Slide
Slide
Slide
previous arrow
next arrow

ನ.15 ರಂದು ಏಕಕಾಲಕ್ಕೆ 31 ಜಿಲ್ಲೆಗಳಲ್ಲಿ ನಾಟಕ ಪ್ರದರ್ಶನ

300x250 AD

ಸಿದ್ದಾಪುರ: ಶ್ರೀ ಶಿವಕುಮಾರ ಕಲಾ ಸಂಘ ಸಾಣೆಹಳ್ಳಿ, ಚಿತ್ರದುರ್ಗ ಶಿವಸಂಚಾರ ಬೆಳ್ಳಿ ಹಬ್ಬದ ಪ್ರಯುಕ್ತ ಕರ್ನಾಟಕದ 31 ಜಿಲ್ಲೆಗಳಲ್ಲಿ ಬಸವಾದಿ ಶರಣರ ದರ್ಶನ ನಾಟಕ ತರಬೇತಿಯು ಅ. 15 ರಿಂದ ಪ್ರಾರಂಭವಾಗಿದ್ದು ನವೆಂಬರ್ 15ರ ವರೆಗೆ ನಡೆಯಲಿದೆ. ನವೆಂಬರ್ 15 ರಂದು ಏಕಕಾಲದಲ್ಲಿ 31 ಜಿಲ್ಲೆಗಳಲ್ಲಿ ನಾಟಕ ನಡೆಯಲಿದೆ ಎಂದು ಓಡ್ಡೋಲಗದ ಗಣಪತಿ ಹೆಗಡೆ ಹಿತ್ಲಕೈ ಸಿದ್ದಾಪುರ ಇವರು ಪ್ರಸ್ತಾಪಿಸಿದರು.

ವಚನ ವಾಚನದ ಮುಖಾಂತರ ವಿ. ಎಂ. ಹೆಗಡೆ ಕಬ್ಬೆ ಇವರು ತಮ್ಮ ರಂಗ ಅನುಭವವನ್ನು ಹಂಚಿಕೊಂಡರು. ಶಿಬಿರ ನಿರ್ದೇಶಕರಾದ ಚಂದ್ರು ಉಡುಪಿಯವರು ಮಾತನಾಡಿ ರಂಗ ತರಬೇತಿ ಅವಶ್ಯಕತೆ ಬಗ್ಗೆ ಮತ್ತು ಅದು ಬೆಳೆದು ಬಂದ ದಾರಿಯ ಬಗ್ಗೆ ತಿಳಿಸಿ ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಮೋಹನ ಆಚಾರಿಯವರು ಈಗಿನ ಮಕ್ಕಳು ಮೊಬೈಲ್ ಯುಗದಿಂದ ಹೊರಬಂದು ಇಂತಹ ಶಿಬಿರಗಳಲ್ಲಿ ಪಾಲ್ಗೊಂಡು ತಮ್ಮ ಮುಂದಿನ ಸಾಮಾಜಿಕ ಜೀವನದಲ್ಲಿ ಮುನ್ನಡೆಯಬೇಕೆಂದು ತಿಳಿಸಿದರು. ಓಡ್ಡೋಲಗದ ಹಿತ್ಲಕೈ ಸಿದ್ದಾಪುರ, ಕನ್ನಡ ಸಾಹಿತ್ಯ ಪರಿಷತ್ತು ಶಿರಸಿ ತಾಲೂಕು ಘಟಕ, ಶ್ರೀ ಮಾರಿಕಾಂಬಾ ಗೆಳೆಯರ ಬಳಗ ಸಹಯೋಗದಲ್ಲಿ ಕಾರ್ಯಾಗಾರ ನಡೆಯಲಿದೆ. ಕಾರ್ಯಕ್ರಮವನ್ನು ಪ್ರಶಾಂತ ಎಸ್. ರೇವಣಕರ್ ನಿರೂಪಿಸಿದರು.ನವೆಂಬರ್ 15 ರಂದು ನಾಟಕ ಪ್ರದರ್ಶನ ನೆರವೇರಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

300x250 AD
Share This
300x250 AD
300x250 AD
300x250 AD
Back to top