಾಚಾರ್ಯ ಎಂ.ಎಸ್.ಹಬ್ಬು ಪ್ರಮುಖರಾದ ರವೀಂದ್ರ ಜಗದೀಶ ನಾಯಕ ಹೊಸ್ಕೇರಿ ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.

Share This
300x250 AD
300x250 AD
300x250 AD
Back to top