• Slide
    Slide
    Slide
    previous arrow
    next arrow
  • ಮಾಸದ ಮಾತು: ‘ದಿ ಗೋಡೆಸ್ ಸ್ಪೀಕ್ಸ್’ ನಾಟಕ ಅವಲೋಕನ

    300x250 AD

    ಶಿರಸಿ: ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ ತಾಲೂಕು ಘಟಕ, ವಾಸ್ತವ ವಾರ್ತೆ ಸೇವಾ ವಾಹಿನಿ, ನೆಮ್ಮದಿ ಓದುಗರ ಬಳಗ ಮತ್ತು ಅಖಿಲ ಭಾರತೀಯ ಸಾಹಿತ್ಯ ಪರಿಷತ್ ಜಿಲ್ಲಾ ಘಟಕಗಳ ಸಂಯುಕ್ತಾಶ್ರಯದಲ್ಲಿ ‘ಮಾಸದ ಮಾತು’ ಕಾರ್ಯಕ್ರಮದಲ್ಲಿ ಬಹುಭಾಷಾ ಕವಿಗೋಷ್ಠಿ ಮತ್ತು ಪುಸ್ತಕ ಅವಲೋಕನ ನೆಮ್ಮದಿ ಕುಟೀರದಲ್ಲಿ ನಡೆಯಿತು.

    ದೇವೀ ಉವಾಚ (ನಾಟಕ) ಕನ್ನಡಾನುವಾದ ಪ್ರೊ.ಎಚ್.ಆರ್.ಅಮರನಾಥ ಮೂಲಕೃತಿ ‘ದಿ ಗೋಡೆಸ್ ಸ್ಪೀಕ್ಸ್’ ನಾಟಕವನ್ನು ಮುಕ್ತಕ ಕವಿ ಕೃಷ್ಣ ಪದಕಿ ಅವರಿಂದ ಅವಲೋಕಿಸಲಾಯಿತು. ಸ್ವಾತಂತ್ರ‍್ಯದ ಅನಂತರ ಘಟನೆಗಳನ್ನು ಒಂದು ಪುತ್ಥಳಿ ಅನಾವರಣವನ್ನು ಪ್ರತಿಮಾ ರೂಪಕವಾಗಿ ಬಳಸಿಕೊಂಡು ದೇಶ ವಿಭಜನೆಗೊಂಡ ಐತಿಹಾಸಿಕ ಘಟನೆಯ ಹಿನ್ನೆಲೆಯಲ್ಲಿ ನಡೆದ ನಾಟಕೀಯ ಸಂಭಾಷಣೆಗಳನ್ನು ಒಳಗೊಂಡ ಕೃತಿ ಇದಾಗಿದ್ದು, ವಾಸ್ತವಿಕ ನೆಲೆಯಲ್ಲಿ ಭವಿಷ್ಯತ್ತಿನ ಚಿಂತನೆ ಮಾಡಿದ ಕೃತಿ ಎಂದೆನಿಸಿಕೊಂಡಿದೆ. ಪ್ರೊ.ಎಚ್.ಆರ್.ಅಮರನಾಥ ಅವರು ದೇವಿ ಉವಾಚ ಎಂಬ ಶಿರೋನಾಮೆಯೊಂದಿಗೆ ಕೃತಿಯ ಮೂಲ ಆಶಯಕ್ಕೆ ಚ್ಯುತಿಯಾಗದಂತೆ ಸಮರ್ಥವಾಗಿ ಅನುವಾದಿಸಿದ್ದಾರೆ ಎಂದು ನುಡಿದರು.

    ಅ.ಭಾ.ಸಾ.ಪ.ಅಧ್ಯಕ್ಷ ಡಿ.ಎಸ್.ನಾಯ್ಕ ಮಾತನಾಡಿ, ವಿ.ಕೃ.ಗೋಕಾಕರು ‘ವಿನಾಯಕ’ ಎಂಬ ಕಾವ್ಯನಾಮದಲ್ಲಿ ಬರೆಯುತ್ತಿದ್ದರು. ಅವರ ಸಮರಸವೇ ಜೀವನ ಬೃಹತ್ ಕಾದಂಬರಿ ಇಂದಿಗೂ ಸಾಹಿತ್ಯದ ಅಮೂಲ್ಯ ಕೃತಿಯಾಗಿಯೇ ಉಳಿದು ಅಧ್ಯಯನಕ್ಕೆ ಅರ್ಹವಾಗಿದೆ ಎಂದು ನುಡಿದರಲ್ಲದೆ, ‘ಭಾರತ ಸಿಂಧು ರಶ್ಮಿ’ ಹೊತ್ತಗೆಗೆ ಜ್ಞಾನಪೀಠ ಪ್ರಶಸ್ತಿ ಪುರಸ್ಕಾರ ದೊರೆತಿರುವುದನ್ನು ಸ್ಮರಿಸಿದರು.

    300x250 AD

    ಹಿರಿಯ ಕವಯತ್ರಿ ಶೋಭಾ ಭಟ್ಟ ವೇದಿಕೆಯಲ್ಲಿ ಉಪಸ್ಥಿತರಿದ್ದರು. ನಿರೂಪಣೆ ಮತ್ತು ಸ್ವಾಗತ ರೋಹಿಣಿ ಹೆಗಡೆ, ವಂದನಾರ್ಪಣೆ ಪ್ರತಿಭಾ ಎಂ.ನಾಯ್ಕ, ಪ್ರಾರ್ಥನೆ ವಿಮಲಾ ಭಾಗ್ವತ್ ನೆರವೇರಿಸಿದರು. ಜಲಜಾಕ್ಷಿ ಶೆಟ್ಟಿ, ವಿಮಲಾ ಭಾಗ್ವತ್, ಶೋಭಾ ಭಟ್, ದಾಕ್ಷಾಯಿಣಿ ಪಿ.ಸಿ., ಅಚಲಾ ಬಿಳಗಿ, ಅಜಿತಾ ಬಿಳಗಿ, ರೋಹಿಣಿ ಹೆಗಡೆ, ಮಂಜುಳಾ ಅಮರನಾಥ್, ಡಿ.ಎಸ್.ಭಟ್, ಜಯಪ್ರಕಾಶ್ ಹಬ್ಬು, ವಾಸುದೇವ ಶಾನಭಾಗ್, ಮಹೇಶ್ ಹನಕೆರೆ, ದೇವಿದಾಸ್.ಡಿ.ನಾಯಕ್, ಗೋಪಾಲಕೃಷ್ಣ ಹೆಗಡೆ, ಉಮೇಶ್ ದೈವಜ್ಞ ಮುಂತಾದ ಕವಿಗಳು ತಮ್ಮ ಸ್ವರಚಿತ ಕವನಗಳನ್ನು ವಾಚಿಸಿದರು.

    Share This
    300x250 AD
    300x250 AD
    300x250 AD
    Leaderboard Ad
    Back to top