• Slide
  Slide
  Slide
  previous arrow
  next arrow
 • ಡಿಸಿ ಮುಲ್ಲೈ ಮುಗಿಲನ್ ವರ್ಗಾವಣೆ: ನೂತನ ಜಿಲ್ಲಾಧಿಕಾರಿಯಾಗಿ ಪ್ರಭುಲಿಂಗ ಕವಳಿಕಟ್ಟಿ ನೇಮಕ

  300x250 AD

  ಕಾರವಾರ : ಕಳೆದ ಒಂದು ವರ್ಷಗಳಿಂದ ಉತ್ತರ ಕನ್ನಡದ ಜಿಲ್ಲಾಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದ ಮುಲ್ಲೈ ಮುಗಿಲನ್ ಅವರನ್ನು ವರ್ಗಾವಣೆ ಮಾಡಲಾಗಿದ್ದು, ಜಿಲ್ಲೆಯ ನೂತನ ಜಿಲ್ಲಾಧಿಕಾರಿಯಾಗಿ ಪ್ರಭುಲಿಂಗ ಕವಳಿಕಟ್ಟಿ ನಿಯೋಜನೆಯಾಗಿದ್ದಾರೆ. ನೂತನ ಜಿಲ್ಲಾಧಿಕಾರಿಯಾಗಿ ಪ್ರಭುಲಿಂಗ ಕವಳಿಕಟ್ಟಿ ವಿವಿಧ ಇಲಾಖೆಯಲ್ಲಿ ಸೇವೆ ಸಲ್ಲಿಸಿ, ಹಲವು ಅನುಭವಗಳೊಂದಿಗೆ ಉತ್ತರ ಕನ್ನಡದ ಜಿಲ್ಲಾಧಿಕಾರಿಯಾಗಿ ನೇಮಕಗೊಂಡಿದ್ದಾರೆ.

  ಮುಲ್ಲೈ ಮುಗಿಲನ್ ಅವರನ್ನು ಬೆಂಗಳೂರಿಗೆ ವರ್ಗಾವಣೆ ಮಾಡಲಾಗಿದ್ದು ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆ ಕಮಿಷನರ್ ಆಗಿ ನೇಮಕಗೊಂಡಿದ್ದಾರೆ. ಹರೀಶ್ ಕುಮಾರ್ ನಂತರ 2021 ಫೆಬ್ರವರಿ 7 ರಂದು ಉತ್ತರ ಕನ್ನಡಕ್ಕೆ ಡಿಸಿಯಾಗಿ ಆಗಮಿಸಿದ್ದ ಅವರು ಸರಳ ವ್ಯಕ್ತಿತ್ವ ಹಾಗೂ ಉತ್ತಮ ಆಡಳಿತಗಾರರಾಗಿ ಜನಾನುರಾಗಿಯಾಗಿ ಹೆಸರು ಮಾಡಿದ್ದರು.

  ಪ್ರವಾಹ ಸಂದರ್ಭದಲ್ಲಿ ಹಾಗೂ ಕೋವಿಡ್ ಸಂದರ್ಭದಲ್ಲಿ ಮುಲೈ ಮುಗಿಲನ್ ರವರ ಕಾರ್ಯವನ್ನು ಇಡೀ ಜಿಲ್ಲೆಯ ಜನ ಮೆಚ್ಚಿ, ಶ್ಲಾಘಿಸಿದ್ದರು.ಆದರೆ ಅವರ ದಿಢೀರ್ ವರ್ಗಾವಣೆ ಜಿಲ್ಲೆಯ ಜನರಿಗೆ ಬೇಸರ ಮೂಡಿಸುವಂತಿದೆ.

  300x250 AD

  ಉಳಿದಂತೆ ರಾಜ್ಯ ಸರ್ಕಾರ ಒಟ್ಟು 21 ಐಎಎಸ್​ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಿದ್ದು, 5 ಐಎಎಸ್ ಅಧಿಕಾರಿಗಳಿಗೆ ಹೆಚ್ಚುವರಿ ಹೊಣೆ ನೀಡಲಾಗಿದ್ದು, 18 ಐಎಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಲಾಗಿದೆ.

