ಜೊಯಿಡಾ: ತಾಲೂಕಿನಲ್ಲಿ ಶಿಶು ಅಭಿವೃದ್ಧಿ ಇಲಾಖೆ, ವಿಕಲಚೇತನ- ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಹಾಗೂ ತಾಲೂಕಾಡಳಿತದಿಂದ ವಿಶ್ವ ಹಿರಿಯ ನಾಗರಿಕರ ದಿನವನ್ನು ಆಚರಿಸಲಾಯಿತು. ಕಾರ್ಯಕ್ರಮವನ್ನ ತೋಟಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕ ಸಂತೋಷ ಎಕ್ಕಳೀಕರ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ನಾಟಿವೈದ್ಯೆ, ಸೂಲಗಿತ್ತಿ ಪಾರ್ವತಿ ಗಾವಡಾ ತೆಲೋಲಿ ಹಾಗೂ ಮೌಳಂಗಿಯ ನಿವೃತ್ತ ಅರಣ್ಯ ಸಿಬ್ಬಂದಿ ಫಕೀರಪ್ಪಾ ಅಡಿಯಪ್ಪಾ ಗಣೇಶಗುಡಿ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ವಿಶ್ವ ಹಿರಿಯ ನಾಗರಿಕರ ದಿನಾಚರಣೆ
