• first
  second
  third
  Slide
  Slide
  previous arrow
  next arrow
 • ಅ.23ಕ್ಕೆ ಪರಿವಾರ ಸಹಕಾರಿ ಸಂಘ ನಿಯಮಿತದ ಉದ್ಘಾಟನಾ ಕಾರ್ಯಕ್ರಮ

  300x250 AD

  ಶಿರಸಿ: ನೂತನವಾಗಿ ಆರಂಭಗೊಂಡಿರುವ ಪರಿವಾರ ಸಹಕಾರಿ ಸಂಘ ನಿಯಮಿತದ ಉದ್ಘಾಟನಾ ಸಮಾರಂಭ ಹಾಗೂ ಹಿರಿಯ ಸಹಕಾರಿಗಳಿಗೆ ಸನ್ಮಾನ ಕಾರ್ಯಕ್ರಮವನ್ನು ಅ.23, ಭಾನುವಾರ ಸಂಜೆ 6.15ಕ್ಕೆ ನಗರದ ರಾಘವೇಂದ್ರ ಕಲ್ಯಾಣ ಮಂಟಪದಲ್ಲಿ ಆಯೋಜಿಸಲಾಗಿದೆ.

  ಕಾರ್ಯಕ್ರಮದ ಉದ್ಘಾಟಕರಾಗಿ ಗೃಹ ಸಚಿವರಾದ ಆರಗ ಜ್ಞಾನೇಂದ್ರ ಆಗಮಿಸಲಿದ್ದು, ಪರಿವಾರ ಸಹಕಾರಿ ಷೇರು ಸರ್ಟಿಫಿಕೇಟನ್ನು ಸಭಾಧ್ಯಕ್ಷ ವಿಶ್ವೇಶ್ವರ್ ಹೆಗಡೆ ಕಾಗೇರಿ ಹಾಗೂ ಪರಿವಾರ ವಿಶೇಷ ಠೇವಣಿ ಸರ್ಟಿಫಿಕೇಟನ್ನು ಕಾರ್ಮಿಕ ಸಚಿವ ಶಿವರಾಮ್ ಹೆಬ್ಬಾರ್ ಬಿಡುಗಡೆಗೊಳಿಸಲಿದ್ದಾರೆ.
  ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪರಿವಾರ ಸಹಕಾರಿ ಸಂಘದ ಅಧ್ಯಕ್ಷ ಶ್ರೀನಿವಾಸ್ ಹೆಬ್ಬಾರ್ ವಹಿಸಲಿದ್ದು,ಮುಖ್ಯ ಅತಿಥಿಗಳಾಗಿ ಕೆಡಿಸಿಸಿ ಉಪಾಧ್ಯಕ್ಷ ಮೋಹನದಾಸ ನಾಯಕ್, ಸಹಕಾರಿ ಸಂಘಗಳ ಉಪನಿಬಂಧಕ ಮಂಜುನಾಥ್ ಆರ್. ಆಗಮಿಸಲಿದ್ದಾರೆ. ಮೇಘಾಲೈಟ್ ಇಂಡಸ್ಟ್ರೀಸ್ ಚೇರ್ಮನ್ ಎಚ್.ವಿ.ಧರ್ಮೇಶ್, ವಿಸ್ತಾರ್ ಮೀಡಿಯಾ ಪ್ರೈವೆಟ್ ಲಿಮಿಟೆಡ್ ಸಿಇಒ ಹರಿಪ್ರಕಾಶ್ ಕೋಣೆಮನೆ ಗೌರವ ಉಪಸ್ಥಿತಿ ನೀಡಲಿದ್ದಾರೆ.

  300x250 AD

  TAPCMCS ಶಿರಸಿ ಅಧ್ಯಕ್ಷ ಜಿ.ಎಂ.ಹೆಗಡೆ ಹುಳಗೋಳ, TAPCMCS ಸಿದ್ದಾಪುರ ಅಧ್ಯಕ್ಷ ಆರ್.ಎಂ.ಹೆಗಡೆ ಬಾಳೇಸರ, TAPCMCS ಯಲ್ಲಾಪುರ ಅಧ್ಯಕ್ಷ ಎನ್.ಕೆ.ಭಟ್ ಅಗ್ಗಾಶಿಕುಂಬ್ರಿ ಇವರಿಗೆ ಸನ್ಮಾನ ಕಾರ್ಯಕ್ರಮ ನಡೆಯಲಿದೆ.
  ಕಾರ್ಯಕ್ರಮಕ್ಕೆ ಸರ್ವರೂ ಆಗಮಿಸಬೇಕೆಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

  Share This
  300x250 AD
  300x250 AD
  300x250 AD
  Back to top