• Slide
    Slide
    Slide
    previous arrow
    next arrow
  • ಸಿರಸಿಯಲ್ಲಿ ಜಿಲ್ಲಾಮಟ್ಟದ ಚುಟುಕು ಕವಿಗೋಷ್ಠಿ

    300x250 AD

    ಶಿರಸಿ: ಕರ್ನಾಟಕ ಚುಟುಕು ಸಾಹಿತ್ಯ ಪರಿಷತ್ತು ಶೈಕ್ಷಣಿಕ ಜಿಲ್ಲೆ ಶಿರಸಿ ಘಟಕ ಮತ್ತು ನಯನ ಪೌಂಡೇಶನ್ ಸಹಯೋಗದೊಂದಿಗೆ ಕರ್ನಾಟಕ ಚುಟುಕು ಸಾಹಿತ್ಯ ಪರಿಷತ್ತಿನ ದಶಮಾನೋತ್ಸವ ಅಂಗವಾಗಿ ಜಿಲ್ಲಾ ಮಟ್ಟದ ವಿಚಾರ ಗೋಷ್ಠಿ ಹಾಗೂ ಚುಟುಕು ಕವಿ ಗೋಷ್ಠಿ ಕಾರ್ಯಕ್ರಮವನ್ನು ನಯನ ಸಭಾಂಗಣದಲ್ಲಿ ಆಯೋಜಿಸಲಾಗಿತ್ತು.

    ಸಮಾರಂಭದ ಸರ್ವಾದ್ಯಕ್ಷರಾಗಿ ಪಾರಂಪರಿಕ ನಾಟಿ ವೈದ್ಯ, ಸಾಹಿತಿಗಳೂ ಆದ ಮಂಜುನಾಥ ಹೆಗಡೆ ಹುಡ್ಲಮನೆ, ಅಧ್ಯಕ್ಷತೆಯನ್ನು ಜಿಲ್ಲಾಧ್ಯಕ್ಷ ಮಹೇಶ್‌ಕುಮಾರ್ ಹನಕೆರೆ ವಹಿಸಿದ್ದರು. ಉದ್ಘಾಟಕರಾಗಿ ಹಿರಿಯ ಸಾಹಿತಿ, ಕಥೆಗಾರ ಡಿ.ಎಸ್.ನಾಯ್ಕ, ಗೌರವ ಉಪಸ್ಥಿತಿಯಲ್ಲಿ ಚುಟುಕು ಸಾಹಿತ್ಯ ಪರಿಷತ್ತಿನ ರಾಜ್ಯ ಸಂಚಾಲಕ ಕೃಷ್ಣಮೂರ್ತಿ ಕುಲಕರ್ಣಿ, ಹಿರಿಯ ಸಾಹಿತಿ ಭಾಗೀರತಿ ಹೆಗಡೆ, ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಎಸ್.ಹೆಗಡೆ, ಜಿ.ವಿ.ಕೊಪ್ಪಲತೋಟ, ಕರ್ನಾಟಕ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ ವೇಣುಗೋಪಾಲ ಮದ್ಗುಣಿಯವರು ಆಗಮಿಸಿದ್ದರು.

    ವಿಚಾರಗೋಷ್ಠಿ ಅಧ್ಯಕ್ಷರಾಗಿ ಮಾಜಿ ಕಸಾಪ ಅಧ್ಯಕ್ಷ ಮನೋಹರ ಮಲ್ಮನೆಯವರು ವಹಿಸಿದ್ದರೆ, ಆಶಯನುಡಿಯನ್ನು ಹಿರಿಯ ಸಾಹಿತಿ, ತಾಳಮದ್ದಳೆ ಅರ್ಥದಾರಿಗಳು ಆದ ಗಣಪತಿ ಭಟ್ ವರ್ಗಾಸರ ಆಡಿದರು. ಗೌರವ ಉಪಸ್ಥಿತಿಯ ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಅಧ್ಯಕ್ಷೆ ಶಿವಲೀಲಾ ಹುಣಸಗಿ ಸಮಯೋಚಿತ ಮಾತನಾಡಿದರು. ವಿಷಯ ಮಂಡನೆಯಲ್ಲಿ ಡಾ.ನವೀನ್ ಕುಮಾರ್ ಎ.ಜೆ., ಎಚ್.ಗಣೇಶ್ ಮತ್ತು ರಮೇಶ್ ಹೆಗಡೆ ಕೆರೇಕೊಣ ಭಾಗವಹಿಸಿ ಮಾತನಾಡಿದರು. ಹಿರಿಯ ಸಾಹಿತಿ, ತಾಳಮದ್ದಳೆಯ ಅರ್ಥದಾರಿ ಡಾ.ಜಿ.ಎ.ಹೆಗಡೆ ಸೋಂದಾ ಚುಟುಕು ಕವಿಗೋಷ್ಠಿಯ ಅಧ್ಯಕ್ಷತೆ ವಹಿಸಿದ್ದರು. ಆಶಯ ನುಡಿಯನ್ನು ಸಾಹಿತಿ ದಾಕ್ಷಾಯಿಣಿ ಪಿ.ಸಿ. ಆಡಿದರು. ಕವಿಗೋಷ್ಠಿಯಲ್ಲಿ 35ಕ್ಕೂ ಹೆಚ್ಚು ಕವಿಗಳು ಭಾಗವಹಿಸಿ ಕಾರ್ಯಕ್ರಮ ಚೆಂದಗಾಣಿಸಿಕೊಟ್ಟರು.

    300x250 AD

    ಹಿರಿಯ ಸಾಹಿತಿಗಳಾದ ಜಗದೀಶ್ ಭಂಡಾರಿ, ಎಸ್.ಎಸ್.ಭಟ್, ಎಚ್.ಆರ್.ಅಮರನಾಥ, ಕೆ.ಮಹೇಶ್, ಸಾಮಾಜಿಕ ಕಾರ್ಯಕರ್ತ ಮಹಾದೇವ ಛಲವಾದಿ, ನಿವೃತ್ತ ಶಿಕ್ಷಕ ಎ.ರಾಮ್ ಭಟ್, ಪತ್ರಕರ್ತ ಶಿವಪ್ರಸಾದ ಹಿರೇಕೈ ಹಾಜರಿದ್ದು ಸಮಯೋಚಿತ ಮಾತನಾಡಿದರು.

    Share This
    300x250 AD
    300x250 AD
    300x250 AD
    Leaderboard Ad
    Back to top