• Slide
  Slide
  Slide
  previous arrow
  next arrow
 • ಲೀಲಾ ನಾಯ್ಕ್ ಅವರಿಂದ ಅಂಗನವಾಡಿ ಮಕ್ಕಳಿಗೆ ಸಮವಸ್ತ್ರವಿತರಣೆ

  300x250 AD

  ಅಂಕೋಲಾ: ಸರಕಾರ ಅಂಗನವಾಡಿ ಕೇಂದ್ರಗಳಿಗೆ ಒದಗಿಸುವ ಸೌಲಭ್ಯಗಳ ಜೊತೆ ಸಾರ್ವಜನಿಕರ ಸಹಭಾಗಿತ್ವವೂ ಬಹುಮುಖ್ಯ ಎಂದು ಶಿಶು ಅಭಿವೃದ್ಧಿ ಇಲಾಖೆಯ ಅಧಿಕಾರಿ ಸವಿತಾ ಶಾಸ್ತ್ರೀಮಠ ಹೇಳಿದರು.
  ಅವರು ಪಳ್ಳಿಕೇರಿಯ ಅಂಗನವಾಡಿ ಕೇಂದ್ರದಲ್ಲಿ ದಾನಿ ನೀಲಾ ನಾಯ್ಕ ಇವರು ಅಂಗನವಾಡಿಯ ಮಕ್ಕಳಿಗೆ ಕೊಡುಗೆಯಾಗಿ ನೀಡಿದ ಸಮವಸ್ತ್ರಗಳನ್ನು ವಿತರಿಸಿ ಮಾತನಾಡಿ, ಅಂಗನವಾಡಿ ಕೇಂದ್ರದಲ್ಲಿ ಕಲಿಯುತ್ತಿರುವ ಮಕ್ಕಳ ಪಾಲಕರು, ಪೋಷಕರು ಹಾಗೂ ಊರಿನ ಸಾರ್ವಜನಿಕರೂ ಕೂಡ ಅಂಗನವಾಡಿಯ ಅಭಿವೃದ್ಧಿಗೆ ಕೈಜೋಡಿಸಬೇಕು. ಎಲ್ಲವನ್ನೂ ಸರಕಾರವೇ ಮಾಡುತ್ತದೆ ಎನ್ನುವ ಮನೋಭಾವನೆ ಬಿಟ್ಟು ಅಂಗನವಾಡಿ ನಮ್ಮದೇ ಎನ್ನುವ ಅಭಿಮಾನ ಹೊಂದಿರಬೇಕು ಎಂದರು.
  ಕಿರಿಯ ಪ್ರಾಥಮಿಕ ಶಾಲೆಯ ಮುಖ್ಯಾಧ್ಯಾಪಕಿ ಬೇಬಿ ಗಾಂವಕರ ಮಾತನಾಡಿ ಪಳ್ಳಿಕೇರಿ ಮತ್ತು ಕನಸೆಗದ್ದೆ ಭಾಗದ ಸಾರ್ವಜನಿಕರು ಶಾಲೆಯ ಎಲ್ಲ ಕಾರ್ಯಕ್ರಮಗಳಲ್ಲೂ, ಅಭಿವೃದ್ಧಿ ಕಾರ್ಯಗಳಲ್ಲೂ ಭಾಗವಹಿಸುತ್ತಿರುವುದು ಸಂತೋಷವನ್ನುಂಟು ಮಾಡಿದೆ ಎಂದರು.
  ಸಾಮಾಜಿ ಕಾರ್ಯಕರ್ತ ವಿಜಯಕುಮಾರ ಮಾತನಾಡಿ, ದಾನಿಗಳು ಕೈಜೋಡಿಸಿದರೆ ಅಂಗನವಾಡಿ ಕೇಂದ್ರವನ್ನು ಮಾದರಿ ಕೇಂದ್ರವನ್ನಾಗಿ ರೂಪಿಸಬಹುದು ಎಂದರು. ಪತ್ರಕರ್ತ ನಾಗರಾಜ ಜಾಂಬಳೇಕರ ಮಾತನಾಡಿ, ಅಂಗನವಾಡಿ ಕೇಂದ್ರಗಳು ಮಕ್ಕಳಲ್ಲಿ ಶಿಸ್ತು ಮತ್ತು ಸಂಸ್ಕ್ರತಿಯನ್ನು ಉತ್ತಮಗೊಳಿಸುವ ಅಡಿಪಾಯ ಇದ್ದಂತೆ. ಇಂತಹ ಕೇಂದ್ರವನ್ನು ಪ್ರತಿಯೊಬ್ಬರೂ ತಮ್ಮದೇ ಮನೆ ಇದ್ದಂತೆ ಎನ್ನುವ ಅಭಿಮಾನ ಹೊಂದಿ ಅಭಿವೃದ್ಧಿಯಲ್ಲಿ ಕೈಜೋಡಿಸಬೇಕು ಎಂದರು.
  ವೇದಿಕೆಯಲ್ಲಿ ಪುರಸಭೆಯ ಸದಸ್ಯೆ ಜೈರಾಬಿ ಬೇಂಗ್ರೆ, ಬಾಲವಿಕಾಸ ಸಮಿತಿಯ ಅಧ್ಯಕ್ಷೆ ಕವಿತಾ ನಾಯ್ಕ ಹಾಗೂ ಸದಸ್ಯೆ ಶಾರದಾ ಭೋವಿ ಉಪಸ್ಥಿತರಿದ್ದರು. ದಾನಿಗಳಾದ ನೀಲಾ ಧಾಕು ನಾಯ್ಕ ಸುಮಾರು 25 ಮಕ್ಕಳಿಗೆ ಸಮವಸ್ತ್ರಗಳನ್ನು ಕೊಡುಗೆಯಾಗಿ ನೀಡಿ ಮಾದರಿಯಾದರು. ಇದೇ ವೇಳೆ ಪುರಸಭೆಯ ಅಧ್ಯಕ್ಷೆ ಶಾಂತಲಾ ನಾಡಕರ್ಣಿ ತಮ್ಮ ವಿಜಯಾನಂದ ಟ್ರಸ್ಟ್ ವತಿಯಿಂದ ಕೊಡುಗೆಯಾಗಿ ನೀಡಿದ ಐಡಿ ಕಾರ್ಡ್ ಹಾಗೂ ಮ್ಯಾಟ್‌ಗಳನ್ನು ಮತ್ತು ಅಕ್ಷತಾ ರವಿಕುಮಾರ ನಾಯ್ಕ ಕೊಡುಗೆಯಾಗಿ ನೀಡಿದ ಬೆಲ್ಟಗಳನ್ನೂ ವಿತರಿಸಲಾಯಿತು.
  ಅಂಗನವಾಡಿ ಶಿಕ್ಷಕಿ ಶ್ವೇತಾ ನಾಯ್ಕ ಸ್ವಾಗತಿಸಿದರು, ಸಹಾಯಕಿ ಕವಿತಾ ಭೋವಿ ವಂದಿಸಿದರು. ಈ ಸಂದರ್ಭದಲ್ಲಿ ಬಾಲವಿಕಾಸ ಸಮಿತಿಯ ಸದಸ್ಯರು, ಸ್ತ್ರೀಶಕ್ತಿ ಸಂಘದ ಸದಸ್ಯರು, ಪಾಲಕರು, ಪೋಷಕರು ಹಾಗೂ ವಿದ್ಯಾರ್ಥಿಗಳು ಇದ್ದರು.

  300x250 AD
  Share This
  300x250 AD
  300x250 AD
  300x250 AD
  Leaderboard Ad
  Back to top