ಕಾರವಾರ: ಕಂದಾಯ ಇಲಾಖೆಯು ರಾಜ್ಯ ಸರ್ಕಾರ ಪ್ರಾಯೋಜಕತ್ವದಲ್ಲಿ ಅ.19 ಮತ್ತು 20ರಂದು ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಜಿಲ್ಲಾ ವಿಕೋಪ ನಿರ್ವಹಣೆ ಯೋಜನೆ ಪರಿಷ್ಕರಣೆ ಕಾರ್ಯಾಗಾರವನ್ನು ಜಿಲ್ಲಾಧಿಕಾರಿ ಮುಲ್ಲೈ
ಮುಗಿಲನ್ ಉದ್ಘಾಟಿಸಿದರು.
ಕಾರ್ಯಾಗಾರದ ನಂತರ ಪ್ರಶಿಕ್ಷಣಾರ್ಥಿಗಳಿಂದ ವಿಪತ್ತು ನಿರ್ವಹಣಾ ಯೋಜನೆಗಾಗಿ ಮೂಲ ತತ್ವಗಳು, ಪರಿಕಲ್ಪನೆಗಳು, ದುರ್ಬಲಕ ಮತ್ತು ಅಪಾಯದ ಮೌಲ್ಯಮಾಪನ ಸಾಧನಗಳನ್ನು ವಿವರಣೆ, ವಿವಿಧ ವಿಪತ್ತು ಸನ್ನಿವೇಶಗಳು ಮತ್ತು ಅವುಗಳ ಪರಿಣಾಮಕಾರಿ ನಿರ್ವಹಣೆ, ಜಿಲ್ಲಾ ವಿಪತ್ತು ನಿರ್ವಹಣೆ ಯೋಜನೆ ತಯಾರಿಕೆಯ ಅಗತ್ಯತೆ ಹಾಗೂ ಜವಾಬ್ದಾರಿಗಳು ಮತ್ತು ಜಿಲ್ಲಾ ವಿಕೋಪ ನಿರ್ವಹಣೆ ಯೋಜನೆ 2022-23ನ್ನು ಪರಿಷ್ಕರಣೆ ಮಾಡಲಾಗುವುದು ಎಂದು ಹೇಳಿದರು.