Slide
Slide
Slide
previous arrow
next arrow

95 ಗ್ರಾಮ ಪಂಚಾಯತಗಳಿಗೆ ಪಿಒಎಸ್ ಮಷಿನ್‌ ವಿತರಣೆ

300x250 AD

ಕಾರವಾರ: ಜಿಲ್ಲೆಯ 229 ಗ್ರಾಮ ಪಂಚಾಯತಗಳಲ್ಲಿ ತೆರಿಗೆ ವಸೂಲಾತಿ ಮತ್ತು ಆದಾಯ ಪರಿಷ್ಕರಣೆಯಲ್ಲಿ ಪ್ರಯತ್ನ ಮಾಡಲಾಗುತ್ತಿದೆ. ಇದಕ್ಕಾಗಿ ಪಾಯಿಂಟ್ ಆಫ್ ಸೇಲ್ (ಪಿಒಎಸ್) ಮಷಿನ್‌ಗಳನ್ನು ಎಲ್ಲಾ ಗ್ರಾಮ ಪಂಚಾಯತಗಳಿಗೆ ನೀಡುತ್ತಿದ್ದು, ಈಗಾಗಲೇ 95 ಗ್ರಾಮ ಪಂಚಾಯತಗಳಿಗೆ ಈ ಮಷಿನ್‌ಗಳನ್ನು ವಿತರಿಸಲಾಗುತ್ತಿದೆ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಪ್ರಿಯಾಂಗಾ ಎಂ. ತಿಳಿಸಿದ್ದಾರೆ.
ಜಿಲ್ಲಾ ಪಂಚಾಯತ ಸಭಾಂಗಣದಲ್ಲಿ ಜಿಲ್ಲಾ ಪಂಚಾಯತ ಮತ್ತು ಕೆನರಾ ಬ್ಯಾಂಕ್ ಸಂಯುಕ್ತಾಶ್ರಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಇನ್ನುಮುಂದೆ ತೆರಿಗೆ ಕಟ್ಟಲು ಹೆಡ್ ಆಫೀಸ್‌ಗೆ ಬರುವ ಅವಶ್ಯಕತೆ ಇರುವುದಿಲ್ಲ. ಆನ್‌ಲೈನ್ ಮುಂಖಾತರ ಎಲ್ಲಾ ವಿನಿಯೋಗಳನ್ನು ಮಾಡಬಹುದಾಗಿದೆ. ಮಷಿನ್ ಕುರಿತು ಯಾವುದೇ ಸಮಸ್ಯೆ ಹಾಗೂ ಪ್ರಶ್ನೆಗಳಿದ್ದರೆ ಕೆನರಾ ಬ್ಯಾಂಕ್‌ನ ಟೆಕ್ನಿಕಲ್ ಗ್ರೂಪ್ ಮೂಲಕ ಮಾಹಿತಿ ಪಡೆದುಕೊಂಡು ಸಮಸ್ಯೆ ಬಗೆಹರಿಸಿಕೊಳ್ಳಿ. ಮುಂಬರುವ ದಿನಗಳಲ್ಲಿ ಬಾಕಿ ಇರುವ ಗ್ರಾಮ ಪಂಚಾಯತ್‌ಗಳಲ್ಲೂ ಕೆನರಾ ಬ್ಯಾಂಕ್ ಸಂಯುಕ್ತಾಶ್ರಯದಲ್ಲಿ ಪಿಒಎಸ್ ಮಷಿನ್‌ಗಳನ್ನು ವಿತರಿಸಲಾಗುವುದು ಎಂದರು.
ಲೀಡ್ ಬ್ಯಾಂಕ್ ಮುಖ್ಯಸ್ಥ ರುದ್ರೇಶ್ ಮಾತನಾಡಿ, ಎಲ್ಲಾ ಗ್ರಾಮ ಪಂಚಾಯತ್‌ಗಳು ಡಿಜಿಲೀಕರಣವಾಗುತ್ತಿರುವುದು ತೆರಿಗೆ ವಸೂಲಾತಿಯಲ್ಲಿ ಮತ್ತು ಆದಾಯ ಪರಿಷ್ಕರಣೆಯಲ್ಲಿ ಅನುಕೂಲವಾಗುತ್ತದೆ ಮತ್ತು ಜನರು ಆನ್‌ಲೈನ್ ಮೂಲಕ ಸುಲಭವಾಗಿ ತೆರಿಗೆಗಳನ್ನು ಕಟ್ಟಬಹುದಾಗಿದೆ ಎಂದರು. ಪಿಒಎಸ್ ಯಂತ್ರಗಳ ಬಗ್ಗೆ ಎಲ್ಲಾ ಪಿಡಿಒಗಳಿಗೆ ಹಾಗೂ ಬಿಲ್ ಕಲೆಕ್ಟರ್‌ಗಳಿಗೆ ನಮ್ಮ ತಾಂತ್ರಿಕ ತಂಡದಿಂದ ಈ ಕುರಿತು ಡೆಮೋ ನೀಡಲಾಗಿದೆ. ಯಾವುದೇ ತಾಂತ್ರಿಕ ಸಮಸ್ಯೆಯಾದಲ್ಲಿ ನಮ್ಮನ್ನು ಸಂಪಕಿಸಬಹುದಾಗಿದೆ ಎಂದು ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಲೆಕ್ಕಾಧಿಕಾರಿ ಸತೀಶ್ ಪವಾರ, ಆನಂದ ಹಬಿಬ್, ಕೆನರಾ ಬ್ಯಾಂಕ್ ಅಸಿಸ್ಟೆಂಟ್ ಜನರಲ್ ಮ್ಯಾನೇಜರ್ ನಂದಕಿಶೋರ್ ಕಾಸ್ಕರ್, ಜಿಲ್ಲಾ ಗ್ರಾಮ ಪಂಚಾಯತ್ ಪಿಡಿಒಗಳು ಹಾಗೂ ಬಿಲ್ ಕಲೆಕ್ಟರ್‌ಗಳು ಇದ್ದರು.

300x250 AD
Share This
300x250 AD
300x250 AD
300x250 AD
Back to top