Slide
Slide
Slide
previous arrow
next arrow

ಸಾಮಾನ್ಯ ವರ್ಗದವರ ಕೋಟಾಕ್ಕೆ ಕತ್ತರಿ!

300x250 AD

ಭಟ್ಕಳ: ರಾಜ್ಯ ಬಿಜೆಪಿ ಸರಕಾರ ಘೋಷಣೆ ಮಾಡಿದಂತೆ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಮೀಸಲಾತಿ ಪ್ರಮಾಣ ಹೆಚ್ಚಳ ಆದೇಶ ಜಾರಿ ಮಾಡಿದರೆ ಸಾಮಾನ್ಯ ವರ್ಗದವರ ಕೋಟಾಕ್ಕೆ ಕತ್ತರಿ ಬೀಳುವುದು ಖಚಿತವಾಗಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಯಾವ ವರ್ಗದ ಮೀಸಲಾತಿಯನ್ನೂ ಕಡಿತಗೊಳಿಸದೇ ರಾಜ್ಯ ಸರಕಾರವು ಎಸ್ಸಿ- ಎಸ್ಟಿ ಮೀಸಲಾತಿ ಹೆಚ್ಚಳ ಮಾಡುವುದಾಗಿ ಸ್ಪಷ್ಟಪಡಿಸಿದ್ದಾರೆ. ಆದರೂ ಜನರಲ್ ಕೆಟಗರಿಯವರ ಕೋಟಾ ಕಡಿತಗೊಳಿಸದೇ ಯಾವ ಮ್ಯಾಜಿಕ್ ನಡೆಸಿದರೂ ಎಸ್ಸಿ ಎಸ್ಟಿಯವರ ಮೀಸಲು ಹೆಚ್ಚಳಗೊಳಿಸುವುದು ಅಂದುಕೊಂಡಷ್ಟು ಸುಲಭವಾಗಲ್ಲ.
ರಾಜ್ಯದಲ್ಲಿ ಪ್ರಸ್ತುತ ಎಸ್ಸಿ ಶೇ.15, ಎಸ್ಟಿಯವರು ಶೇ.3 ರಷ್ಟು, ಓಬಿಸಿ ಶೇ.32 ರಷ್ಟು ಮೀಸಲಾತಿ ಇದೆ. ಎಲ್ಲ ವರ್ಗದವರಿಗೆ ಒಟ್ಟು ಶೇಕಡ 50 ರಷ್ಟು ಮೀಸಲಾತಿ ಸೌಲಭ್ಯ ಕಲ್ಪಿಸಲಾಗಿದೆ. ಉಳಿದ ಶೇ.50 ರಷ್ಟನ್ನು ಜನರಲ್ ಕೆಟಗರಿಯವರಿಗೆ ನಿಗದಿಪಡಿಸಲಾಗಿದೆ. ರಾಜ್ಯ ಸರಕಾರದ ನಿರ್ಧಾರದಂತೆ ಎಸ್ಸಿ ಮೀಸಲು ಈಗಿರುವ ಶೇ.15 ರಿಂದ ಶೇ.17 ಕ್ಕೆ ಮತ್ತು ಎಸ್ಟಿಯವರ ಮೀಸಲು ಶೇ.3 ರಿಂದ ಶೇ.7ಕ್ಕೆ ಹೆಚ್ಚಳವಾದರೆ ಅಂದರೆ ಪರಿಶಿಷ್ಟ ಪಂಗಡ ಮತ್ತು ಪರಿಶಿಷ್ಟ ಜಾತಿಯವರ ಮೀಸಲಾತಿಯನ್ನ ಒಟ್ಟು ಶೇ.6ರಷ್ಟು ಹೆಚ್ಚಿಸಿದರೆ ಜನರಲ್ ಕೆಟಗರಿಯವರ ಪಾಲಿನ ಶೇ.50 ರಷ್ಟು ಕೋಟಾದಲ್ಲಿ ಶೇಕಡ 6 ರಷ್ಟನ್ನು ಕಡಿತಗೊಳಿಸಲೇ ಬೇಕಾಗುತ್ತದೆ.ರಾಜ್ಯ ಸರಕಾರವಾಗಲಿ ಅಥವಾ ಕೇಂದ್ರಸರಕಾರವಾಗಲಿ ಎಲ್ಲ ವರ್ಗದ ಜಾತಿಗಳ ಮೀಸಲಾತಿ ಪ್ರಮಾಣ ಶೇಕಡ 50 ರಷ್ಟನ್ನು ಮೀರುವಂತಿಲ್ಲ ಎಂದು ಸುಪ್ರೀಂ ಕೋರ್ಟ್ ಇಂದಿರಾ ಸಹಾನಿ ಪ್ರಕರಣದಲ್ಲಿ ಸ್ಪಷ್ಟಪಡಿಸಿ ಐತಿಹಾಸಿಕ ತೀರ್ಪು ನೀಡಿದೆ. ರಾಜ್ಯ ಸರಕಾರವು ಎಸ್ಸಿ-ಎಸ್ಟಿ ಮೀಸಲು ಏರಿಸಿದರೆ ಜನರಲ್ ಕೆಟಗರಿಯವರ ಕೋಟಾ ಶೇಕಡ 50ರಿಂದ 44ಕ್ಕೆ ಕುಸಿಯಲಿದೆ.