  ವರ್ಗಾವಣೆಗೊಂಡ ಅಧಿಕಾರಿಗಳ ಪಟ್ಟಿ ಹೀಗಿದೆ:

  • ಕಪಿಲ್ ಮೋಹನ್- ಎಸಿಎಸ್, ಪ್ರವಾಸೋದ್ಯಮ ಇಲಾಖೆ,
  • ಅನಿಲ್ ಕುಮಾರ್ ಟಿ.ಕೆ.- ಪ್ರಧಾನ ಕಾರ್ಯದರ್ಶಿ, ಕಂದಾಯ ಇಲಾಖೆ ( ಹೆಚ್ಚುವರಿ ಹೊಣೆ) ಹಾಲಿ ಆರೋಗ್ಯ ಇಲಾಖೆ ಪ್ರಧಾನ ಕಾರ್ಯದರ್ಶಿ
  • ಡಾ. ಪ್ರಸಾದ್ ಎನ್.ವಿ.- ಕಾರ್ಯದರ್ಶಿ, ಕಾರ್ಮಿಕ ಇಲಾಖೆ (ಹೆಚ್ಚುವರಿ ಹೊಣೆ)​ ಹಾಲಿ ಸಾರಿಗೆ ಇಲಾಖೆ ಕಾರ್ಯದರ್ಶಿ
  • ಜಯರಾಂ ಎನ್. – ಕಾರ್ಯದರ್ಶಿ, ಕಂದಾಯ ಇಲಾಖೆ (ಹೆಚ್ಚುವರಿ ಹೊಣೆ) ಹಾಲಿ ಜಿಡಬ್ಲ್ಯೂಎಸ್ ಎಸ್ ಬಿ ಅಧ್ಯಕ್ಷ
  • ಡಾ‌. ಕುಮಾರ- ಜಿಲ್ಲಾಧಿಕಾರಿ, ದಕ್ಷಿಣ ಕನ್ನಡ ( ಹೆಚ್ಚುವರಿ ಹೊಣೆ) ಹಾಲಿ ದಕ್ಷಿಣ ಕನ್ನಡ ಜಿ.ಪಂ. ಸಿಇಓ
  • ಡಾ. ಬಗಾದಿ ಗೌತಮ್-ನಿರ್ದೇಶಕ, ಗಣಿ ಮತ್ತು ಭೂ ವಿಜ್ಞಾನ ಇಲಾಖೆ,
  • ಶ್ರೀವಿದ್ಯಾ ಪಿ.ಐ – ಸಿಇಓ,ಇ-ಆಡಳಿತ ಕೇಂದ್ರ ಬೆಂಗಳೂರು,
  • ರಮೇಶ್ ಡಿ.ಎಸ್- ಜಿಲ್ಲಾಧಿಕಾರಿ, ಚಾಮರಾಜನಗರ,
  • ಡಾ. ಗೋಪಾಲಕೃಷ್ಣ ಹೆಚ್.ಎನ್- ಜಿಲ್ಲಾಧಿಕಾರಿ, ಮಂಡ್ಯ
  • ಜಾನಕಿ ಕೆ.ಎಂ- ಹೆಚ್ಚುವರಿ ಯೋಜನಾ ನಿರ್ದೇಶಕಿ, ಸಕಾಲ,
  • ಡಾ. ರಾಜೇಂದ್ರ ಕೆ.ವಿ- ಜಿಲ್ಲಾಧಿಕಾರಿ, ಮೈಸೂರು,
  • ಅಶ್ವಥಿ ಎಸ್- ಆಯುಕ್ತೆ, ಪಶು ಸಂಗೋಪನಾ ಇಲಾಖೆ
  • ಮುಲ್ಲೈ ಮುಹಿಲನ್ – ಆಯುಕ್ತ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ,
  • ಪ್ರಭುಲಿಂಗ್ ಕವಳಿಕಟ್ಟಿ-ಜಿಲ್ಲಾಧಿಕಾರಿ, ಉತ್ತರ ಕನ್ನಡ,
  • ಎಂ.ಎಸ್. ದಿವಾಕರ-ಜಿ.ಪಂ. ಸಿಇಓ, ಚಿತ್ರದುರ್ಗ,
  • ದಿವ್ಯಪ್ರಭು ಜಿ.ಆರ್.ಜೆ.- ಜಿಲ್ಲಾಧಿಕಾರಿ, ಚಿತ್ರದುರ್ಗ
  • ನಳಿನಿ ಅತುಲ್- ಅಧ್ಯಕ್ಷ, ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ,
  • ರಘುನಂದನ್ ಮೂರ್ತಿ- ಜಿಲ್ಲಾಧಿಕಾರಿ, ಹಾವೇರಿ,
  • ಭನ್ವರ್ ಸಿಂಗ್ ಮೀನಾ- ನಿಯಂತ್ರಕ, ಕೆಪಿಎಸ್ ಸಿ
  • ಪ್ರಕಾಶ್ ಜಿ.ಟಿ.- ನಿರ್ದೇಶಕ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ,
  • ಡಾ. ಆಕಾಶ್ ಎಸ್.- ಸಿಇಓ, ಜಿ.ಪಂ. ಕೊಡಗು
  Share This
  300x250 AD
  300x250 AD
  300x250 AD
  Leaderboard Ad
  Back to top