ನವದೆಹಲಿ: 10 ಲಕ್ಷ ಸಿಬ್ಬಂದಿ ನೇಮಕಾತಿ ಅಭಿಯಾನವಾದ ʼರೋಜ್‌ಗಾರ್ ಮೇಳʼಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಇಂದು ವಿಡಿಯೋ ಕಾನ್ಫರೆನ್ಸ್ ಮೂಲಕ ಚಾಲನೆ ನೀಡಿದರು. ಸಮಾರಂಭದಲ್ಲಿ ಹೊಸದಾಗಿ ಸೇರ್ಪಡೆಗೊಂಡ 75,000 ಮಂದಿಗೆ ನೇಮಕಾತಿ ಪತ್ರಗಳನ್ನು ವಿತರಿಸಲಾಗಿದೆ.
ದೇಶಾದ್ಯಂತ ಹೊಸದಾಗಿ ನೇಮಕಗೊಂಡವರು ಭಾರತ ಸರ್ಕಾರದ 38 ಸಚಿವಾಲಯಗಳು/ಇಲಾಖೆಗಳಿಗೆ ಸೇರ್ಪಡೆಯಾಗುತ್ತಿದ್ದಾರೆ.
ನೇಮಕಗೊಂಡವರು ಗ್ರೂಪ್ – ಎ, ಗ್ರೂಪ್ – ಬಿ (ಗೆಜೆಟೆಡ್), ಗ್ರೂಪ್ – ಬಿ (ನಾನ್ ಗೆಜೆಟೆಡ್) ಮತ್ತು ಗ್ರೂಪ್ – ಸಿ ಎಂದು ವಿವಿಧ ಹಂತಗಳಲ್ಲಿ ಸರ್ಕಾರಕ್ಕೆ ಸೇರುತ್ತಾರೆ.
ವರ್ಚುವಲ್ ಲಾಂಚ್ ಕಾರ್ಯಕ್ರಮದ ಸಂದರ್ಭದಲ್ಲಿ ಮಾತನಾಡಿದ ಪ್ರಧಾನಿ ಮೋದಿ, “ಭಾರತವು ಇಂದು ವಿಶ್ವದ 5 ನೇ ಅತಿದೊಡ್ಡ ಆರ್ಥಿಕತೆಯಾಗಿದೆ. ಕಳೆದ 8 ವರ್ಷಗಳಲ್ಲಿ, ನಾವು 10 ನೇ ಸ್ಥಾನದಿಂದ 5 ನೇ ಸ್ಥಾನಕ್ಕೆ ಜಿಗಿದಿದ್ದೇವೆ. ಪ್ರಪಂಚದ ಅನೇಕ ದೊಡ್ಡ ಆರ್ಥಿಕತೆಗಳು ನಿರುದ್ಯೋಗ ಮತ್ತು ಹಣದುಬ್ಬರದೊಂದಿಗೆ ಹೋರಾಡುತ್ತಿವೆ ಎಂಬುದು ನಿಜ. 100 ವರ್ಷಗಳಲ್ಲಿನ ದೊಡ್ಡ ಬಿಕ್ಕಟ್ಟಿನ ಅಡ್ಡಪರಿಣಾಮಗಳು ಕೇವಲ 100 ದಿನಗಳಲ್ಲಿ ಹೋಗಲಾರವು” ಎಂದಿದ್ದಾರೆ.
https://twitter.com/ANI/status/1583705793135665152?ref_src=twsrc%5Etfw%7Ctwcamp%5Etweetembed%7Ctwterm%5E1583705793135665152%7Ctwgr%5Ecf8c8f646e068706132bb7b267fe3b39a01b14f9%7Ctwcon%5Es1_c10&ref_url=https%3A%2F%2Fnews13.in%2Farchives%2F218882https://twitter.com/ANI/status/1583705793135665152?ref_src=twsrc%5Etfw%7Ctwcamp%5Etweetembed%7Ctwterm%5E1583705793135665152%7Ctwgr%5Ecf8c8f646e068706132bb7b267fe3b39a01b14f9%7Ctwcon%5Es1_c10&ref_url=https%3A%2F%2Fnews13.in%2Farchives%2F218882
ಕೃಪೆ- http://new13.in