ಇಷ್ಟೇ ಅಲ್ಲ ಕೇಂದ್ರ ಸರಕಾರವು ಮೇಲ್ವರ್ಗದವರಲ್ಲಿ ಆರ್ಥಿಕವಾಗಿ ಹಿಂದುಳಿದವರಿಗೆ (ಇಡಬ್ಯು ಎಸ್) ಬಡವರಿಗೆ ಶೇಕಡ 10 ರಷ್ಟು ಮೀಸಲಾತಿಯನ್ನ ಜಾರಿಗೆ ತಂದಿದೆ. ರಾಜ್ಯದಲ್ಲಿಯೂ ಸಚಿವ ಸಂಪುಟವು ಮೇಲ್ವರ್ಗದ ಬಡವರಿಗೆ ಶೇ.10ರಷ್ಟು ಮೀಸಲಾತಿ ಅನುಷ್ಟಾನಗೊಳಿಸುವ ತೀರ್ಮಾನ ತಗೆದೊಕೊಂಡಿದೆ. ಆಗ ಜನರಲ್ ಕೆಟಗರಿಯವರ ಪಾಲಿನ ಮೀಸಲಾತಿಯಲ್ಲಿ ಮತ್ತೆ ಶೇ.10 ರಷ್ಟು ಕಡಿತವಾಗುತ್ತದೆ.ಎಸ್ಸಿ-ಎಸ್ಟಿ ಮೀಸಲು ಶೇ. 6ರಷ್ಟು ಹೆಚ್ಚಳ ಮತ್ತು ಮೇಲ್ವರ್ಗದ ಬಡವರಿಗೆ ಶೇಕಡ 10 ರಷ್ಟು ಮೀಸಲು ನೀಡುವ ಪದ್ಧತಿ ಅನುಷ್ಟಾನಕ್ಕೆ ಬಂದರೆ ಸಾಮಾನ್ಯ ವರ್ಗದವರ ಮೀಸಲಾತಿ ಈಗಿರುವ ಶೇಕಡ 50ರಿಂದ 34ಕ್ಕೆ ಇಳಿಯಲಿದೆ. ಆಗ ಜನರಲ್ ಕೆಟಗರಿಯವರು ಪ್ರತಿಶತ 16 ರಷ್ಟು ತಮ್ಮ ಪಾಲಿನ ಕೋಟವನ್ನು ಕಳೆದುಕೊಳ್ಳಲಿದ್ದಾರೆ.
ರಾಜ್ಯ ಸರಕಾರವು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರ ಮೀಸಲಾತಿ ಪ್ರಮಾಣವನ್ನು ಶೇಕಡಾ 6 ರಷ್ಟು ಹೆಚ್ಚಿಸಿದರೆ ಮತ್ತು ಇಡಬ್ಲ್ಯೂಎಸ್‌ನವರಿಗೆ ಶೇಕಡ 10 ರಷ್ಟು ಮೀಸಲು ನೀಡಿದರೆ ಸಾಮಾನ್ಯ ವರ್ಗದವರ ಪಾಲಿನ ಶೇ.50 ರಷ್ಟು ಕೋಟಾ ಕರಗುವುದು ಖಚಿತವಾಗಿದೆ ಎಂದು ಕಾನೂನು ತಜ್ಞರೂ ಆಗಿರುವ ಎಸ್ಸಿ-ಎಸ್ಟಿ ಮೀಸಲು ಹೆಚ್ಚಳ ಆಯೋಗದ ಅಧ್ಯಕ್ಷರಾಗಿದ್ದ ನ್ಯಾ.ಹೆಚ್.ಎನ್.ನಾಗಮೋಹನದಾಸ್ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದರು. ಇಡಬ್ಲ್ಯೂಎಸ್‌ನವರಿಗೆ ಶೇ.10 ಮೀಸಲಾತಿ ಆದೇಶ ಜಾರಿಗೆ ತರುವ ನಿರ್ಣಯ ಮಾಡಿರುವುದರಿಂದ ಸಾಮಾನ್ಯ ವರ್ಗದವರಲ್ಲಿನ ಬಡವರು ಸಹ ಮೀಸಲಾತಿ ಸೌಲಭ್ಯಕ್ಕೆ ಒಳಪಡುತ್ತಾರೆ. ಎಸ್ಸಿ-ಎಸ್ಟಿ ಮೀಸಲು ಹೆಚ್ಚಳದಿಂದ ಜನರಲ್ ಕೆಟಗರಿಯವರ ಕೋಟಾ ಕಡಿತವಾದರೂ ಅವರಿಗೆ ಅನ್ಯಾಯವಾಗದು ಎನ್ನುವ ಲೆಕ್ಕಾಚಾರ ರಾಜ್ಯ ಬಿಜೆಪಿ ಸರಕಾರದ್ದಾಗಿದೆ. ಮೀಸಲು ಹೆಚ್ಚಳ ಮಾಡುವುದು ಮತ್ತು ಕೆಲವರ ಪಾಲಿನ ಕೋಟಾ ಕಡಿತಗೊಳಿಸುವುದು ಕೋರ್ಟ್ಗಳಲ್ಲಿ ಕಾನೂನು ಪರಾಮರ್ಶೆಗಂತೂ ಒಳಪಡುವುದು ಕನ್ಫರ್ಮ್ ಆಗಿದೆ.

300x250 AD
Share This
300x250 AD
300x250 AD
300x250 AD
Back to top