Slide
Slide
Slide
previous arrow
next arrow

ವಿದ್ಯುತ್ ಬಿಲ್ ಕಟ್ಟಿಸಿಕೊಳ್ಳುವುದಾಗಿ 3.33 ಲಕ್ಷ ರೂ. ವಂಚಿಸಿದ ಖದೀಮರು!

300x250 AD

ಕಾರವಾರ : ವಿದ್ಯುತ್ ಬಿಲ್ ಕಟ್ಟದೇ ಇದ್ದರೆ ಕರೆಂಟ್ ಕಟ್ ಮಾಡಲಾಗುವುದು ಎಂದು ಭಯ ಹುಟ್ಟಿಸಿ 3.33 ಲಕ್ಷ ಹಣವನ್ನ ಲಪಟಾಯಿಸಿರುವ ಪ್ರಕರಣ ವರದಿಯಾಗಿದೆ.

ಕಾರವಾರ ತಾಲೂಕಿನ ಅರಗಾ ಗ್ರಾಮದ ನೇವಲ್ ಬೇಸ್‌ನಲ್ಲಿ ವಾಸವಾಗಿರುವ ಉತ್ತರ ಪ್ರದೇಶ ಮೂಲದ ರಾಜಕುಮಾರ್ ಹಣ ಕಳೆದುಕೊಂಡ ವ್ಯಕ್ತಿಯಾಗಿದ್ದು, ನಗರದ ಸಿ.ಇ.ಎನ್ ಪೊಲೀಸ್ ಠಾಣೆಯದಲ್ಲಿ ಈ ಸಂಬಂಧ ದೂರು ದಾಖಲು ಮಾಡಿದ್ದಾರೆ.

ರಾಜ್‌ಕುಮಾರ್ ಅವರ ಮೊಬೈಲ್ ನಂಬರಿಗೆ ಅ.16ರಂದು ಅಪರಿಚಿತ ನಂಬರ್ ನಿಂದ ನಿಮ್ಮ ಕರೆಂಟ್ ಬಿಲ್ ಪೆಂಡಿಂಗ್ ಇದ್ದು, ಇಂದು ಪಾವತಿಸಿದೇ ಇದ್ದರೆ ಇಂದು ರಾತ್ರಿ 10.30ಗಂಟೆಗೆ ವಿದ್ಯುತ್ ಸಂಪರ್ಕ ಕಡಿತ ಮಾಡಲಾಗುವುದು ಎಂದು ಮೆಸೇಜ್ ಬಂದಿತ್ತು. ಅಲ್ಲದೇ ಮೊಬೈಲ್ ಸಂಖ್ಯೆಯೊಂದನ್ನ ನೀಡಿ ಎಲೆಕ್ಟ್ರಿಸಿಟಿ ಅಧಿಕಾರಿಯ ನಂಬರ್‌ಗೆ ಸಂಪರ್ಕಿಸುವಂತೆ ತಿಳಿಸಲಾಗಿತ್ತು.
ಮೊಬೈಲ್‌ನಲ್ಲಿ ಬಂದ ಸಂದೇಶವನ್ನ ನಂಬಿದ ರಾಜ್ ಕುಮಾರ್ ಆರೋಪಿತರ ಮೊಬೈಲ್ ಗೆ ಸಂಪರ್ಕಿಸಿದಾಗ, ಟೀಮ್ ವ್ಯೂವರ್ ಮತ್ತು ಆಟೋ ಫಾರ್ವಡ್ ಎಸ್ಎಂಎಸ್ ಟು ಫೋನ್ ಎನ್ನುವ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಲು ತಿಳಿಸಿದ್ದರು. ಬಳಿಕ ಆರೋಪಿತರು ವಾಟ್ಸಪ್ ವಿಡಿಯೋ ಕರೆ ಮಾಡಿ ಡೆಬಿಟ್ ಹಾಗೂ ಕ್ರೆಡಿಟ್ ಕಾರ್ಡ್ಗಳನ್ನ ತೋರಿಸುವಂತೆ ತಿಳಿಸಿದ್ದರು.

300x250 AD

ಅದಾದ ನಂತರ ರಾಜ್ ಕುಮಾರ್ ಅವರ ಎಸ್ಬಿಐ ಡೆಬಿಟ್ ಕಾರ್ಡಿನಿಂದ 14,165 ರೂ., ಆಕ್ಸಿಸ್ ಬ್ಯಾಂಕ್ ಡೆಬಿಟ್ ಕಾರ್ಡಿನಿಂದ 99,109 ಹಾಗೂ ಕ್ರೆಡಿಟ್ ಕಾರ್ಡಿನಿಂದ 2,19,985 ಸೇರಿ ಒಟ್ಟು 3,33,259 ರೂ. ಹಣವನ್ನ ಲಪಟಾಯಿಸಿದ್ದಾರೆ. ಈ ಬಗ್ಗೆ ಹಣ ಕಳೆದುಕೊಂಡವರು ಸಿ.ಇ.ಎನ್ ಪೊಲೀಸ್ ಠಾಣೆಯಲ್ಲಿ ದೂರನ್ನ ನೀಡಿದ್ದು, ಪ್ರಕರಣ ದಾಖಲಿಸಿಕೊಂಡು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Share This
300x250 AD
300x250 AD
300x250 AD
Back to top