• Slide
    Slide
    Slide
    previous arrow
    next arrow
  • ಯೋಜನೆಯ ಲಾಭ ತಲುಪಿಸುವಲ್ಲಿ ಅಧಿಕಾರಿಗಳು ವಿಫಲ:ಸ್ಪೀಕರ್ ಕಾಗೇರಿ

    300x250 AD

    ಶಿರಸಿ: ಯಾವುದೇ ಸರಕಾರದ ಯೋಜನೆಗಳು ಗುಣಮಟ್ಟದ್ದಾಗಿರುತ್ತದೆ. ಆದರೆ ಅಧಿಕಾರಿಗಳು ಸಮಾಜದ ಕಟ್ಟಕಡೆಯ ವ್ಯಕ್ತಿಗಳಿಗೆ ಯೋಜನೆಯ ಲಾಭ ತಲುಪಿಸುವಲ್ಲಿ ವಿಫಲರಾಗುತ್ತಿದ್ದಾರೆಂದು ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ತಿಳಿಸಿದರು.

    ಅವರು ಮಂಗಳವಾರ ರಾಘವೇಂದ್ರ ಕಲ್ಯಾಣ ಮಂಟಪದಲ್ಲಿ ಏರ್ಪಡಿಸಲಾಗಿದ್ದ ಹೋಬಳಿ ಮಟ್ಟದ ಫಲಾನುಭವಿಗಳ ಸಭೆಯಲ್ಲಿ ವಿವಿಧ ಬಗೆಯ 256 ಫಲಾನುಭವಿಗಳಿಗೆ ಹಕ್ಕುಪತ್ರ ವಿತರಿಸಿ ಮಾತನಾಡಿದರು. ಸರಕಾರವು ಜನರ ಒಂದು ಭಾಗವಾಗಿ ಹುಟ್ಟಿನಿಂದ ಸಾವಿನವರೆಗೂ ಜನರ ಕಾಳಜಿಯನ್ನು ಮಾಡುತ್ತಿದೆ. ಅದಕ್ಕಾಗಿ ಹಲವಾರು ಯೋಜನೆಗಳನ್ಬು ಜಾರಿಗೆ ತಂದು ಸಂಸಾರದ ಭಾರವನ್ನು ಕಡಿಮೆ ಮಾಡುತ್ತಿದೆ. ಆದರೆ ನೈಜ ಫಲಾನುಭವಿಗಳಿಗೆ ಸರಕಾರದ ಪ್ರಯೋಜನ ಸರಿಯಾಗಿ ತಲುಪುತ್ತಿಲ್ಲ ಎನ್ನುವುದೇ ಬೇಸರದ ಸಂಗತಿಯಾಗಿದೆ ಎಂದರು.

    ಪ್ರಧಾನಿ ನರೆಂದ್ರ ಮೋದಿಯವರು ಪಿಎಮ್ ಕಿಸಾನ್ ಯೋಜನೆಯಲ್ಲಿ ತಾಲೂಕಿನ 11 ಸಾವಿರ ರೈತರ ಖಾತೆಗಳಿಗೆ ಒಟ್ಟೂ 2.20 ಕೋಟಿ ರೂ. ನೇರವಾಗಿ ಜಮಾ ಮಾಡಿದೆ. ಹೀಗೆ ಸರಕಾರದಿಂದ ವಿಧವಾ ವೇತನ, ಅಂಗವಿಕಲ ವೇತನ, ಹಿರಿಯ ನಾಗರಿಕರಿಗೆ ವೇತನ, ಸತ್ತರೆ ಅಂತ್ಯಸಂಸ್ಕಾರಕ್ಕಾಗಿ ಹಣ, ಶಿಕ್ಷಣಕ್ಕಾಗಿ ಸ್ಕಾಲರ್‌ಶಿಪ್, ಉದ್ಯೋಗಕ್ಕಾಗಿ ಉದ್ಯೋಗ ಖಾತ್ರಿ ಯೋಜನೆ, ಮಕ್ಕಳಿಗೆ ಪಠ್ಯಪುಸ್ತಕ, ಸಮವಸ್ತ್ರ, ಶೂ, ಪಡಿತರ ಹೀಗೆ ಹಲವಾರು ಯೋಜನೆಗಳು ಜನರಿಗಾಗಿ ತಂದಿದೆ. ಇದರ ಪ್ರಯೋಜನವನ್ನು ಬಿಪಿಎಲ್‌ದಾರರು ಸರಿಯಾಗಿ ಪಡೆದುಕೊಳ್ಳಬೇಕು ಎಂದರು.

    300x250 AD

    ಉಪವಿಭಾಗಾಧಿಕಾರಿ ದೇವರಾಜ ಆರ್., ತಹಸೀಲ್ದಾರ ಶ್ರೀಧರ ಮುಂದಲಮನಿ, ತಾ.ಪಂ ಕಾರ್ಯನಿರ್ವಹಣಾಧಿಕಾರಿ ದೇವರಾಜ ಹಿತ್ಲಮಕ್ಕಿ ಇತರರಿದ್ದರು.

    Share This
    300x250 AD
    300x250 AD
    300x250 AD
    Leaderboard Ad
    Back to top