• Slide
    Slide
    Slide
    previous arrow
    next arrow
  • ಮಕ್ಕಳ ಮಾಹಿತಿ, ಭಾವಚಿತ್ರ ಪ್ರಕಟಣೆ ಶಿಕ್ಷಾರ್ಹ ಅಪರಾಧ

    300x250 AD

    ಕಾರವಾರ: ಬಾಲನ್ಯಾಯ(ಮಕ್ಕಳ ಪಾಲನೆ ಮತ್ತು ರಕ್ಷಣೆ)ತಿದ್ದುಪಡಿ ಕಾಯ್ದೆ 2021ರ ಕಲಂ 74ರಲ್ಲಿ ಮಕ್ಕಳ ಮಾಹಿತಿಯನ್ನು ಹಾಗೂ ಭಾವಚಿತ್ರವನ್ನು ಬಹಿರಂಗಪಡಿಸುವುದು ಶಿಕ್ಷಾರ್ಹ ಅಪರಾಧವಾಗಿದೆ ಎಂದು ತಿಳಿಸಿರುವ ಮಕ್ಕಳ ರಕ್ಷಣಾ ನಿರ್ದೇಶನಾಲಯವು ಬಾಲನ್ಯಾಯ(ಮಕ್ಕಳ ಪಾಲನೆ ಮತ್ತು ರಕ್ಷಣೆ)ತಿದ್ದುಪಡಿ ಕಾಯ್ದೆ 2021 ಅನ್ನು ಕಡ್ಡಾಯವಾಗಿ ಪಾಲಿಸಲು ಕಟ್ಟುನಿಟ್ಟಿನ ನಿರ್ದೇಶನ ನೀಡಿದೆ.

    ಇತ್ತೀಚೆಗೆ ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನ ಅಪ್ತಾಪ್ರ ಬಾಲಕೀಯ ಮೇಲೆ ನಡೆದ ಲೈಂಗಿಕ ದೌರ್ಜನ್ಯ ಕುರಿತು ಮಾಧ್ಯಮಗಳಲ್ಲಿ ಭಿತ್ತರಿಸಿದ ವರದಿಗಳಲ್ಲಿ ಮಗುವಿನ ಛಾಯಾಚಿತ್ರ ಹಾಗೂ ಹೆಸರು ಪ್ರಕಟಿಸಿರುವುದರ ಬಗ್ಗೆ ಮಕ್ಕಳ ರಕ್ಷಣಾ ನಿರ್ದೇಶನಾಲಯದ ನಿರ್ದೇಶಕರು ಕಳವಳ ವ್ಯಕ್ತಪಡಿಸಿದ್ದಾರೆ. ಬಾಲನ್ಯಾಯ(ಮಕ್ಕಳ ಪಾಲನೆ ಮತ್ತು ರಕ್ಷಣೆ)ತಿದ್ದುಪಡಿ ಕಾಯ್ದೆ 2021ರ ಕಲಂ 74ರಲ್ಲಿ ಮಕ್ಕಳ ಮಾಹಿತಿಯನ್ನು ಹಾಗೂ ಭಾವಚಿತ್ರವನ್ನು ಬಹಿರಂಗಪಡಿಸುವುದು ಶಿಕ್ಷಾರ್ಹ ಅಪರಾಧವಾಗಿರುತ್ತದೆ. ಅಲ್ಲದೇ ತಿದ್ದುಪಡಿ ಕಾಯ್ದೆ ಕಲಂ 75ರಲ್ಲಿ ಮಕ್ಕಳ ಮಾಹಿತಿಯನ್ನು ಬಹಿರಂಗಪಡಿಸಿದ್ದಲ್ಲಿ ಶಿಕ್ಷೆಗೆ ಒಳಪಡಿಸುವ ಹಾಗೂ ಲೈಂಗಿಕ ಅಪರಾಧಗಳಿಂದ ಮಕ್ಕಳ ಸಂರಕ್ಷಣಾ ಅಧಿನಿಯಮ 2012 ಕಲಂ 23(2)ರಲ್ಲಿಯೂ ಸಹ ಮಕ್ಕಳ ಗುರುತನ್ನು ಬಹಿರಂಗಪಡಿಸುವುದನ್ನು ನಿಷೇಧಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

    ಲೈಂಗಿಕ ಅಪರಾಧಗಳಿಂದ ಮಕ್ಕಳ ಸಂರಕ್ಷಣಾ ಅಧಿನಿಯಮ 2012ರಲ್ಲಿ ಅತ್ಯಾಚಾರ ಎಂಬ ಶಬ್ದದ ಬಳಕೆ ಇರುವುದಿಲ್ಲ; ಅದರ ಬದಲಿಗೆ ಅಧಿನಿಯಮದಲ್ಲಿಯೇ ಲೈಂಗಿಕ ಅಪರಾಧ ಎಂಬ ಪದವನ್ನು ಉಲ್ಲೇಖಿಸಲಾಗಿದೆ ಎಂದು ತಿಳಿಸಿರುವ ಅವರು, ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯಗಳು ನಡೆದ ಸಂದರ್ಭಗಳಲ್ಲಿ ಮಕ್ಕಳಿಗೆ ಸಲ್ಲದ ಶಬ್ದಗಳನ್ನು ಬಳಸದಂತೆ ಹಾಗೂ ಮಕ್ಕಳ ಹೆಸರು, ಭಾವಚಿತ್ರವನ್ನು ಪ್ರಕಟಿಸದಂತೆ ಹಾಗೂ ಮಕ್ಕಳ ಗುರುತುಗಳನ್ನು ತಿಳಿಸುವ ಯಾವುದೇ ವಿವರಗಳನ್ನು ಪ್ರಕಟಿಸಬಾರದು ಎಂದು ತಿಳಿಸಿದ್ದಾರೆ.

    300x250 AD

    ಇಂಥ ಪ್ರಕರಣಗಳಲ್ಲಿ ಮಗುವಿನ ಹೆಸರು ಮತ್ತು ಮಗುವಿನ ಗುರುತು ಹಿಡಿಯಬಹುದಾದ ಯಾವುದೇ ವಿವರಗಳನ್ನು ಪ್ರಕಟಿಸುವುದನ್ನು ನಿಷೇಧಿಸಲಾಗಿದೆ. ಉಲ್ಲಂಘಿಸಿದಲ್ಲಿ 6 ತಿಂಗಳವರೆಗೆ ಶಿಕ್ಷೆ ಮತ್ತು 2 ಲಕ್ಷದವರೆಗೆ ದಂಡ ವಿಧಿಸಲಾಗುತ್ತದೆ ಎಂದು ಅವರು ವಿವರಿಸಿದ್ದಾರೆ.

    Share This
    300x250 AD
    300x250 AD
    300x250 AD
    Leaderboard Ad
    Back to top